ಕೆಕೆಆರ್ ನಾಯಕತ್ವ ತ್ಯಜಿಸಿದ ದಿನೇಶ್‍ ಕಾರ್ತಿಕ್

ಈ ಸುದ್ದಿಯನ್ನು ಶೇರ್ ಮಾಡಿ

ಅಬುಧಾಬಿ, ಅ.16- ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ಕೆಕೆಆರ್ ಸೆಣಸಲು ಕ್ಷಣಗಣನೆ ಆರಂಭಗೊಂಡಿರುವಾಗಲೇ ನಾಯಕ ದಿನೇಶ್‍ನಾಯಕ್ ನಾಯಕತ್ವವನ್ನು ತ್ಯಜಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

2020ರಲ್ಲಿ ಉತ್ತಮ ಪ್ರದರ್ಶನ ತೋರಿಸುವಲ್ಲಿ ಎಡವಿರುವ ಕೆಕೆಆರ್ ತಂಡ ದ ನಾಯಕನನ್ನು ಬದಲಾಯಿಸಬೇಕೆಂಬ ಕೂಗು ಕೇಳಿಬರುತ್ತಿದ್ದ ಬೆನ್ನಲ್ಲೇ ಕಾರ್ತಿಕ್ ರಾಜೀನಾಮೆ ನೀಡಿರುವುದರಿಂದ ಇಂಗ್ಲೆಂಡ್‍ನ ನಾಯಕ ಇಯಾನ್ ಮಾರ್ಗನ್‍ಗೆ ನಾಯಕತ್ವವನ್ನು ವಹಿಸಲಾಗಿದೆ.

2018ರಲ್ಲಿ ಕೆಕೆಆರ್ ನಾಯಕತ್ವವನ್ನು ವಹಿಸಿಕೊಂಡ ದಿನೇಶ್ ಕಾರ್ತಿಕ್ 37 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಪ್ರಸಕ್ತ ಐಪಿಎಲ್‍ನಲ್ಲಿ 7 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಕೆಕೆಆರ್ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

Facebook Comments

Sri Raghav

Admin