ಗ್ರೀಸ್ ದ್ವೀಪದಲ್ಲಿ ಸಬ್‍ಮರೀನ್ ಆವಶೇಷಗಳಿಂದ 500 ಕೆಜಿ ‘ದೆವ್ವದ ಬಲೆ’ ತೆರವು..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಫಾಲೊನಿಯಾ ದ್ವೀಪ(ಗ್ರೀಸ್),ಆ.24- ಸಮುದ್ರದಲ್ಲಿ ಮೀನುಗಾರಿಕೆ ಬಲೆಗಳು ಮತ್ತು ತ್ಯಾಜ್ಯಗಳಿಂದ ಜಲಚರಗಳಿಗೆ ಅಪಾಯವಾಗುತ್ತದೆ. ಗ್ರೀಸ್ ದ್ವೀಪದಲ್ಲಿ ಹಲವು ವರ್ಷಗಳ ಹಿಂದೆ ಮುಳುಗಿದ್ದ ಸಬ್‍ಮರೀನ್ ಆವಶೇಷಗಳಿಂದ ಡೈವರ್‍ಗಳು ಅರ್ಧ ಟನ್ ಫಿಶಿಂಗ್ ನೆಟ್‍ಗಳನ್ನು ತೆಗೆದು ಹಾಕಿದ್ದಾರೆ.

ಗ್ರೀಸ್‍ನ ಕೆಫಾಲೊನಿಯಾ ದ್ವೀಪದಲ್ಲಿ 1941ರಲ್ಲಿ ಬ್ರಿಟಿಷ್‍ಜಲಾಂರ್ಗಾಮಿಯೊಂದು ಮುಳುಗಿತ್ತು. ಈ ಸಬ್‍ಮರೀನ್ ಸುತ್ತಲೂಕಿಲೋಗಟ್ಟಲೆ ಪರಿತ್ಯಕ್ತ ಮೀನುಗಾರಿಕೆ ಬಲೆಗಳು ಮತ್ತು ತ್ಯಾಜ್ಯಗಳು ತುಂಬಿಕೊಂಡಿದ್ದವು.

ಇದರಿಂದ ಲಾಗರ್‍ಹೆಡ್ ಪ್ರಬೇಧದ ಕಡಲಾಮೆಗಳು, ಡಾಲಿನ್‍ಗಳು ಮತ್ತು ಮಾಂಕ್ ಸೀನ್ ನೀರುನಾಯಿಗಳಿಗೆ ಅಪಾಯವಾಗುತ್ತಿತ್ತು. ಈ ಜಲಚರಗಳನ್ನು ರಕ್ಷಿಸಲು ಡೈವರ್‍ಗಳು ಅರ್ಧಟನ್ನಿಗಿಂತಲೂ ಹೆಚ್ಚು ಫಿಶಿಂಗ್ ನೆಟ್‍ಗಳು ಮತ್ತು ಹಾನಿಕಾರಕಕಸದ ರಾಶಿಯನ್ನು ತೆಗೆದು ಹಾಕಿದ್ದಾರೆ.

ಘೋಸ್ಟ್ ನೆಸ್ಟ್ ಅಥವಾ ದೆವ್ವದ ಬಲೆಗಳು ಎಂದು ಕರೆಯಲ್ಪಡುವ ದೊಡ್ಡ ಮೀನುಗಾರಿಕೆ ಬಲೆಯೊಂದು ಸಬ್‍ಮರೀನ್ ಸುತ್ತ ಸುತ್ತಿಕೊಂಡು ಸಾಗರ ಜೀವಿಗಳಿಗೆ ಮೃತ್ಯ ಬಲೆಯಾಗಿ ಪರಿಣಮಿಸುತ್ತಿತ್ತು.

