ಕೊರೊನಾದಿಂದ ಬಾಲಿವುಡ್ ನಟ ದಿಲೀಪ್‍ಕುಮಾರ್ ಸಹೋದ ಅಸ್ಲಾಂ ಖಾನ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಆ.21- ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಬಾಲಿವುಡ್‍ನ ಹಿರಿಯ ನಟ ದಿಲೀಪ್‍ಕುಮಾರ್ ಅವರ ಸೋದರ ಅಸ್ಲಾಂ ಖಾನ್ ಇಂದು ಬೆಳಗ್ಗೆ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ದಿಲೀಪ್‍ಕುಮಾರ್ ಸೋದರ ಅಸ್ಲಾಂಖಾನ್(88)ಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದರಿಂದ ಕಳೆದ ಕೆಲವು ದಿನಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ವೈದ್ಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಸ್ಲಾಂಖಾನ್ ಅವರು ಮಧುಮೇಹ, ಅಕ ರಕ್ತದೊತ್ತಡ, ರಕ್ತಕೊರತೆ ಹಾಗೂ ಹೃದಯ ಸಂಬಂ ಕಾಯಿಲೆಯಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಡಾ.ಜಲೀಲ್ ಪಾರ್ಕರ್ ಸುದ್ದಿಗಾರರಿಗೆ ವಿವರಿಸಿದ್ದಾರೆ.

ಇಸ್ಲಾಂಖಾನ್‍ರ ಸಾವಿನ ಸುದ್ದಿಯನ್ನು ದಿಲೀಪ್‍ಕುಮಾರ್‍ರ ವಕ್ತಾರ ಫೈಸಲ್ ಫಾರೂಕಿ ತಮ್ಮ ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ದಿಲೀಪ್‍ಕುಮಾರ್‍ರ ಸಹೋದರರಾದ ಅಸ್ಲಂಖಾನ್ , ಇಶಾನ್‍ರನ್ನು ಕಳೆದ ಶನಿವಾರ ಚಿಕಿತ್ಸೆಗೆಂದು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Facebook Comments

Sri Raghav

Admin