ಅನರ್ಹ ಶಾಸಕರು ಈಗ ಅತಂತ್ರ ಸ್ಥಿತಿಯಲಿದ್ದಾರೆ : ದಿನೇಶ್ ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ನ.12-ರಾಜೀನಾಮೆ ನೀಡಿದ ಮೂರು ದಿನದಲ್ಲಿ ಸಚಿವರನ್ನಾಗಿ ಮಾಡುವುದಾಗಿ ಹೇಳಿ ಅನರ್ಹರನ್ನು ಈಗ ಅತಂತ್ರ ಸ್ಥಿತಿಗೆ ಬಿಜೆಪಿಯವರು ತಂದಿಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ.

ಬಿಜೆಪಿಗೆ ಯಾವುದೇ ನೀತಿ ನಿಯಮ ಇಲ್ಲ. ಪಕ್ಷಾಂತರವೇ ಇವರ ಕೆಲಸ. ಜನ ಈಗಾಗಲೇ ಇವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ನಿನ್ನೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕೆಪಿಸಿಸಿಯಲ್ಲಿ ನಡೆದ ಸಭೆಯಲ್ಲಿ ಯಾವುದೇ ಮನಸ್ತಾಪವಾಗಿಲ್ಲ. ಮುನಿಯಪ್ಪ, ಹರಿಪ್ರಸಾದ್ ಸಭೆ ಮುಗಿದ ನಂತರವೆ ಸಭೆಯಿಂದ ಹೊರನಡೆದಿದ್ದಾರೆ.

ಅವರೂ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಾಕಿ ಇದ್ದು, ಸುಪ್ರಿಂಕೋರ್ಟ್ ತೀರ್ಪಿನ ನಂತರ ಒಮ್ಮತವಾಗಿ ಆಯ್ಕೆ ನಡೆಯಲಿದೆ ಎಂದು ಹೇಳಿದರು. ಬಿಜೆಪಿ ಸರ್ವಾಧಿಕಾರಿ ಧೋರಣೆಯಿಂದ ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿ ಕಡಿತಗೊಳಿಸಿದೆ. ಶಿವಸೇನೆ ಜೊತೆ ಹೊಂದಾಣಿಕೆ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ ಎಂದು ಅವರು ಹೇಳಿದರು.

Facebook Comments