ಕೊರೊನಾ ಕಾರ್ಗತ್ತಲು ತೊಲಗಲಿ : ದೀಪಾವಳಿಗೆ ವಿಶ್ವದ ಗಣ್ಯರ ಸಂದೇಶ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಮೆಲ್ಬೋರ್ನ್/ಲಂಡನ್, ನ.13- ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ವಿಶ್ವದ ಅನೇಕ ಗಣ್ಯರು ಭಾರತೀಯರಿಗೆ ಮತ್ತು ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರಿಗೆ ಶುಭ ಕೋರಿದ್ದಾರೆ.  ಅಮೆರಿಕದ ಅಧ್ಯಕ್ಷರಾಗಲಿರುವ ಜೋ ಬಿಡೆನ್, ಉಪಾಧ್ಯಕ್ಷೆ ಹುದ್ದೆ ಅಲಂಕರಿಸಲಿರುವ ಕಮಲಾ ಹ್ಯಾರಿಸ್, ಅಮೆರಿಕ ಪ್ರಭಾವಿ ರಾಜಕಾರಣಿಗಳಾದ ಭಾರತೀಯ ಮೂಲದ ರಾಜಾ ಕೃಷ್ಣಮೂರ್ತಿ, ಪ್ರಮೀಳಾ ಜಯಪಾಲ್, ರೋ ಖನ್ನಾ, ಅಮಿ ಬೇರಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಮತ್ತು ಖ್ಯಾತನಾಮರ ಬೆಳಕಿನ ಹಬ್ಬದ ಶುಭ ಸಂದೇಶ ತಿಳಿಸಿದ್ದಾರೆ.

ಅಮೆರಿಕದ ಉಸ್ತುವಾರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಆಸ್ಟ್ರೇಲಿಯಾದ ಪ್ರಭಾನಮಂತ್ರಿ ಸ್ಕಾಟ್ ಮೊರಿಸನ್, ಬ್ರಿಟನ್ ಪ್ರದಾನಿ ಬೋರಿಸ್ ಜಾನ್ಸನ್, ಜಸ್ಸಿಂಡಾ ಅಡ್ರೆನ್ ಸೇರಿದಂತೆ ವಿಶ್ವದ ಅನೇಕ ಗಣ್ಯರು ದೀಪಾವಳಿ ಶುಭಾಶಯ ಕೋರಿದ್ದಾರೆ.

ಈ ಬಾರಿ ವೀಪಾವಳಿಗೆ ಅತ್ಯಂತ ಮಹತ್ವವಿದೆ. ಇಡೀ ವಿಶ್ವ ಕೊರೊನಾ ವೈರಸ್ ಆರ್ಭಟದ ಕಗ್ಗತ್ತಲಲ್ಲಿದೆ. ಈ ಸಂದರ್ಭದಲ್ಲಿ ಬೆಳಕಿನ ಹಬ್ಬ ದೀಪಾವಳಿ ಕೋವಿಡ್ ಕಾರ್ಗತ್ತಲನ್ನು ತೊಡೆದು ಹಾಕಲಿ ಎಂದು ಗಣ್ಯರು ಶುಭ ಸಂದೇಶಗಳಲ್ಲಿ ತಿಳಿಸಿದ್ದಾರೆ.

Facebook Comments