ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ : ಗುಂಡೂರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸಮರೋಪಾದಿಯಲ್ಲಿ ನಿಭಾಯಿಸಲು ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಜಿಲ್ಲೆಯ ಸಕಲೇಶಪುರ ನೆರೆ ಪರಿಸ್ಥಿತಿ ಅಧ್ಯಯನ ಕ್ಕೆ ಆಗಮಿಸಿದ್ದ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಾಸನ ಜಿಲ್ಲೆ‌ ಸೇರಿದಂತೆ ರಾಜ್ಯದ ಹಲವು‌ ಜಿಲ್ಲೆಗಳಲ್ಲಿ ನೆರೆಹಾವಳಿಗೆ ಸಾಕಷ್ಟು ಹಾನಿ‌ ಸಂಭವಿಸಿದೆ ಇದನ್ನು ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸಲು ವಿಫಲವಾಗಿದೆ ಹಾಗೂ ನೆರೆ ನಿರಾಶ್ರಿತರಿಗೆ ಅಗತ್ಯ ಪರಿಹಾರ ನೀಡುವಲ್ಲಿ ಮೊದಲು ಕ್ರಮ ವಹಿಸಬೇಕಾದ‌ ಸರ್ಕಾರ ತಡವಾಗಿ ಸ್ಪಂದಿಸಿದೆ ಎಂದು‌ ದೂರಿದರು.

ಮಳೆ ಹಾವಳಿ ಹೆಚ್ಚಿದೆ ಇದರಿಂದ ಈಗ ಸಮಸ್ಯೆ ಹೆಚ್ಚಾಗುತ್ತಿದೆ‌‌ ನೆರೆ ಹಾವಳಿ ಪ್ರದೇಶದಲ್ಲಿ ಪರಿಹಾರ‌ಕಾರ್ಯ ಸಮರೊಪಾದಿಯಲ್ಲಿ ನಡೆಯುತ್ತಿಲ್ಲ ಇದರಿಂದ ಇಲ್ಲಿನ ಜನರು‌‌ ನಾನಾ ಸಮಸ್ಯೆ ಗೆ ಸಿಲುಕುತ್ತಿದ್ದಾರೆ ಇವರಿಗೆ ದೈರ್ಯ ತುಂಬ ಬೇಕಾದ ಸರ್ಕಾರ ಕೈಕಟ್ಟಿಕುಳಿತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ ಹೊರತು, ಜನಪ್ರತಿನಿಧಿಗಳ ಸರ್ಕಾರ ಅಲ್ಲ ಇದರಿಂದ‌ ಪರಿಹಾರ ಕಾರ್ಯ ವಿಫಲವಾಗುತ್ತಿದೆ ಹಾಗೂ ಆಡಳಿತ ಯಂತ್ರ ಕುಸಿದಿದೆ .ಮಂತ್ರಿಗಳೇ ಇಲ್ಲದೆ, ಮುಖ್ಯಮಂತ್ರಿ ಒಬ್ಬರೆ ಪ್ರಯತ್ನ ಪಡುತ್ತಿದ್ದಾರೆ ಇಂತಹ ಆಡಳಿತ ಸರಿಯಲ್ಲ ಎಂದರು‌.

ಮಂತ್ರಿ ಮಂಡಲ ಇರದ ಕಾರಣ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕೆಲಸ ಮಾಡಿಸುವವರಿಲ್ಲ ದಂತಾಗಿದೆ . ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಆದರೂ ಸಹ ನಿರೀಕ್ಷೆ ಪ್ರಮಾಣದಲ್ಲಿ ಕೆಲಸವಾಗುತ್ತಿಲ್ಲ ಎಂದು ಅರೋಪಿಸಿದರು.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಅನಾಹುತಗಳು ಸಂಭವಿಸಿವೆ ಪ್ರಧಾನಮಂತ್ರಿ ಪ್ರವಾಹ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸಬೇಕಿತ್ತು ಆದರೆ ಅವರು ಕರ್ನಾಟಕ ರಾಜ್ಯದ ನೆರೆ ಪರಿಸ್ಥಿತಿಯನ್ನು ಕಂಡು ಕಾಣದಂತೆ ವರ್ತಿಸುತ್ತಿದ್ದು ತಾತ್ಸರ ಮನೋಭಾವನೆಗೆ ನಿದರ್ಶನವಾಗಿದೆ.

ನೆನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಿಎಂ ಭೇಟಿ ಮಾಡಿ ಬಂದಿದ್ದಾರೆ.  ಅವರ ಹೇಳಿಕೆಗಳನ್ನು ‌ಗಮನಿಸಿದರೆ ಕೇಂದ್ರದಿಂದ ಎಷ್ಟು ಪ್ರಮಾಣದ ಹಣ ಬಿಡುಗಡೆ ಮಾಡುತ್ತಾರೆ ಎಂಬ ವಿಶ್ವಾಸ ಅವರಿಗೆ ಇಲ್ಲ ಎಂದು‌ ಟೀಕಿಸಿದ ಗುಂಡೂರಾವ್ ಕೇಂದ್ರ ಸರ್ಕಾರ ಕಾನೂನು, ಸಂವಿಧಾನ ತಿದ್ದುಪಡಿ ವಿಷಯದಲ್ಲಿ ಯಾರನ್ನೂ ಕೇಳದೆ ಆತುರವಾಗಿ ತೀರ್ಮಾನ ಕೈಗೊಳ್ಳುತ್ತಾರೆ ಅದರೆ ನೆರೆ ಹಾವಳಿಯಂತಹ ಗಂಭೀರ ಸಮಸ್ಯೆಗೆ ನಿರ್ಲಕ್ಷ್ಯ ಧೋರಣೆ ಎಷ್ಟು ಸರಿ ಎಂದು ಟೀಕಿಸಿದರು‌.

ರಾಜ್ಯದಲ್ಲಿ 25 ಬಿಜೆಪಿ ಸಂಸದರು ಇದ್ದರು ಸಹ ನೆರೆ ಪರಿಹಾರ ಮಂಜೂರು ಮಾಡಿಸುವಲ್ಲಿ ಏಕೆ ನಿರ್ಲಕ್ಷ್ಯ ವಹಿಸಿದ್ದಾರೆ ಗೊತ್ತಿಲ್ಲ ; ಪ್ರವಾಹ ನಿರ್ವಹಣೆ ಸಂಬಂಧ ‌ಸರ್ವಪಕ್ಷ ಸಭೆ ಕರೆದಿಲ್ಲ ಒಬ್ಬರೇ ಪ್ರಧಾನಿ ಬಳಿ ತೆರಳಿದರೆ ಯಾವ ಕೆಲಸ ಆಗುತ್ತದೆ ಎಂದು ಪ್ರಶ್ನಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿವೆ ಎಂದು ಪುನರುಚ್ಚರಿಸಿದ ಅವರು ಫೋನ್‌ ಕದ್ದಾಲಿಕೆ ಆಗಿದ್ದರೆ ಸಿಎಂ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ‌ಕೈಗೊಳ್ಳಲಿ ಸುಮ್ಮನೆ ಚರ್ಚೆ ಮಾಡುವ ಅವಶ್ಯಕತೆ ‌ಇಲ್ಲಾ ಎಂದು ಕಿಡಿಕಾರಿದರು.

# ಸರ್ಕಾರ ನಡೆಸಲು ಮೈತ್ರಿ ಮಾಡಿಕೊಂಡಿದ್ದೆವು :
ನಾವು ಪಕ್ಷ ಸಂಘಟನೆ ಮಾಡಬೇಕು, ಅವರು ಪಕ್ಷ ಸಂಘಟನೆ ಮಾಡಬೇಕು ಮುಂದೆಯೂ ಮೈತ್ರಿ ಮುಂದುವರಿಕೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಗುಂಡೂರಾವ್ ಪ್ರತಿಕ್ರಿಯಿಸಿದರು.

Facebook Comments

Sri Raghav

Admin