ಡಿ.ಕೆ.ಶಿವಕುಮಾರ್‌ಗೆ ಸೆ.13ರ ವರಿಗೆ ಇ.ಡಿ ವಶಕ್ಕೆ ನೀಡಲು ಕಾರಣ ಏನು ಗೊತ್ತಾ?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ- ಅಕ್ರಮ ಹಣದ ವಾಹಿವಾಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು 9 ದಿನಗಳ ( ಸೆ.13 ) ಕಾಲ ಜಾರಿ ನಿದೇರ್ಶನಾಲಯ(ಇ.ಡಿ)ದ ಅಧಿಕಾರಿಗಳ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಸುಮಾರು 1 ಗಂಟೆ 45 ನಿಮಿಷ. ಎರಡು ಕಡೆ ವಾದ – ವಿವಾದ ಆಲಿಸಿದ ದೆಹಲಿಯ ರೋಸ್ ಅವುನ್ಯೂ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹರ್ ಅವರು, 09 ದಿನಗಳ ಕಾಲ ಶಿವಕುಮಾರ್ ಅವರನ್ನು ಇ.ಡಿ. ವಶಕ್ಕೆ ನೀಡಿ ತೀರ್ಪು ಪ್ರಕಟಿಸಿದರು.

ನ್ಯಾಯಾಲಯದ ತೀರ್ಪಿನಿಂದ ಕಾನೂನು ಸಮರದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಹಿನ್ನೆಡೆಯಾಗಿದ್ದು, ಇನ್ನೂ ಹತ್ತು ದಿನಗಳ ಕಾಲ ಇಡಿ ವಶದಲ್ಲಿ ಇರಬೇಕಾಗಿದೆ.
ನ್ಯಾಯಾಧೀಶರು ತೀರ್ಪು ನೀಡುತ್ತಿದ್ದಂತೆ ಕಟ ಕಟೆಯಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ನಿರಾಶೆಯ ಕಾರ್ಮೋಡ ಅವರಿಸಿತು. ಸೆ.13 ರ ಬಳಿಕ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಗೆಯನ್ನು ಕೈಗೆತ್ತಿಗೊಳ್ಳುವುದಾಗಿ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದರು.

ಡಿಕೆಶಿ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು, ಪ್ರತಿ ದಿನ ಅರ್ಧಗಂಟೆ ಕುಟುಂಬದ ಸದಸ್ಯರನ್ನು ಭೇಟಿ ಆಗಬಹುದು. ಅನಾರೋಗ್ಯದ ಹಿನ್ನೆಲೆಯಲ್ಲಿ ಪರ್ಸನಲ್ ಡಾಕ್ಟರ್ ರಂಗನಾಥ್ ಅವರನ್ನು ಹೊಂದಲು ಅನುಮತಿ ನೀಡಿದರು. ಇದರ ಜೊತೆ ವಕೀಲರನ್ನು ಭೇಟಿಯಾಗಬಹುದು ಎಂದು ಸೂಚಿಸಿದರು. ಡಿಕೆಶಿಯ ಜಾಮೀನು ಅರ್ಜಿ ವಿಚಾರಣೆ ಸೆ.13 ರಂದು ಕೋರ್ಟ್ ಮುಂದೆ ಬರಲಿದೆ.

ಮತ್ತೊಂದೆದೆ ಡಿಕೆ ಶಿವಕುಮಾರ್ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ನ್ಯಾಯಾಲಯ ಮುಂದೂಡಿದೆ.  ತೀರ್ಪು ಪ್ರಕಟವಾದ ಬಳಿಕ ಶಿವಕುಮಾರ್ ಅವರನ್ನು ಇ.ಡಿ.ಅಧಿಕಾರಿಗಳು ದೆಹಲಿಯ ಲೋಕ ನಾಯಕ ಮಾಗ್9ನಲ್ಲಿರುವ ಕಚೇರಿಗೆ ಭಾರೀ ಬಿಗಿ ಭದ್ರತೆಯಲ್ಲಿ ಕರೆದೊಯ್ದರು. ಡಿಕೆ ಶಿವಕುಮಾರ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಧ್ಯಾನ್ ಕೃಷ್ಣನ್ ವಾದ ಮಂಡಿಸಿದರೆ, ಇಡಿ ಪರವಾಗಿ ಎಎಸ್‍ಜಿ ಕೆಎಂ ನಟರಾಜ್ ವಾದಿಸಿದರು. ಸುಮಾರು 2 ಗಂಟೆಗಳ ಕಾಲ ವಾದ, ಪ್ರತಿವಾದ ಆಲಿಸಿದ ನ್ಯಾ.

