ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ, ಇಲ್ಲಿದೆ ಫುಲ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ನೂತನ ಸಚಿವರಿಗೆ ಕೊವಿಡ್ ಹಾಗೂ ಪ್ರವಾಹಪರಿಸ್ಥಿತಿ ನಿರ್ವಾಹಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ.

ಸಚಿವರಿಗೆ ಜಿಲ್ಲೆಗಳನ್ನು ಕೂಡ ತಾತ್ಕಲಿಕವಾಗಿ ಹಂಚಿಕೆ ಮಾಡಲಾಗಿದೆ. ಸಚಿವರು ಹಂಚಿಕೆಯಾದ ಜಿಲ್ಲೆಗಳಿಗೆ ತೆರಳಿ ಕೋವಿಡ್​ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರಿಗೆ ಸೂಚನೆ ನೀಡಲಾಗಿದೆ.

ಮುಂದಿನ ಆದೇಶದವರೆಗೆ ಸಚಿವರು ಹಂಚಿಕೆಯಾದ ಜಿಲ್ಲೆಗಳ ಉಸ್ತುವಾರಿ ವಹಿಸಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ.ಸಚಿವರು ನಾಳೆಯಿಂದಲೇ ಈ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಅವಲೋಕಿಸಬೇಕಿದೆ.

ಅಲ್ಲದೇ ನೆರೆ ಪೀಡಿತ ಪ್ರದೇಶಗಳಲ್ಲಿ ಆದ ಹಾನಿ ಸಂಬಂಧ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಈ ವರದಿ ಸಲ್ಲಿಕೆ ಬಳಿಕ ಮುಂದಿನ ಸಂಪುಟ​ ಸಭೆಯಲ್ಲಿ ಪರಿಹಾರ ಬಿಡುಗಡೆ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಅನಾವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿ, ಸಂಕಷ್ಟಕ್ಕೆ ಒಳಗಾದ ಜನರಿಗೆ ಪರಿಹಾರ ಕಾರ್ಯಗಳನ್ನು ನೀಡುವ ಸಂಬಂಧ ಸೂಚನೆ ನೀಡಲಾಗಿದೆ. ಇದೇ ಕಾರಣಕ್ಕೆ ಎಲ್ಲಾ 29 ಸಚಿವರಿಗೆ ಜಿಲ್ಲೆಗಳತ್ತ ಮುಖ ಮಾಡುವಂತೆ ಆದೇಶ ನೀಡಲಾಗಿದೆ.

# ಸಚಿವರಿಗೆ ಹಂಚಿಕೆಯಾದ ಜಿಲ್ಲೆಗಳು
ಗೋವಿಂದ ಎಂ ಕಾರಜೋಳ -ಬೆಳಗಾವಿ
ಕೆ ಎಸ್​ ಈಶ್ವರಪ್ಪ – ಶಿವಮೊಗ್ಗ
ಆರ್​ ಅಶೋಕ್​ -ಬೆಂಗಳೂರು ನಗರ
ಬಿ ಶ್ರೀರಾಮುಲು- ಚಿತ್ರದುರ್ಗ
ವಿ ಸೋಮಣ್ಣ- ರಾಯಚೂರು
ಉಮೇಶ್​ ವಿ ಕತ್ತಿ- ಬಾಗಲಕೋಟೆ
ಎಸ್​ ಅಂಗಾರ- ದಕ್ಷಿಣ ಕನ್ನಡ
ಜೆಸಿ ಮಾಧುಸ್ವಾಮಿ- ತುಮಕೂರು
ಅರಗ ಜ್ಞಾನೇಂದ್ರ- ಚಿಕ್ಕಮಗಳೂರು
ಸಿ ಎನ್​ ಅಶ್ವತ್ಥ್​ ನಾರಾಯಣ- ರಾಮನಗರ
ಸಿ ಸಿ ಪಾಟೀಲ- ಗದಗ
ಆನಂದ್​ ಸಿಂಗ್​ – ಬಳ್ಳಾರಿ ಮತ್ತು ವಿಜಯ ನಗರ
ಕೋಟ ಶ್ರೀನಿವಾಸ ಪೂಜಾರಿ – ಕೊಡಗು
ಪ್ರಭು ಚವ್ಹಾಣ್​- ಬೀದರ್​
ಮುರುಗೇಶ್​ ರುದ್ರಪ್ಪ ನಿರಾಣಿ -ಕಲಬುರಗಿ
ಅರೆಬೈಲ್​ ಹೆಬ್ಬಾರ್​ ಶಿವರಾಮ್​- ಉತ್ತರ ಕನ್ನಡ
ಎಸ್​ ಟಿ ಸೋಮಶೇಖರ್​ -ಉತ್ತರ ಕನ್ನಡ
ಬಿ ಸಿ ಪಾಟೀಲ್​​- ಹಾವೇರಿ
ಬಿ ಎ ಬಸವರಾಜ್​- ದಾವಣಗೆರೆ
ಡಾ ಕೆ ಸುಧಾಕರ್​- ಚಿಕ್ಕಬಳ್ಳಾಪುರ
ಕೆ ಗೋಪಾಲಯ್ಯ- ಹಾಸನ
ಶಶಿಕಲಾ ಜೊಲ್ಲೆ – ವಿಜಯಪುರ
ಎಂಟಿಬಿ- ಬೆಂಗಳೂರು ಗ್ರಾಮಾಂತರ
ಕೆ ಸಿ ನಾರಾಯಣ ಗೌಡ- ಮಂಡ್ಯ
ಬಿ ಸಿ ನಾಗೇಶ್​- ಯಾದಗಿರಿ
ಸುನೀಲ್​ ಕುಮಾರ್​- ಉಡುಪಿ
ಆಚಾರ್​ ಹಾಲಪ್ಪ ಬಸಪ್ಪ- ಕೊಪ್ಪಳ
ಶಂಕರ್​ ಬಿ ಪಾಟೀಲ್​ ಮುನೇನಕೊಪ್ಪ- ಧಾರವಾಡ
ಮುನಿರತ್ನ – ಕೋಲಾರ

Facebook Comments

Sri Raghav

Admin