ಉತ್ತರಪ್ರದೇಶದಲ್ಲಿ ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಫಿರೋಜÁಬಾದ್, ಅ.17-ಉತ್ತರಪ್ರದೇಶದ ಫಿರೋಜಾಬಾದ್‍ನಲ್ಲಿ ಬೈಕ್ ಮೇಲೆ ಬಂದ ಹಂತಕರು ಸ್ಥಳೀಯ ಬಿಜೆಪಿ ನಾಯಕ ಡಿ.ಕೆ.ಗುಪ್ರಾ (46) ಅವರ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ.  ಈ ಕೃತ್ಯದ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನವೆಂಬರ್ 3ರಂದು ವಿಧಾನಸಭೆ ಚುನಾವಣೆ ನಡೆಯುವ ತಂಡ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗ್ಲಾ ಬೀಚ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ತಮ್ಮ ಮಳಿಗೆಯನ್ನು ಬಂದ್ ಮಾಡಿ ಮನೆಗೆ ಹಿಂದಿರುಗುತ್ತಿದ್ದ ಗುಪ್ತ ಅವರ ಮೇಲೆ ಬೈಕ್ ಸವಾರರು ಗುಂಡು ಹಾರಿಸಿ ಪರಾರಿಯಾದರು. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆ ಮಾರ್ಗದಲ್ಲಿ ಅವರು ಕೊನೆಯುಸಿರೆಳೆದರು.

ಗುಪ್ತಾ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Facebook Comments