ದೀಪಾವಳಿಯಲ್ಲಿ ಆರದಿರಲಿ ಬದುಕಿನ ಬೆಳಕು, ಪಟಾಕಿ ಸಹವಾಸದಿಂದ ದೂರವಿರಿ

ಈ ಸುದ್ದಿಯನ್ನು ಶೇರ್ ಮಾಡಿ

patakiಬೆಂಗಳೂರು, ನ.6- ಪಟಾಕಿಯಿಂದ ಪರಿಸರಕ್ಕಷ್ಟೇ ಮಾರಕವಲ್ಲ, ಜನರಿಗೂ ತೊಂದರೆಯಾಗುತ್ತದೆ. ಮಕ್ಕಳು, ಸಾಕಷ್ಟು ಜನರು ಗಾಯಗೊಂಡಿರುವ ಉದಾಹರಣೆಗಳಿವೆ. ಹಲವು ಮಕ್ಕಳು ಕಣ್ಣು ಕಳೆದುಕೊಂಡಿದ್ದಾರೆ. ಕಳೆದ ಬಾರಿ ನಗರದಲ್ಲಿ ಸುಮಾರು 70 ಮಕ್ಕಳು ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡಿದ್ದರು. ಪಟಾಕಿ ಸಿಡಿಸುವವರು ಇನ್ನಾದರೂ ಎಚ್ಚರ ವಹಿಸಿ. ಈ ಬೆಳಕಿನ ದೀಪಾವಳಿ ತಮ್ಮ ಮಕ್ಕಳ ಬಾಳಲ್ಲಿ ಅಂಧಕಾರ ತರದಿರಲಿ. ಸಂಪ್ರದಾಯದ ದೀಪಾವಳಿ ಆಚರಿಸಿ.

ಪಟಾಕಿ ಹೊಡೆಯಬೇಡಿ ಎಂಬುದು ನಮ್ಮ ಅಭಿಪ್ರಾಯವಲ್ಲ. ಆದರೆ, ಹೊಡೆಯುವ ಪಟಾಕಿಗಳು ಅಪಾಯ ರಹಿತವಾಗಿರಲಿ. ಮಕ್ಕಳಿಗೆ ತೊಂದರೆಯಾಗದಂತಿರಲಿ. ಮುನ್ನೆಚ್ಚರಿಕೆ ವಹಿಸಿ ಪಟಾಕಿಗಳನ್ನು ಸಿಡಿಸಿ. ಪರಿಸರ ಮಾಲಿನ್ಯ ನಿಯಂತ್ರಿಸಿ. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ಒಡೆಯಬೇಡಿ. ಸಂತೋಷ ಪಟ್ಟು ಸಂಭ್ರಮಿಸುವ ಪಟಾಕಿಗಳನ್ನು ಹಚ್ಚಿ. ನೀವು ಹಚ್ಚುವ ಪಟಾಕಿಗಳು ಅಪಾಯ ರಹಿತವಾಗಿರಲಿ. ನೀವು ನಿಮ್ಮ ಮಕ್ಕಳಿಗೆ ರಕ್ಷಣಾತ್ಮಕವಾಗಿ ಇರಲಿ.ವರ್ಷದಿಂದ ವರ್ಷಕ್ಕೆ ಪಟಾಕಿ ದುರಂತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಒಡೆಯುವವರ ಸಂಖ್ಯೆಯಂತೂ ಕಡಿಮೆಯಾಗುತ್ತಿಲ್ಲ. ಪಟಾಕಿಯಿಂದ ನೂರಾರು ಜನ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸಲು ಆಸ್ಪತ್ರೆಗಳು ಸದಾ ಸಿದ್ಧವಾಗಿರುತ್ತವೆ.
ಮಿಂಟೋ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‍ಗಳನ್ನೇ ಆರಂಭಿಸಲಾಗಿದೆ. 18 ರಿಂದ 20 ವೈದ್ಯರು ಹಾಗೂ ನರ್ಸ್‍ಗಳು ಸೇವೆಗೆ ಸಿದ್ಧವಾಗಿದ್ದಾರೆ. ಇದಲ್ಲದೆ, ವಿವಿಧ ಖಾಸಗಿ ಆಸ್ಪತ್ರೆಗಳು ಕೂಡ ಪಟಾಕಿಯಿಂದ ಅನಾಹುತಕ್ಕೊಳಗಾಗುವವರಿಗೆ ಸೇವೆ ಸಲ್ಲಿಸಲು ಸಜ್ಜಾಗಿವೆ.

