ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಆನಂದ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ,ಏ.30-ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ತಮಿಳು ಚಿತ್ರ ನಿರ್ದೇಶಕ ಕೆ.ವಿ.ಆನಂದ್ ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ.54 ವರ್ಷ ವಯಸ್ಸಿನ ಆನಂದ್ ಅವರಿಗೆ ತಡರಾತ್ರಿ ಎದೆನೋವು ಕಾಣಿಸಿಕೊಂಡಿತು.

ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.ಮಲಯಾಳಂ ಚಿತ್ರ ತೆನ್‍ಮವಿನ್ ಕೋಂಬತ್ ಚಿತ್ರದ ಸಿನಿಮಟೊಗ್ರಾಫರ್ ಆಗಿ ಚಿತ್ರರಂಗ ಪ್ರವೇಶಿಸಿದ್ದ ಆನಂದ್ ಅವರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

ಆನಂದ್ ಅವರ ಬಣ್ಣದ ಗ್ರಹಿಕೆ ಅಸಾಧ್ಯವಾಗಿತ್ತು. ಅವರ ಕ್ಯಾಮರಾ ತೆರೆ ಮೇಲೆ ಮ್ಯಾಜಿಕ್ ಮಾಡುತಿತ್ತು. ಫೋಟೊ ಜರ್ನಲಿಸ್ಟ್ ಆಗಿದ್ದ ಆನಂದ್ ಅವರು ತಮ್ಮ ಪರಿಶ್ರಮದಿಂದ ಉತ್ತುಂಗದ ಶಿಖರ ಏರಿದ್ದರು ಎಂದು ಕಮಲಹಾಸನ್ ಬಣ್ಣಿಸಿದ್ದಾರೆ.

Facebook Comments

Sri Raghav

Admin