ಎನ್‌ಆರ್‌ಸಿಗೆ ಬಿಜೆಪಿ ಬದ್ಧ, 1 ಕೋಟಿಗೂ ಹೆಚ್ಚು ಅಕ್ರಮ ಬಾಂಗ್ಲಾ ವಾಸಿಗಳನ್ನು ವಾಪಸ್ ಕಳುಹಿಸಬಹುದು

ಈ ಸುದ್ದಿಯನ್ನು ಶೇರ್ ಮಾಡಿ

ಬಸ್ರತ್, ಜ.20- ಉದ್ದೇಶಿತ ದೇಶದ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಸ್ತರಣೆಗೆ ಸರ್ಕಾರ ಬದ್ಧವಾದರೆ ಬಂಗಾಳದಲ್ಲಿನ 1 ಕೋಟಿಗೂ ಹೆಚ್ಚು ಅಕ್ರಮ ಬಾಂಗ್ಲಾ ದೇಶೀಯರನ್ನು ವಾಪಸ್ ಕಳುಹಿಸಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಉತ್ತರ 24 ಪರಗಣ ಜಿಲ್ಲಾಯಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವುದು ಅಖಂಡ ಭಾರತ ಹಾಗೂ ಬಂಗಾಳಕ್ಕೆ ವಿರುದ್ಧವಾಗಿದೆ ಎಂದರು. ರಾಜ್ಯದಲ್ಲಿ 1 ಕೋಟಿ ಅಕ್ರಮ ಮುಸ್ಲಿಂರಿಗೆ ಸರ್ಕಾರ ಕೆಜಿಗೆ 2 ರೂ.ನಂತೆ ರಿಯಾಯಿತಿ ದರದಲ್ಲಿ ಅಕ್ಕಿ ನೀಡಲಾಗುತ್ತಿದೆ. ಅಂತಹವರನ್ನು ಮರಳಿ ಅವರ ರಾಷ್ಟ್ರಕ್ಕೆ ವಾಪಸ್ ಕಳುಹಿಸಬಹುದು ಎಂದು ಹೇಳಿದರು.

ಬಾಂಗ್ಲಾ ದೇಶದ ಮುಸ್ಲಿಂರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಹಿಂದೂ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಏಕೆ ವಿರೋಧಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಸಿಎಎ ವಿರೋಧಿಗಳು, ಬಂಗಾಳ ಅಥವಾ ಭಾರತದ ವಿರೋಧಿಗಳು ಎಂದರು.

Facebook Comments