‘ಬೇಗ ಬನ್ರೋ, ತುಂಬಿಸ್ಕೊಲ್ರೋ’ : ಪುಕ್ಸಟ್ಟೆ ಡೀಸೆಲ್ ಮುಗಿಬಿದ್ದ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಭಟ್ಕಳ, ಜೂ.3- ಹೊನ್ನಾವರದ ಟರ್ನೆಮಿಕ್ಕಿ ಬಳಿ ಡೀಸೆಲ್ ತುಂಬಿದ ಟ್ಯಾಂಕರ್ ಅಪಘಾತಕ್ಕೀಡಾದ ಪರಿಣಾಮ ಸೋರಿಕೆಯಾದ ತೈಲ ತುಂಬಿಸಿಕೊಳ್ಳಲು ಜನರು ಮುಗಿ ಬಿದ್ದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ತಿರುವಿನಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ ತೈಲ ಸೋರಿಕೆಯಾಗಿದ್ದನ್ನು ಗಮನಿಸಿದ ಗ್ರಾಮಸ್ಥರು ತಪ್ಪಲೆ, ಬಿಂದಿಗೆ, ಬಕೆಟ್‍ಗಳನ್ನು ತಂದು ಡೀಸೆಲ್ ಅನ್ನು ತುಂಬಿಕೊಂಡು ಹೋಗುತ್ತಿದ್ದರು.

ಮಾಹಿತಿ ಹಬ್ಬುತ್ತಿದ್ದಂತೆಯೇ ತಂಡೋಪತಂಡವಾಗಿ ಜನರು ಬಂದು ತೈಲ ತುಂಬಿಕೊಳ್ಳಲು ಮುಗಿ ಬಿದ್ದ ಹಿನ್ನೆಲೆಯಲ್ಲಿ ತಳ್ಳಾಟ, ನೂಕಾಟ ಕೂಡ ನಡೆಯಿತು.  ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ದೂರ ಸರಿಸಿ ಯಾವುದೇ ಅನಾಹುತವಾಗದಂತೆ ಅಗ್ನಿಶಾಮಕ ಪಡೆಯನ್ನು ಕರೆಸಿದರು.

ತುರ್ತು ಕ್ರಮ ಕೈಗೊಂಡ ಅಗ್ನಿಶಾಮಕ ಸಿಬ್ಬಂದಿಗಳು ಟ್ಯಾಂಕರ್‍ನಲ್ಲಿ ಆಗಿದ್ದ ರಂಧ್ರವನ್ನು ಮುಚ್ಚಿ ತೈಲ ಸೋರಿಕೆಯನ್ನು ತಡೆದಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin