ಇತೀಚಿನ ರಾಜಕೀಯ ಘಟನಾವಳಿಗಳು ವೈರಾಗ್ಯ ತರಿಸಿದೆ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12-ಇತೀಚಿನ ರಾಜಕೀಯ ಘಟನಾವಳಿಗಳನ್ನು ಗಮನಿಸಿದರೆ ವೈರಾಗ್ಯವಾಗುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಗೆ ತಿಳಿಸಿದರು. ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸುವ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ದಾಸರವಾಣಿಯನ್ನು ಉಲ್ಲೇಖಿಸಿದರು. ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು ಮಠ ಏನಾದರೂ ಸ್ಥಾಪನೆ ಮಾಡುತ್ತೀರ ಎಂದರು.

ಆಗ ತಾವು ಶಾಲೆಗೆ ಸೇರಿದಾಗ ನಮ್ಮ ಕ್ಷೇತ್ರದ ಶಾಸಕರಾಗಿದ್ದ ಕರಿಯಪ್ಪನವರ ಪಾದಗಳಿಗೆ ನಮಸ್ಕರಿಸುವಂತೆ ನಮ್ಮ ತಂದೆ ಹೇಳಿದ್ದರು. ಆ ಕ್ಷೇತ್ರದಿಂದ ಶಾಸಕನಾಗಿ ಬಂದವನು.

ದಿನನಿತ್ಯ ಮಾಧ್ಯಮಗಳಲ್ಲಿ ರಾಜಕಾರಣಿಗಳ ಬಗ್ಗೆ ಬಿತ್ತರವಾಗುತ್ತಿರುವುದನ್ನು ನೋಡಿದರೆ ಹೀಗಾಗಿ ವೈರಾಗ್ಯ ತಾಳಿದರೆ ಸೂಕ್ತವೇನು ಎಂದೆನಿಸುತ್ತದೆ ಎಂದರು.

ಶಿವಳ್ಳಿಯವರು ತಮ್ಮ ಆತ್ಮೀಯ ಸ್ನೇಹಿತರಾಗಿದ್ದರು. ಯಮನು ಯಾರಿಗೂ ಕರುಣೆ ತೋರುವುದಿಲ್ಲ. ಶಿವಹಳ್ಳಿ ಅವರ ನಿಧನ ತುಂಬ ನೋವುಂಟು ಮಾಡಿದೆ ಎಂದು ಹೇಳಿದರು.

ಅದೇ ರೀತಿ ಸಾಹಿತಿ ಗಿರೀಶ್ ಕಾರ್ನಾಡ್ ನಿಧನ ಕೂಡ ತುಂಬಲಾರದ ನಷ್ಟವುಂಟು ಮಾಡಿದೆ. ಸರ್ಕಾರಿ ಗೌರವವನ್ನು ಅವರ ಕುಟುಂಬವರ್ಗದವರು ಬೇಡ ಎಂದು ಹೇಳಿದರು.

Facebook Comments