ಅನಿಮೆಟೆಡ್ ಪತ್ತೆದಾರಿ ಸೀರಿಯಲ್ ನಿರ್ಮಿಸುತ್ತಿದ್ದಾರೆ ಧೋನಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಏ.7-ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ಕ್ಯಾಪ್ಟನ್7 ಹೆಸರಿನ ಅನಿಮಿಟೆಡ್ ಸೀರಿಯಲ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ.ಧೋನಿ ಹಿನ್ನೆಲೆಯನ್ನಾಧರಿಸಿ ಪತ್ತೆದಾರಿ ಸೀರಿಯಲ್ ನಿರ್ಮಿಸಲಾಗುತ್ತಿದ್ದು, ಮೊದಲ ಹಂತದ ಪ್ರೀ ಪ್ರೊಡಕ್ಷನ್ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ. ಏಕ ದಿನ ಪಂದ್ಯಗಳಲ್ಲಿ ಧೋನಿ ಧರಿಸುತ್ತಿದ್ದ ಜರ್ಸಿ ನಂಬರ್ 7 ಆಗಿತ್ತು. ಹೀಗಾಗಿ ಕ್ಯಾಫ್ಟನ್ 7 ಹೆಸರಿನಲ್ಲಿ ಸೀರಿಯಲ್ ನಿರ್ಮಾಣವಾಗುತ್ತಿದೆ ಎಂದು ತಿಳಿದು ಬಂದಿದೆ.

ಮಹೇಂದ್ರ ಸಿಂಗ್ ಧೋನಿ ಮತ್ತು ಪತ್ನಿ ಸಾಕ್ಷಿ ಒಡೆತನದ ಸಂಸ್ಥೆಗಳ ಮಾಲೀಕತ್ವದಲ್ಲಿ ಈ ಸಿರಿಯಲ್ ತಯಾರಾಗುತ್ತಿದೆ. ಅನಿಮೆಟೆಡ್ ಪತ್ತೆದಾರಿ ಆಧಾರಿತ ಸೀರಿಯಲ್‍ನ ಮೊದಲ ಕಂತು 2022ರಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಗಳಿವೆ. ಕ್ರಿಕೆಟ್ ನಂತರ ನನ್ನ ಜೀವನ ಮತ್ತೊಂದು ಮಗುಲಿಗೆ ಬದಲಾಗುತ್ತಿದೆ. ಸೀರಿಯಲ್‍ನ ಕತೆ ಅದ್ಭುತವಾಗಿದೆ ಎಂದು ಧೋನಿ ಬಣ್ಣಿಸಿದ್ದಾರೆ.

Facebook Comments