ಚಿರು ಅಗಲಿಕೆಯ ನೋವಲ್ಲಿರುವ ಸರ್ಜಾ ಫ್ಯಾಮಿಲಿಗೆ ಕೊರೋನಾ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಚಿರು ಅವರ ಅಗಲಿಕೆಯ ನೋವಲ್ಲಿರುವ ಸರ್ಜಾ ಫ್ಯಾಮಿಲಿಗೆ ಕೊರೋನಾ ಮತ್ತೊಂದು ಶಾಕ್ ನೀಡಿದೆ. ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಈ ಕುರಿತು ಖುದ್ದು ಧ್ರುವ ಸರ್ಜಾ ಅವರೇ ಟ್ವಿಟ್ ಮಾಡಿ ಖಚಿತಪಡಿಸಿದ್ದು ಕೋವಿಡ್-19 ಆಸ್ಪತ್ರೆಗೆ ದಾಖಲಾಗಿ ತಾವು ಮತ್ತು ಪತ್ನಿ ಪ್ರೇರಣ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ನಾನು ಮತ್ತು ಪತ್ನಿ ಕೋವಿಡ್ ಪರೀಕ್ಷೆ ಮಾಡಿಕೊಂಡಿದ್ದು ವರದಿಯಲ್ಲಿ ಪಾಸಿಟಿವ್ ಬಂದಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದು ಶೀಘ್ರವೇ ಗುಣಮುಖರಾಗುವ ವಿಶ್ವಾಸವಿದೆ. ಇದೀಗ ಸ್ವಲ್ಪ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದೆ.

ನಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಧ್ರುವ ಸರ್ಜಾ ಅವರ ಅಣ್ಣ ಚಿರಂಜೀವಿ ಸರ್ಜಾ ಇತ್ತೀಚೆಗೆ ಮೃತಪಟ್ಟಿದ್ದರು. ಈ ವೇಳೆ ಎಲ್ಲ ಕಾರ್ಯವನ್ನೂ ಸ್ವತಃ ಧ್ರುವ ಸರ್ಜಾ ಅವರೇ ಮುಂದೆ ನಿಂತು ಮಾಡಿದ್ದರು. ಇವರ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಹಲವು ಗಣ್ಯರು ಮನೆಗೂ ಭೇಟಿ ನೀಡಿದ್ದನ್ನು ಇದೇ ವೇಳೆ ಸ್ಮರಿಸಬಹದು.

Facebook Comments

Sri Raghav

Admin