ಕೊರೊನ ಮಹಾಮಾರಿಗೆ ಇಬ್ಬರು ಚಿನ್ನಾಭರಣ ಉದ್ಯಮಿಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಜು.6- ಪಾರ್ಟಿ ಮಾಡಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ಚಿನ್ನಾಭರಣ ಉದ್ಯಮಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಂದು ಇಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ವಜ್ರಾಭರಣ ಉದ್ಯಮಿಯೊಬ್ಬರು ಕಳೆದ ಎರಡು ವಾರಗಳ ಹಿಂದೆ ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಔತಣ ಕೂಟ ಏರ್ಪಡಿಸಿದ್ದರು. ಅದರಲ್ಲಿ 150ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಕಳೆದ ಒಂದು ವಾರದಿಂದ ಹಲವರಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿದ್ದು, ಕೋವಿಡ್ ಪರೀಕ್ಷೆಯನ್ನೂ ಕೂಡ ನಡೆಸಲಾಗಿದೆ. ಇದರ ನಡುವೆ ಇಂದು ಇಬ್ಬರು ವಜ್ರ ಆಭರಣದ ಉದ್ಯಮಿಗಳು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಲ್ಲಿ ಈವರೆಗೆ 11 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಹಲವರಲ್ಲಿ ಭೀತಿ ಆವರಿಸಿದ್ದು, ವಿವಿಧ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Facebook Comments