ವಲಸಿಗರ ಶೆಡ್ ತೆರವು ಸ್ಥಳಕ್ಕೆ ಕಾಂಗ್ರೆಸ್ ನಾಯಕರ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪುರ,ಜ.23- ಮಹದೇವಪುರ ಕ್ಷೇತ್ರದ ಕರಿಯಮ್ಮನ ಅಗ್ರಹಾರದ ಬಳಿ ಅಕ್ರಮ ಬಾಂಗ್ಲಾ ವಲಸಿಗರ ಶೆಡ್ ತೆರವುಗೊಳಿಸ ಲಾಗಿದ್ದು, ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಬಾಂಗ್ಲಾ ವಲಸಿಗರೆಂದು ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಾರ್ಮಿಕರಿರುವ ಗುಡಿಸಲು ತೆರವುಗೊಳಿಸಿ ಅಧಿಕಾರಿಗಳು ಅಮಾನವೀಯ ವರ್ತನೆ ಮಾಡಿz್ದÁರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಬಾಂಗ್ಲಾದೇಶ ನಿವಾಸಿಗಳಿದ್ದರೆ ತೆರವುಗೊಳಿಸಲಿ. ಆದರೆ, ನಮ್ಮ ದೇಶದ ಅಸ್ಸೋ, ನಾಗಾಲ್ಯಾಂಡ್, ಗುಲ್ಬರ್ಗ ಸೇರಿದಂತೆ ದೇಶದ ಪ್ರಜೆಗಳಿಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದರು. ದೇಶದ ನಿವಾಸಿಗಳಿಗೆ ತೊಂದರೆಯಾದರೆ ಅದನ್ನು ಖಂಡಿಸುತ್ತೇವೆ. ನಿವಾಸಿಗಳಿಗೆ ತೊಂದರೆ ಮಾಡಿದವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ಮಾಜಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ತಾವು ಭಾರತಿಯರೆಂದು ದಾಖಲೆ ತೋರಿಸಿದರೂ ಅವರನ್ನು ಇಲ್ಲಿಂದ ತೆರವು ಮಾಡಿz್ದÁರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ದೇಶದ ನಿವಾಸಿಗಳ ರಕ್ಷಣೆ ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸುವಂತೆ ತಿಳಿಸಿದರು. ಶಾಸಕ ರಿಜÁ್ವನ್ ಹರ್ಷದ್, ಮುಖಂಡರಾದ ಶ್ರೀನಿವಾಸ ರೆಡ್ಡಿ, ಜಯರಾಮರೆಡ್ಡಿ, ವರ್ತೂರು ಸುರೇಶ್,ದೊಡ್ಡಯಲ್ಲಪ್ಪ, ಪಣತ್ತೂರು ಬಾಬು ಇದ್ದರು.

ಪ್ರತಿಕ್ರಿಯೆ: ಶೆಡ್‍ಗಳ ತೆರವಿಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರ ಕುಮ್ಮಕ್ಕು ಇದೆ ಎಂದು ದಿನೇಶ್ ಗುಂಡೂರಾವ್ ಮಾಡಿರುವ ಆರೋಪವನ್ನು ಸ್ಥಳೀಯ ಬಿಜೆಪಿ ಮುಖಂಡ ಮಿಥುನ್ ರೆಡ್ಡಿ ಆರೋಪ ಅಲ್ಲಗೆಳೆದಿದ್ದಾರೆ. ಬಾಂಗ್ಲಾದೇಶದ ನಿವಾಸಿಗಳನ್ನು ಗುರುತಿಸಿ ಅಧಿಕಾರಿಗಳು ತೆರವು ಮಾಡುತ್ತಿz್ದÁರೆ. ಆದರೆ, ಕಾಂಗ್ರೆಸ್ ಮುಖಂಡರು ವೋಟ್‍ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ನೀಚ ರಾಜಕೀಯ ಎಂದು ಪ್ರತಿಕ್ರಿಯಿಸಿದ್ದಾರೆ.

Facebook Comments