ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಸೆಮಿಸಿ ಸರ್ಕಾರ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ. 16 : ಹೆಚ್ಚು ಕಡಿಮೆ ಸರ್ಕಾರ ರಚನೆಯಾಗಿ ಒಂದು ತಿಂಗಳ ನಂತರ ಸಾಕಷ್ಟು ಆಳೆದು ತೂಗಿ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದ್ದು,ಕೆಲವರಿಗೆ ನಿರೀಕ್ಷಿತ ಜಿಲ್ಲೆಗಳು ಕೈ ತಪ್ಪಿವೆ.

ಕಂದಾಯ ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಪೈಕಿ ಯಾರಿಗೆ ಉಸ್ತುವಾರಿ ಖಾತೆ ಸಿಗುತ್ತದೆ ಎನ್ನುವ ಕುತೂಹಲವಿತ್ತು.  ಸರ್ಕಾರ ರಚನೆಯಾದ ಬಳಿಕ ಇಬ್ಬರಿಗೆ ಮನಸ್ತಾಪ ಉಂಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಹೀಗಾಗಿ ಬೆಂಗಳೂರು ಉಸ್ತುವಾರಿ ಯಾರಿಗೆ ಸಿಗಲಿದೆ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಯಡಿಯೂರಪ್ಪನವರು ಯಾರಿಗೂ ಬೆಂಗಳೂರನ್ನು ಹಂಚಿಕೆ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಸಿಕಿಲ್ಲ ಬಳ್ಳಾರಿ ಉಸ್ತುವಾರಿಯಾದರೂ ಕೊಡಿ ಎಂದು ಯಡಿಯೂರಪ್ಪ ಬಳಿ ಬೇಡಿಕೆ ಇಟ್ಡಿದ್ದ ಆರೋಗ್ಯ ಸಚಿವ ಶ್ರೀರಾಮುಲುಗೆ ನಿರಾಸೆಯಾಗಿದೆ.

ರಾಮುಲು ಅವರಿಗೆ ರಾಯಚೂರು, ಚಿತ್ರದುರ್ಗ ಉಸ್ತುವಾರಿ ನೀಡಿದ್ದರೇ, ಲಕ್ಷ್ಮಣ ಸವದಿ ಅವರಿಗೆ ಬಳ್ಳಾರಿ ಹೊಣೆ ಹೊರಿಸಲಾಗಿದೆ. ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ, ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಜೆಸಿ ಮಾಧುಸ್ವಾಮಿ, ಚಂದ್ರಕಾಂತ ಗೌಡ ಪಾಟೀಲ್, ವಿ. ಸೋಮಣ್ಣ, ಪ್ರಭು ಚೌಹಾಣ್ ಅವರಿಗೆ ಎರಡು ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.

ಸರ್ಕಾರ ಅಧಿಕಾರಕ್ಕೆ ಬಂದು 20 ದಿನಗಳ ಬಳಿಕ ಖಾತೆ ಹಂಚಿಕೆ ಬಳಿಕ ಸಚಿವರು ಜಿಲ್ಲಾ ಉಸ್ತುವಾರಿ ಸ್ಥಾನ ಪಡೆಯಲು ಲಾಬಿಗೆ ಮುಂದಾಗಿದ್ದರು.  ಡಿಸಿಎಂ ಅಶ್ವಥ್​ ನಾರಾಯಣ, ಶ್ರೀರಾಮುಲು, ಆರ್​ ಅಶೋಕ್​ ಸೇರಿದಂತೆ ಹಲವರು ತಮ್ಮ ಕ್ಷೇತ್ರಗಳ ಉಸ್ತುವಾರಿಯನ್ನೇ ನೀಡುವಂತೆ ಪಟ್ಟು ಹಿಡಿದಿದ್ದರು.

ಆದರೆ, ಅನರ್ಹ ಶಾಸಕರನ್ನು ಗಣನೆಯಲ್ಲಿಟ್ಟುಕೊಂಡಿರುವ ಯಡಿಯೂರಪ್ಪ, ಅವರಿಗಾಗಿ ಕೆಲವು ಜಿಲ್ಲೆಗಳನ್ನು ಮೀಸಲಿಟ್ಟು ಉಳಿದ ಜಿಲ್ಲೆಗಳಿಗೆ ಹಂಚಿಕೆ ಮಾಡಿರುವುದು ವಿಶೇಷ.

