35ನೇ ಮಾಸ್ಟರ್ಸ್ ಕಪ್ ಗೆದ್ದ ಡೊಕೊವಿಚ್

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಆ. 30- ಟೆನ್ನಿಸ್ ಲೋಕದ ದಿಗ್ಗಜ, ನಂ.1 ಆಟಗಾರ ನೊವಕ್ ಡೊಕೊವಿಚ್ ಅವರು ತಮ್ಮ ಟೆನ್ನಿಸ್ ರಂಗದಲ್ಲಿ 35ನೆ ಮಾಸ್ಟರ್ಸ್ ಕಪ್ ಹಾಗೂ ತಮ್ಮ ಟೆನ್ನಿಸ್ ಲೋಕದಲ್ಲಿ 80ನೆ ಪ್ರಶಸ್ತಿ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೊರೊನಾ ಕಾಟದಿಂದ ಕೆಲವು ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು, ಆದರೆ ಟೆನ್ನಿಸ್ ರಂಗಕ್ಕೆ ಮತ್ತೆ ಜೀವ ಬಂದ ನಂತರ ನೊವಿಕ್ ತಮ್ಮ ಓಟವನ್ನು ಮುಂದುವರೆಸಿದ್ದು, ಕಳೆದ ವಾರವಷ್ಟೇ ಯುಎಸ್ ಓಪನ್ ಮುಕುಟ ಗೆದ್ದಿದ್ದ ಡೊಕೊವಿಚ್ ಈಗ ವೆಸ್ಟ್ರನ್ ಮತ್ತು ಸೌರ್ಥನ್ ಓಪನ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.

ನಿನ್ನೆ ಇಲ್ಲಿ ನಡೆದ ಫೈನಲ್ಸ್ ಪಂದ್ಯದಲ್ಲಿ ನಂ. 1 ಆಟಗಾರ ನೊವಿಕ್ ಡೊಕೊವಿಚ್ ಕೆನಡಾದ ಮಿಲೊಸ್ ರಾಹೊನಿಕ್ ವಿರುದ್ಧ 1-6, 6-3, 6-4 ಸೆಟ್‍ಗಳಿಂದ ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಈ ಮುಕುಟವನ್ನು ಗೆಲ್ಲುವುದು ನನಗೆ ತುಂಬಾ ಕಷ್ಟವಾಗಿತ್ತು, ಕಳೆದ 3-4 ದಿನಗಳಿಂದಲೂ ನಾನು ದೈಹಿಕ ಹಾಗೂ ಮಾನಸಿಕವಾಗಿ ಮುಕುಟ ಗೆಲ್ಲಲು ಸಿದ್ಧತೆ ನಡೆಸುತ್ತಿದ್ದೆ, ಇಂತಹ ಬಲಿಷ್ಠ ಟೂರ್ನಿಗಳಲ್ಲಿ ಗೆಲ್ಲಬೇಕಾದರೆ ಆಟಗಾರ ಸದೃಢನಾಗಿರಬೇಕಾಗುತ್ತದೆ ಎಂದು ಡೊಕೊವಿಚ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

Facebook Comments

Sri Raghav

Admin