ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ, ಸಾರ್ವಜನಿಕರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು : ಕಳೆದ ಹದಿನೈದು ದಿನದಿಂದ ತುಮಕೂರು ಜಿಲ್ಲೆಯಲ್ಲಿ ಕೋರೋನಾ ವೈರಸ್ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದೆ ಆದರೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾಧುಸ್ವಾಮಿ ಯವರು ಸಿನಿಮಿಯ ರೀತಿಯಲ್ಲಿ ಯಾವಾಗಲೋ ಒಮ್ಮೆ ಬಂದು ಭೇಟಿ ನೀಡಿ ನಾಪತ್ತೆಯಾಗುತ್ತಾರೆ ಎಂದು ತುಮಕೂರು ಜಿಲ್ಲೆಯ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪಾವಗಡ ಶಿರಾ ಮಧುಗಿರಿ ಕೊರಟಗೆರೆ ತುಮಕೂರು ಕುಣಿಗಲ್ ತುರುವೇಕೆರೆ ತಿಪಟೂರು ಸೇರಿದಂತೆ ಹಲವು ತಾಲೂಕುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುಖ ನೋಡಿ ಕೆಲವು ತಿಂಗಳುಗಳೇ ಕಳೆದು ಹೋಗಿದೆ ದಯಮಾಡಿ ಅವರನ್ನು ನಮಗೆ ಹುಡುಕಿಕೊಡಿ ಎಂದು ಜನರು ಮನವಿ ಮಾಡುತ್ತಿದ್ದಾರೆ.

ಕೇವಲ ಕದನದ ಆರಿಸಿಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಸಿ ಮಾದೇವ ಸ್ವಾಮಿಯವರು ತುಮಕೂರು ಜಿಲ್ಲೆಯಲ್ಲಿ ಕಳೆದ 20ದಿನಗಳಿಂದ ಕೊರೋನಾ ವೈರಸ್ ಹಿನ್ನೆಲೆಯಲ್ಲಿಜಿಲ್ಲಾಡಳಿತ ಕರೆದ ಸಭೆಗಳಲ್ಲಿ ಭಾಗವಹಿಸುವುದು ಹಾಗೂ ದಿಡೀರನೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಆಗಮಿಸಿ ಅಧಿಕಾರಿಗಳ ಜತೆ ಸಭೆ ನಡೆಸಿ ನಂತರ ನಾಪತ್ತೆಯಾಗುವ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ಯಾವುದೇ ಕಾಳಜಿಯನ್ನು ಹೊಂದಿಲ್ಲ ಎಂದು ತೀರ್ವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಎರಡನೇ ದೊಡ್ಡ ಜಿಲ್ಲೆಯಾಗಿರುವ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಜನಸಂಖ್ಯೆಯ ಹೊಂದಿರುವುದಲ್ಲದೆ ಅಷ್ಟೇ ಹಲವಾರು ಸಮಸ್ಯೆಗಳನ್ನು ಹೊಂದಿದೆ. ಮಹಾನಗರಪಾಲಿಕೆ, ಸೇರಿದಂತೆ ನಗರಸಭೆ ಪಟ್ಟಣ ಪಂಚಾಯಿತಿಗಳು ಪುರಸಭೆಗಳುಗಳನ್ನು ಜಿಲ್ಲೆ ಹೊಂದಿದೆ ಆದರೆ ತಾಲೂಕುಗಳಿಗೆ ಭೇಟಿ ಕೊರೊನಾ ವೈರಸ್ ವಿಚಾರವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡುವುದಾಗಲಿ ಯಾವುದನ್ನೂ ಮಾಡುತ್ತಿಲ್ಲ.

ಜಿಲ್ಲೆಯ ಶಾಸಕರು ಗಳ ಜೊತೆ ಸಭೆ ನಡೆಸಿ ಶಾಸಕರುಗಳ ಮೂಲಕ ತಮ್ಮ ಕ್ಷೇತ್ರಗಳಲ್ಲಿ ಜನರಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಹಾಗೂ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತ ಲಾಕ್ಡೌನ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಆಯಾಯ ಕ್ಷೇತ್ರದ ಜನರನ್ನು ಯಾವುದೇ ಕಾರಣಕ್ಕೂ ಮನೆಬಿಟ್ಟು ಹೊರ ಬರಬೇಡಿ ಕೋರೋನಾ ವೈರಸ್ಸನ್ನು ಓಡಿಸೋಣ ಎಂಬ ಕೆಲಸವನ್ನು ಮಾಡದೆ ಯಾರ ಕಣ್ಣಿಗೂ ಕಾಣದೆ ಇರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ತುಮಕೂರು ಜಿಲ್ಲೆಯ ಬರುವಂತೆ ಮುಖ್ಯಮಂತ್ರಿಗಳು ಆದೇಶಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Facebook Comments

Sri Raghav

Admin