ಅಪಾಯಕಾರಿ ಮೀನು ಬಲೆಗಳು ಮತ್ತು ತ್ಯಾಜ್ಯಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯ ನೇತೃತ್ವವನ್ನು ಹೆಲ್ತಿ ಸೀಸ್ ಇನಿಷಿಯೇಟಿವ್ ಸಂಸ್ಥೆ ಕೈಗೊಂಡಿತು. ಪ್ರತಿ ವರ್ಷ ನೈಲಾನ್ ಮೀನು ಬಲೆಗೆ ಸಿಲುಕಿ ಸಹಸ್ರಾರು ಜಲಚರಗಳು ಸಾವನ್ನಪ್ಪುತ್ತವೆ ಎಂದು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಕಳೆದ ವಾರಗ್ರೀಕ್ ಮತ್ತು ಡಚ್ ಸ್ವಯಂ ಸೇವಕ ಮುಳುಗು ತಜ್ಞರು ಕೆಫಾಲೊನಿಯಾ ಮತ್ತುಝಕಿನ್ ಥೋಸ್ ದ್ವೀಪಗಳ ನಡುವೆ ಇರುವ ಸಾಗರ ಪ್ರದೇಶದಲ್ಲಿ 52 ಮೀಟರ್‍ಗಳಷ್ಟು ಆಳಕ್ಕೆ ಇಳಿದರು.

ಎರಡನೇ ಮಹಾ ಯುದ್ಧದಲ್ಲಿ ಅತಿದೊಡ್ಡ ಜಲಾಂರ್ತಗಾಮಿಗಳಲ್ಲಿ ಒಂದಾದ ಎಚ್‍ಎಂಎಸ್ ಪೆರ್‍ಸ್ಯೂಸ್ ಸಬ್‍ಮರೀನ್‍ಗೆ ಅನೇಕ ವರ್ಷಗಳಿಂದ ಸಿಲುಕಿದ್ದ ಮೀನುಗಾರಿಕೆ ಬಲೆಗಳು ಮತ್ತುಇತರ ಹಾನಿಕಾರಕ ತ್ಯಾಜ್ಯಗಳನ್ನು ಡೈವರ್‍ಗಳು ತೆಗೆದು ಹಾಕಿದರು.

ಸಬ್‍ಮರೀನ್ ನಟವರ್ ಮತ್ತು ಮುಂಭಾಗದ ಬಾಹ್ಯ ಸ್ಥಳ ಸೇರಿದಂತೆ ವಿವಿಧೆಡೆ ಸಿಲುಕಿದ್ದ ಫಿಶಿಂಗ್ ನೆಟ್‍ಗಳನ್ನು ತೆಗೆದು ಹಾಕಿ ಸ್ವಚ್ಚಗೊಳಿಸುವ ಈ ಕಾರ್ಯಾಚರಣೆಗೆಐದು ದಿನಗಳು ಬೇಕಾಯಿತು.

ಸಾಗರ ಗರ್ಭದಲ್ಲಿ ಮುಳುಗಿದ 80 ವರ್ಷಗಳಷ್ಟು ಹಳೆಯದಾದ ಸಬ್‍ಮರೀನ್ ಆವಶೇಷಗಳಿಗೆ ಸಿಕ್ಕಿ ಹಾಕಿಕೊಂಡಿದ್ದ 500 ಕಿಲೋಗಳಷ್ಟು ನೈಲಾನ್ ಮೀನುಗಾರಿಕೆ ಬಲೆಗಳು ಮತ್ತುಇತರ ತ್ಯಾಜ್ಯಗಳನ್ನು ಹೊರಕ್ಕೆತೆಗೆಯಲಾಗಿದ್ದು, ಪುನರ್‍ಬಳಕೆ ವಸ್ತುಗಳನ್ನಾಗಿ ಮಾರ್ಪಡಿಸಲಾಗುತ್ತದೆ.

ಇಂಥ ತ್ಯಾಜ್ಯಗಳಿಂದ ಸಾಕ್ಸ್‍ಗಳು, ಈಜುಡುಗೆಗಳು ಮತ್ತು ಕಾರ್ಪೆಟ್‍ಗಳನ್ನು ತಯಾರಿಸಲಾಗುತ್ತದೆ.

Facebook Comments

Sri Raghav

Admin