ನಿರ್ಮಾಪಕ ದಿನೇಶ್ ಗಾಂಧಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.31-ಸ್ನೇಹಜೀವಿ ನಿರ್ಮಾಪಕ ದಿನೇಶ್ ಗಾಂಧಿ (52) ಇಂದು ಮುಂಜಾನೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಪತ್ನಿ, ಪುತ್ರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಇವರ ಅಂತ್ಯಕ್ರಿಯೆ ಸ್ವಗ್ರಾಮ ಶ್ರೀರಂಗಪಟ್ಟಣದ ನಗುವಿನಹಳ್ಳಿಯಲ್ಲಿ ನಡೆಯಲಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಸುದೀಪ್ ಅಭಿನಯದ ವೀರ ಮದಕರಿ, ರವಿಚಂದ್ರನ್ ಅಭಿನಯದ ಅವರ ಮಲ್ಲಿಕಾರ್ಜುನ ಚಿತ್ರಗಳನ್ನು ನಿರ್ಮಿಸಿದ್ದರು. ನಿರ್ದೇಶಕರಾಗಿಯೂ ದುಡಿದಿದ್ದ ಅವರು ನಟ ಸಿದ್ಧಾಂತ್ ಅಭಿನಯದ ಛತ್ರಪತಿ ಚಿತ್ರವನ್ನು ನಿರ್ದೇಶಿಸಿದ್ದರು. ಇವರ ಸಾವಿಗೆ ನಟ-ನಟಿಯರು, ತಂತ್ರಜ್ಞರು, ಚಿತ್ರೋದ್ಯಮದ ಗಣ್ಯರು ಕಂಬನಿ ಮಿಡಿದಿದ್ದಾರೆ.

Facebook Comments