ಬಾಲಿವುಡ್ ನಟ ದಿಲೀಪ್‍ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜೂ.11-ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಚಿತ್ರ ನಟ ದಿಲೀಪ್‍ಕುಮಾರ್ ಗುಣಮುಖರಾಗಿದ್ದು ಇಂದು ಮನೆಗೆ ವಾಪಾಸ್ಸಾಗಿದ್ದಾರೆ.98 ವರ್ಷದ ದಿಲೀಪ್‍ಕುಮಾರ್ ಅವರು ಕೆಲ ದಿನಗಳ ಹಿಂದೆ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದರು.

ನಿಮ್ಮೇಲರ ಆರೈಕೆಯಿಂದ ದಿಲೀಪ್ ಕುಮಾರ್ ಸಾರ್ ಗುಣಮುಖರಾಗಿದ್ದು ಇಂದು ಮನೆಗೆ ವಾಪಸ್ ಆಗುತ್ತಿದ್ದಾರೆ, ನಿಮ್ಮ ಅಭಿಮಾನಕ್ಕೆ ಅವರ ಹೃದಯ ತುಂಬಿ ಬಂದಿದೆ ಎಂದು ಟ್ವಿಟ್ ಮಾಡಲಾಗಿದೆ.

ಮುಘಲ್-ಇ-ಅಜಂ, ದೇವದಾಸ್, ನ್ಯಾಯದೌರ್,ರಾಮ್ ಔರ್ ಶ್ಯಾಮ್ ಮತ್ತಿತರ ಖ್ಯಾತ ಚಿತ್ರಗಳಲ್ಲಿ ನಟಿಸಿ ದೇಶದೆಲ್ಲೇಡೆ ಮನೆ ಮಾತಾಗಿದ್ದ ದಿಲೀಪ್‍ಕುಮಾರ್ ಅವರು 1998 ರ ಖಿಲಾ ಚಿತ್ರದಲ್ಲಿ ನಟಿಸಿದ್ದೆ ಕೊನೆಯ ಚಿತ್ರವಾಗಿತ್ತು.

Facebook Comments

Sri Raghav

Admin