ದೃಶ್ಯಂ ನಿರ್ದೇಶಕ ನಿಶಿಕಾಂತ್ ಕಾಮತ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಆ.17-ಮುಂಬೈ ಮೇರಿ ಜಾನ್, ದೃಶ್ಯಂ ಮತ್ತು ಮದಾರಿ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ನಿಶಿಕಾಂತ್ ಕಾಮತ್ (50) ಇಂದು ಬೆಳಗ್ಗೆ ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.  ಲಿವರ್ ಸಮಸ್ಯೆ ಮತ್ತು ಸೋಂಕಿನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಡೊಂಬಿವಲಿ ಪಾಸ್ಟ್ ಎಂಬ ಮರಾಠಿ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಶಿಕಾಂತ್, 2008ರಲ್ಲಿ ಇರ್ಫಾನ್ ಖಾನ್ ಮತ್ತು ಆರ್. ಮಾಧವನ್ ಅಭಿನಯದ ಮುಂಬೈ ಮೇರಿ ಜಾನ್ ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಯಶಸ್ವಿಯಾಗಿತ್ತು.

2016ರಲ್ಲಿ ಜಾನ್ ಅಬ್ರಹಾಂ ಅಭಿನಯದ ರಾಕಿ ಹ್ಯಾಂಡ್‍ಸಮ್ ಚಿತ್ರವನ್ನು ನಿರ್ದೇಶಿಸಿ ಅದರಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದರು. ದೃಶ್ಯಂ ಚಿತ್ರ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.

ಮಲಯಾಳಂ ಚಿತ್ರವನ್ನು ಅವರು ಹಿಂದಿಯಲ್ಲಿ ರೀಮೇಕ್ ಮಾಡಿದ್ದರು. ಅಜಯ್ ದೇವಗನ್ ಮತ್ತು ಟಬು ಈ ಚಿತ್ರದಲ್ಲಿ ನಟಿಸಿದ್ದರು. ನಿಶಿಕಾಂತ್ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Facebook Comments

Sri Raghav

Admin