ಕವಿರತ್ನ ಕಾಳಿದಾಸ ಚಿತ್ರ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಕವಿರತ್ನ ಕಾಳಿದಾಸ, ಅಂಜದ ಗಂಡು, ಕಿಂದರಿ ಜೋಗಿ ಅಂತಹ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾಗೆ ಬಲಿಯಾಗಿದ್ದಾರೆ. 81 ವರ್ಷದವರಾಗಿದ್ದ ರೇಣುಕಾ ಶರ್ಮಾ ಕೊರೊನಾ ಸೋಂಕು ತಗುಲಿದ್ದು, ಕಳೆದ ದಿನಗಳಿಂದ ಗಿರಿನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ನಿಮೋನಿಯಾ ಖಾಯಿಲೆ ಇದ್ದ ಕಾರಣ ನಿರ್ದೇಶಕ ರೇಣುಕಾ ಶರ್ಮಾ, ನಿನ್ನೆ ರಾತ್ರಿ ಕೊರೋನಾ ಸೋಂಕಿನಿಂದಾಗಿ ವಿಧಿವಶರಾಗಿದ್ದಾರೆ.

1981ರಲ್ಲಿ ಅನುಪಮ ಚಿತ್ರದ ಮೂಲಕ ನಿರ್ದೇಶಕರಾದ ರೇಣುಕಾ ಶರ್ಮಾ, ಕವಿರತ್ನ ಕಾಳಿದಾಸ, ಶಹಬ್ಬಾಸ್ ವಿಕ್ರಮ್, ಸತ್ಕಾರ ಹಾಗೂ ನಮ್ಮ ಊರು ದೇವತೆ, ಅಂಜದ ಗಂಡು, ಕಿಂದರಿ ಜೋಗಿ,ಶಬರಿ ಮಲೆ ಶ್ರೀ ಅಯ್ಯಪ್ಪ, ಭರ್ಜರಿ ಗಂಡು ಹಾಗೂ ಹಠಮಾರಿ ಹೆಣ್ಣು ಕಿಲಾಡಿ ಗಂಡು, ಕೊಲ್ಲೂರು ಶ್ರೀ ಮೂಕಾಂಬಿಕೆ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ರೇಣುಕಾ ಶರ್ಮಾ ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಇಂದು ಬೆಂಗಳೂರಿನ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಷ ತೀರ್ಮಾನಿಸಿದೆ.

# ಗೆಳೆಯ ರೇಣುಕಾ ಶರ್ಮ ಅಗಲಿಕೆ ಅತ್ಯಂತ ನೋವಿನ ವಿಷಯ : ಟಿ ಎಸ್ ನಾಗಾಭರಣ
ಕವಿರತ್ನ ಕಾಳಿದಾಸ, ಶಬರಿಮಲೆ ಅಯ್ಯಪ್ಪ ಸೇರಿದಂತೆ ಹಲವು ಉತ್ಕೃಷ್ಟ ಐತಿಹಾಸಿಕ ಮತ್ತು ಭಕ್ತಿಪ್ರಧಾನ ಕನ್ನಡ ಸಿನಿಮಾ ನಿರ್ದೇಶನ ಮಾಡಿದ ಖ್ಯಾತ ನಿರ್ದೇಶಕ, ಆತ್ಮೀಯ ರೇಣುಕಾ ಶರ್ಮ ಕೋವಿಡ್ ಗೆ ಬಲಿಯಾಗಿದ್ದು, ಅತ್ಯಂತ ನೋವಿನ ವಿಷಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ರವರ ಅಮೋಘ ಅಭಿನಯವನ್ನು ಅನಾವರಣಗೊಳಿಸಿದ್ದರು. ಕೋವಿಡ್ ಪಾಸಿಟಿವ್ ನಿಂದಾಗಿ ಎರಡು ದಿನಗಳ ಹಿಂದಷ್ಟೇ ಚಿಕಿತ್ಸೆಗಾಗಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಅನಂತ ನಾಗ್ – ಮಾಧವಿ ಅಭಿನಯದ ಅನುಪಮ ಚಿತ್ರ ನಿರ್ದೇಶನದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ರೇಣುಕಾಶರ್ಮ ಅವರು ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳನ್ನು ಅರ್ಥಪೂರ್ಣವಾಗಿ ತೆರೆಗೆ ತರುತ್ತಿದ್ದ ದೈತ್ಯ ಪ್ರತಿಭೆ ರೇಣುಕಾ ಶರ್ಮ ಎಂದು ಶ್ಲಾಘಿಸಿದ್ದಾರೆ.

ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಅವರು ಅತ್ಯಂತ ಯಶಸ್ವಿ ಚಿತ್ರವಾಗಿತ್ತು. ನಮ್ಮೂರ ದೇವತೆ, ಶಹಬ್ಬಾಸ್ ವಿಕ್ರಮ್, ಅಂಜದ ಗಂಡು, ಶಬರಿಮಲೈ ಅಯ್ಯಪ್ಪ, ಶ್ರೀ ಅಯ್ಯಪ್ಪ, ಬರ್ಜರಿ ಗಂಡ, ಕಿಂದರಿ ಜೋಗಿ, ಕೊಲ್ಲಾಪುರ ಶ್ರೀ ಮೂಕಾಂಬಿಕೆ, ಮಹಾಸಾದ್ವಿ ಮಲ್ಲಮ್ಮ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.

ಅವರ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ನಾಗಾಭರಣ ಅವರು, ಹೀಗೆ ನಿರಂತರವಾಗಿ ಕನ್ನಡದ ವಿವಿಧ ಕ್ಷೇತ್ರದ ಮಹನೀಯರನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಮನಸ್ಸನ್ನು ಆದ್ರ ಗೊಳಿಸಿದೆ. ಹಿಂದೆಂದೂ ಕಾಣದಂತಹ ಇಂತಹ ದುರಿತ ಕಾಲ ಇದಾಗಿದ್ದು ಯಾರೊಬ್ಬರೂ ಉದಾಸೀನ ಮಾಡದೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Facebook Comments

Sri Raghav

Admin