#ಪಟಾಕಿ ಹಚ್ಚುವಾಗ ಇರಲಿ ಎಚ್ಚರ
ಪಟಾಕಿ ಪರಿಸರ ಮಾಲಿನ್ಯ ಉಂಟುಮಾಡುವುದಲ್ಲದೆ ಅಧಿಕ ಉಷ್ಣಾಂಶದಿಂದ ಹೊರಬರುವ ಹೊಗೆ ಶ್ವಾಸಕೋಶದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಹೆಚ್ಚು ಅಪಾಯ ರಹಿತ ಪಟಾಕಿಗಳನ್ನು ಹಚ್ಚಿ. ಐಎಸ್‍ಐ ಗುರುತಿನ ಪಟಾಕಿಗಳನ್ನು ಗುರುತಿಸಿ. ದೂರ ನಿಂತು ಪಟಾಕಿಗಳನ್ನು ಹಚ್ಚಿ. ಕೈಯಲ್ಲಿ ಪಟಾಕಿ ಹಚ್ಚಬೇಡಿ. ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ಕೊಡುವುದು ಬೇಡ. ಜತೆಯಲ್ಲಿ ಪಾಲಕರಿರುವುದು ಸೂಕ್ತ. ಪಟಾಕಿ ಸಿಡಿಸುವಾಗ ಒಂದೆರಡು ಬಕೆಟ್ ನೀರನ್ನು ಹತ್ತಿರ ಇಟ್ಟುಕೊಳ್ಳಬೇಕು. ಅರೆಬರೆ ಸುಟ್ಟ ಪಟಾಕಿಗಳನ್ನು ಕೈಯಲ್ಲಿ ಉಜ್ಜುವುದು ಮಾಡಬೇಡಿ. ಪಟಾಕಿ ಹಚ್ಚಲು ಉದ್ದನೆಯ ಅಗರ್‍ಬತ್ತಿಗಳನ್ನು ಬಳಸಿ. ಆದಷ್ಟು ಕಡಿಮೆ ಪಟಾಕಿಗಳನ್ನು ಒಡೆಯಿರಿ. ಬಯಲಲ್ಲಿ ಪಟಾಕಿಗಳನ್ನು ಹಚ್ಚಿ. ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕು ತರಲಿ. ಬದುಕನ್ನು ಸುಡದಿರಲಿ.

ಬದುಕನ್ನು ಅಂಧಕಾರ ಮಾಡಿಕೊಳ್ಳಬೇಡಿ.ಮಕ್ಕಳು ಪಟಾಕಿ ಹಚ್ಚುವಾಗ ಅವರ ಜತೆಗಿದ್ದು ಎಚ್ಚರ ವಹಿಸಿ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಪಟಾಕಿಗಳಿಂದ ಅಪಾಯ ಉಂಟಾಗುವುದು ಸಾಮಾನ್ಯವಾಗಿದೆ. ಅಜಾಗರೂಕತೆಯಿಂದ ನೂರಾರು ಮಂದಿ ಗಾಯಗೊಂಡು ಬದುಕನ್ನು ಅಂಧಕಾರವನ್ನಾಗಿಸಿಕೊಳ್ಳುತ್ತಾರೆ. ಪಟಾಕಿ ಕಣ್ಣಿಗೆ ಮಾರಕವಾಗಿದ್ದು, ಅಂಧತ್ವ ತರುವ ಸಾಧ್ಯತೆ ಇದೆ. ಕಣ್ಣು ಅತ್ಯಂತ ಸೂಕ್ಷ್ಮ ಇಂದ್ರಿಯವಾಗಿದ್ದು, ಪಟಾಕಿ ಹಚ್ಚುವ ಮುನ್ನ ಎಚ್ಚರ ವಹಿಸಬೇಕು. ಹಾನಿ ಮಾಡಿಕೊಂಡ ಮೇಲೆ ಪರಿತಪಿಸುವುದಕ್ಕಿಂತ ಹಾನಿ ಮಾಡಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕಾದ ಡಾ.ಭುಜಂಗಶೆಟ್ಟಿ ಹೇಳುತ್ತಾರೆ.

hospital#24 ಗಂಟೆಯೂ ಸೇವೆ ಲಭ್ಯ
ಪಟಾಕಿಯಿಂದ ಅನಾಹುತ ಸಂಭವಿಸಿದರೆ ನಗರದ ಕೆಲವು ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
1. ಮಿಂಟೋ ಆಸ್ಪತ್ರೆ- 080 2670646
ಕಣ್ಣಿನ ಬ್ಯಾಂಕ್ ಶಂಕರ್- 9481740137
2. ಕಣ್ಣಿನ ಆಸ್ಪತ್ರೆ ಮಾರತ್ತಹಳ್ಳಿ- 080 28542727/28
3. ರೈನ್‍ಬೋ ಮಕ್ಕಳ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ- 7349739080
4. ಜಯನಗರ ನೇತ್ರಧಾಮ- 080 26088000
5. ನಾರಾಯಣ ನೇತ್ರಾಲಯ- 9902546046, 9902821128
6. ಪೋರ್ಟಿಸ್ ಆಸ್ಪತ್ರೆ, ವಸಂತನಗರ- 9686860310
7. ರಾಜಾಜಿನಗರ- 080 61914665
8. ಅಗರ್ವಾಲ್ ಕಣ್ಣಿನ ಆಸ್ಪತ್ರೆ- 080 2240736

 

Facebook Comments

Comments are closed.