ಬಿಸಿಸಿಐ ನೂತನ ಅಧ್ಯಕ್ಷ ಗಂಗೂಲಿಯಿಂದ ಕ್ರಿಕೆಟಿಗರಿಗೆ ಭರ್ಜರಿ ಭೋಜನ ಕೂಟ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ಅ. 18- ಬಿಸಿಸಿಐನ ನೂತನ ಅಧ್ಯಕ್ಷರಾಗಿರುವ ಬಂಗಾಳದ ದಾದಾ ಸೌರವ್ ಗಂಗೂಲಿ ಅವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರಿಗೆ ಅಕ್ಟೋಬರ್ 25 ರಂದು ಭರ್ಜರಿ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ.

ಅಂದಿನ ಭೋಜನ ಕೂಟದಲ್ಲಿ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಅಜರುದ್ದೀನ್, ಯುವರಾಜ್‍ಸಿಂಗ್, ಹರ್ಭಜನ್‍ಸಿಂಗ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಸೌರವ್ ಗಂಗೂಲಿ ಕ್ರಿಕೆಟ್ ಮೈದಾನದಲ್ಲಿ ಅಲ್ಲದೆ ಕ್ರಿಕೆಟ್ ಮಂಡಳಿಗಳಲ್ಲೂ ತಮ್ಮ ಕಾರ್ಯವನ್ನು ನಿಭಾಯಿಸಿದ್ದು ಈಗ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು ತಮ್ಮ ಕ್ರಿಕೆಟ್ ಜೀವನದಲ್ಲಿ ತಮ್ಮ ಏಳಿಗೆಗೆ ಸಹಕರಿಸಿದ ಸಹ ಆಟಗಾರರಿಗೆ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸಲಿದ್ದಾರೆ.

ಗಂಗೂಲಿ ಹಾಗೂ ಸಚಿನ್ ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆರಂಭಿಕ ಜೋಡಿಯಾಗಿದ್ದು 136 ಏಕದಿನ ಪಂದ್ಯಗಳಲ್ಲಿ 6609 ರನ್‍ಗಳಿಸಿದ್ದಾರೆ, ಇದರಲ್ಲಿ 21 ಸೆಂಚುರಿ ಹಾಗೂ 23 ಅರ್ಧಶತಕಗಳು ಕೂಡ ಸೇರಿದೆ.ಭಾರತ ತಂಡವನ್ನು 2003ರ ವಿಶ್ವಕಪ್‍ನಲ್ಲಿ ಫೈನಲ್‍ಗೆ ಕೊಂಡೊಯ್ದಿದ್ದ ಕೀರ್ತಿಯೂ ದಾದಾಗೆ ಸಲ್ಲುತ್ತದೆ.

Facebook Comments