ಸಚಿವರ ಖಾತೆ ಹಂಚಿಕೆಯಲ್ಲಿ ನಿರಂತರ ಹಗ್ಗಜಗ್ಗಾಟದ ಬಳಿಕ ಹೈಕಮಾಂಡ್​ ಆದೇಶದಂತೆ ಈಗ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ಜೊತೆಗೆ ನಿರ್ದಿಷ್ಠ ಕ್ಷೇತ್ರಗಳಿಗೆ ಬೇಡಿಕೆಯಿಟ್ಟಿದ್ದ ಕೆಲವು ಸಚಿವರಿಗೆ ನಿರಾಸೆಯೂ ಮೂಡುವಂತಾಗಿದೆ.

# ಉಸ್ತುವಾರಿ ಸಚಿವರ ಪಟ್ಟಿ:
1. ಬಿ.ಎಸ್​. ಯಡಿಯೂರಪ್ಪ – ಬೆಂಗಳೂರು
2. ಗೋವಿಂದ ಕಾರಜೋಳ – ಬಾಗಲಕೋಟೆ ಮತ್ತು ಕಲಬುರಗಿ (ಅಧಿಕ ಪ್ರಭಾರ)
3. ಡಾ. ಅಶ್ವತ್ಥನಾರಾಯಣ್​ – ರಾಮನಗರ ಮತ್ತು ಚಿಕ್ಕಬಳ್ಳಾಪುರ (ಅಧಿಕ ಪ್ರಭಾರ)
4. ಲಕ್ಷ್ಮಣ ಸವದಿ – ಬಳ್ಳಾರಿ ಮತ್ತು ಕೊಪ್ಪಳ (ಅಧಿಕ ಪ್ರಭಾರ)
5. ಕೆ.ಎಸ್​. ಈಶ್ವರಪ್ಪ – ಶಿವಮೊಗ್ಗ ಮತ್ತು ದಾವಣಗೆರೆ (ಆಧಿಕ ಪ್ರಭಾರ)
6. ಆರ್​. ಅಶೋಕ್​ – ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ (ಅಧಿಕ ಪ್ರಭಾರ)
7. ಜಗದೀಶ ಶೆಟ್ಟರ್​ – ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ (ಆಧಿಕ ಪ್ರಭಾರ)
8. ಬಿ. ಶ್ರೀರಾಮುಲು – ರಾಯಚೂರು ಮತ್ತು ಚಿತ್ರದುರ್ಗ (ಅಧಿಕ ಪ್ರಭಾರ)
9. ಎಸ್​. ಸುರೇಶ್​ ಕುಮಾರ್​ – ಚಾಮರಾಜನಗರ
10. ವಿ. ಸೋಮಣ್ಣ – ಮೈಸೂರು ಮತ್ತು ಕೊಡಗು (ಅಧಿಕ ಪ್ರಭಾರ)
11. ಸಿ.ಟಿ. ರವಿ – ಚಿಕ್ಕಮಗಳೂರು
12. ಬಸವರಾಜ ಬೊಮ್ಮಾಯಿ – ಉಡುಪಿ ಮತ್ತು ಹಾವೇರಿ (ಅಧಿಕ ಪ್ರಭಾರ)
13. ಕೋಟ ಶ್ರೀನಿವಾಸ ಪೂಜಾರಿ – ಮಂಗಳೂರು
14. ಜೆ.ಸಿ. ಮಾಧುಸ್ವಾಮಿ – ತುಮಕೂರು ಮತ್ತು ಹಾಸನ (ಆಧಿಕ ಪ್ರಭಾರ)
15. ಸಿ.ಸಿ. ಪಾಟೀಲ್​ – ಗದಗ ಮತ್ತು ವಿಜಯಪುರ (ಆಧಿಕ ಪ್ರಭಾರ)
16. ಎಚ್​. ನಾಗೇಶ್​ – ಕೋಲಾರ
17. ಪ್ರಭು ಚೌವ್ಹಾಣ್​ – ಬೀದರ್​ ಮತ್ತು ಯಾದಗಿರಿ (ಆಧಿಕ ಪ್ರಭಾರ)
18. ಶಶಿಕಲಾ ಜೊಲ್ಲೆ – ಉತ್ತರ ಕನ್ನಡ

Facebook Comments

Sri Raghav

Admin