ಹಳ್ಳಿ ಹಕ್ಕಿ ಕಿಚಾಯಿಸಿದ ಧೃವನಾರಾಯಣ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.19- ಹುಣಸೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ವಿಶ್ವನಾಥ್ ಹಾಗೂ ಮಾಜಿ ಸಂಸದ ಧೃವನಾರಾಯಣ್ ಭೇಟಿಯಾಗಿ ಪರಸ್ಪರ ಕಿಚಾಯಿಸಿಕೊಂಡ ಘಟನೆ ನಡೆಯಿತು. ನಗರದ ಕೊಲಂಬಿಯಾ ಆಸ್ಪತ್ರೆಯಲ್ಲಿರುವ ಶಾಸಕ ತನ್ವೀರ್‍ ಸೇಠ್ ಅವರ ಆರೋಗ್ಯ ವಿಚಾರಿಸಲು ಅಲ್ಲಿಗೆ ತೆರಳಿದ್ದ ವಿಶ್ವನಾಥ್ ಅವರು ಹಿಂದಿರುಗಿ ಬರುವ ವೇಳೆ ಧೃವನಾರಾಯಣ್ ಭೇಟಿಯಾದರು.

ಈ ವೇಳೆ ಧೃವನಾರಾಯಣ್ ನಾನು ನಿಮಗೆ ಕಾಂಗ್ರೆಸ್ ಪಕ್ಷ ಬಿಡದಂತೆ ಮನವಿ ಮಾಡಿದ್ದೆ. ಆದರೂ ನೀವು ಬಿಟ್ಟು ಹೋದಿರಿ ಎಂದಾಗ, ವಿಶ್ವನಾಥ್ ಅವರು, ನಾನು ಕಾಂಗ್ರೆಸ್ ಬಿಡಲಿಲ್ಲ. ಸಿದ್ದರಾಮಯ್ಯ ಬಿಡಿಸಿದರು ಎಂದು ಹೇಳಿದರು. ನಂತರ ವಿಶ್ವನಾಥ್ ಕಾಂಗ್ರೆಸ್ ಸಿದ್ದರಾಮಯ್ಯ ನವರ ಪಕ್ಷವಲ್ಲವೇ ಎಂದು ಕಿಚಾಯಿಸಿದರು.

Facebook Comments