ಅಜಯ್ ಕುಮಾರ್ ಕುಹಾರ್ ಸಂಜೆ 5.42ರ ವೇಳಗೆ 15 ನಿಮಿಷ ಆದೇಶವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಇದಾದ ಬಳಿಕ ಸಂಜೆ 7.11 ರ ವೇಳೆಗೆ ಆದೇಶ ಪ್ರಕಟಿಸಿದರು.
ಕಳೆದ ನಾಲ್ಕು ದಿನಗಳಿಂದ ಸತತ ವಿಚಾರಣೆ ನಡೆಸಿ ಡಿಕೆಶಿಗೆ 300ಕ್ಕೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದ ಇ.ಡಿ.ಅಧಿಕಾರಿಗಳು ಮಂಗಳವಾರ ಸಂಜೆ ಬಂಧಿಸಿದ್ದರು.

ದೆಹಲಿಯಲ್ಲಿನ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಡಿಕೆಶಿಯವರನ್ನು ಶುಕ್ರವಾರದಿಂದ ಇ.ಡಿ. ಪ್ರಧಾನ ಕಚೇರಿಯಲ್ಲಿ ಮ್ಯಾರಥಾನ್ ವಿಚಾರಣೆಗೆ ಒಳಪಡಿಸಲಾಗಿತ್ತು. ಶನಿವಾರ ಮತ್ತು ಸೋಮವಾರದಂದು ಮಧ್ಯಾಹ್ನ ಭೋಜನ ವಿರಾಮಕ್ಕೆಂದು ಹೊರ ಹೋಗಲು ಅವಕಾಶ ನೀಡಿದ್ದ ಇಡಿ ಅಧಿಕಾರಿಗಳು, ಮಂಗಳವಾರ 12 ಗಂಟೆಗೆ ವಿಚಾರಣೆ ಆರಂಭಿಸಿದ ಬಳಿಕ ಹೊರ ಹೋಗುವುದಕ್ಕೂ ಅವಕಾಶ ನೀಡಿರಲಿಲ್ಲ.

ಆರಂಭದಲ್ಲಿ ಎಎಸ್‍ಜಿ ಕೆ.ಎಂ ನಟರಾಜ್ ವಾದ ಆರಂಭಿಸಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಆರೋಪಿಯನ್ನು 14 ದಿನ ಇಡಿ ವಶಕ್ಕೆ ನೀಡಬೇಕು. ಐಟಿ ತನಿಖೆ ಮತ್ತು ಹಲವು ಸಾಕ್ಷಿಗಳ ಹೇಳಿಕೆಗಳು ಡಿಕೆ ಶಿವಕುಮಾರ್ ವಿರುದ್ಧ ಇವೆ. ಸಮನ್ಸ್ ಜಾರಿಯಾದ ಮೇಲೆ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ವಿಚಾರಣೆಗೆ ಸಹಕರಿಸುತ್ತಿಲ್ಲ. ತನಿಖೆ ಮಹತ್ವದ ಹಂತದಲ್ಲಿದೆ. ಡಿಕೆಶಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಬೇಕಿದೆ. ಕೆಲ ವಿಚಾರಗಳು ಡಿಕೆಶಿಗಷ್ಟೇ ಗೊತ್ತು. ಆದರೆ ಡಿಕೆಶಿ ತನಿಖೆಯ ಹಾದಿ ತಪ್ಪಿಸ್ತಿದ್ದಾರೆ. ಹಣದ ಮೂಲವನ್ನು ಬಾಯ್ಬಿಡಿಸಬೇಕಿದೆ. ಹೀಗಾಗಿ 14 ದಿನ ಇಡಿ ಕಸ್ಟಡಿಗೆ ನೀಡಬೇಕು ಎಂದು ವಾದ ಮಂಡಿಸಿದರು.

ಈ ವಾದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಅಭಿಷೇಕ್ ಮನು ಸಿಂಘ್ವಿ, ಡಿಕೆಶಿಯನ್ನು ವಿಚಾರಣೆಗೆ ಒಳಪಡಿಸಿದ್ದು ಮೂವರು ಅಧಿಕಾರಿಗಳು. ಆದ್ರೆ ಸಹಿ ಮಾಡಿರುವುದು ಒಬ್ಬರೇ. ಇದನ್ನು ಗಮನಿಸಬೇಕು. ಈಗಾಗಲೇ ಡಿಕೆಶಿಯನ್ನು 33ರಿಂದ 34 ಗಂಟೆ ಕಾಲ ಇ.ಡಿ ವಿಚಾರಣೆಗೆ ಒಳಪಡಿಸಿದೆ. ನಮ್ಮ ಕಕ್ಷಿದಾರ ಎಲ್ಲೂ ಪರಾರಿಯಾಗಿಲ್ಲ. ಕರೆದಾಗಲೆಲ್ಲಾ ಬಂದಿದ್ದಾರೆ. ಹೀಗಾಗಿ ಇಡಿ ವಶಕ್ಕೆ ನೀಡುವ ಅಗತ್ಯವಿಲ್ಲ. ಇಡಿ ಪರ ವಕೀಲರು, ಹೊಸದೇನನ್ನೂ ತೋರಿಸುತ್ತಿಲ್ಲ. ಎಲ್ಲ ಹಳೆಯದನ್ನೇ ತೋರಿಸುತ್ತಿದ್ದಾರೆ. ಹೀಗಾಗಿ ಇಡಿ ವಾದದಲ್ಲಿ ಹುರುಳಿಲ್ಲ. ಡಿಕೆಶಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

#ಕಾವೇರಿದ ವಾದ- ವಿವಾದ

ಇದಕ್ಕೂ ಮುನ್ನ ಎರಡು ಕಡೆ ನ್ಯಾಯಾಲಯದಲ್ಲಿ ಭಾರೀ ವಾದ -ವಿವಾದ ನಡೆಯಿತು.ಇಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್
ದೆಹಲಿಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಬೇಕಾಗಿದೆ. ಇದು ಪಿಎಂಎಲ್​ ಕಾಯ್ದೆ ಅಡಿ ಬರುವ ಪ್ರಕರವಾಗಿದೆ. ಈವರೆಗೂ ಶಿವಕುಮಾರ್ ಸರಿಯಾಗಿ ವಿಚಾರಣೆಗೆ ಸಹಕರಿಸಿಲ್ಲ, ಹೀಗಾಗಿ ಅವರನ್ನು ಹೆಚ್ಚಿನ ವಿಚಾರಣೆ ನಡೆಸಬೇಕಾಗಿದ್ದು, 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ವಾದಿಸಿದರು.

ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಆರೋಪಿಯು ಪ್ರಶ್ನಗಳಿಗೆ ಹಾರಿಕೆಯ ಉತ್ತರ ನೀಡುತ್ತಿದ್ದು, ತನಿಖೆಗೆ ಅಡ್ಡಿಯಾಗಿದೆ. ಈ ಕಾರಣ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಇಡಿ ಪರ ವಕೀಲರು ವಾದಿಸಿದರು. ಆರೋಪಿ ತನಿಖೆ ವೇಳೆ ಸೂಕ್ತ ಉತ್ತರ ನೀಡದೆ ತನಿಖೆಯ ಹಾದಿ ತಪ್ಪಿಸುವ ಯತ್ನ ಮಾಡಿದ್ದಾರೆ. ನಗದು ವ್ಯವಹಾರದ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ.

ಡಿ.ಕೆ.ಶಿವಕುಮಾರ್ ಪೂರ್ಣ ಅಸಹಕಾರ ನೀಡಿದ್ದಾರೆ. ಸಿಬಿಐ ಜತೆಗೂ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. 44 ಕೋಟಿ ರೂ. ಅಕ್ರಮ ಹಣದ ವ್ಯವಹಾರ ಪತ್ತೆಯಾಗಿದೆ. ಡಿಕೆಶಿ ಬಳಿ 22 ಕೋಟಿ ಅಕ್ರಮ ಹಣ ಪತ್ತೆಯಾಗಿದೆ. ಹಣಕಾಸು ಅವ್ಯವಹಾರ ಕಾಯ್ದೆ ಅಡಿ ಡಿ.ಕೆ.ಶಿವಕುಮಾರ್ ಶಿಕ್ಷಾರ್ಹ ಅಪರಾಧವೆಸಗಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳು ಕೂಡ ಸಿಕ್ಕಿವೆ. ಇತರೆ ಆರೋಪಿಗಳನ್ನೂ ತನಿಖೆ ಮಾಡಬೇಕಿದೆ ಎಂದು ವಾದ ಮಂಡಿಸಿದರು.

ಇಷ್ಟೇ ಅಲ್ಲದೇ ಆರೋಪಿಯು ಪ್ರಭಾವಿ ರಾಜಕಾರಣಿಯಾಗಿದ್ದು ಸಾಕ್ಷ್ಯ ನಾಶ ಮಾಡಬಹುದಾದ ಸಾಧ್ಯತೆ ಇದೆ ಎಂದು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಸಂಚು ಕೂಡ ಇದ್ದು, ಇವೆಲ್ಲವನ್ನೂ ವಿಚಾರಣೆ ನಡೆಸಬೇಕಿದೆ.ಶಿವಕುಮಾರ್ ಅವರ ಕೌಟುಂಬಿಕ ಆಸ್ತಿ ಕೆಲವೇ ವರ್ಷಗಳಲ್ಲಿ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದ್ದು ಇಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ನಿಯಮಗಳೂ ಒಳಪಡುತ್ತದೆ ಎಂದು ಇಡಿ ಪರ ವಕೀಲರು ವಾದ ಮಂಡಿಸಿದರು.

ನ್ಯಾಯಾಲಯದ ಮುಂದೆ ಸಹಿ ಮಾಡಿದ ಮಾತ್ರಕ್ಕೆ ನಮ್ಮ ಅರ್ಜಿ ವಜಾ ಮಾಡಬೇಡಿ. 14 ದಿನ ಇಡಿ ಕಸ್ಟಡಿಗೆ ಕೊಡಿ. ಕರ್ನಾಟಕ ಹೈಕೋರ್ಟ್ ಬೆಳವಣಿಗೆಗಳನ್ನು ಇಲ್ಲಿ ಹೇಳಲಾಗುತ್ತಿದೆ. ಈಗಾಗಲೇ ಸಮನ್ಸ್ ರದ್ದು ಅರ್ಜಿಯನ್ನು ವಜಾ ಮಾಡಲಾಗಿದೆ. ವಿಚಾರಣೆ ಅಪೂರ್ಣವಾಗಿದೆ. ಹೀಗಾಗಿ ಮತ್ತಷ್ಟು ವಿಚಾರಣೆ ನಡೆಸಬೇಕಿದೆ. ಇಡಿ ಕಸ್ಟಡಿಗೆ ಕೊಡಿ. ಪಿಎಂಎಲ್‍ಎ ಕಾಯ್ದೆ ಪ್ರಕಾರ ಅಕ್ರಮ ಹಣ ಪತ್ತೆ ಪ್ರಕರಣ ಸ್ವತಂತ್ರ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಬೇಕು. ತನಿಖೆಯ ದೃಷ್ಟಿಯಿಂದ ಎಲ್ಲವನ್ನೂ ಈಗಲೇ ಕೋರ್ಟ್ ಮುಂದೆ ಹೇಳಲು ಆಗುವುದಿಲ್ಲ. ಇನ್ನೂ ತನಿಖೆ ಮುಗಿದಿಲ್ಲ. ಹೀಗಾಗಿ ಕಸ್ಟಡಿಗೆ ನೀಡಬೇಕೆಂದು ಬಲವಾಗಿ ವಾದಿಸಿದರು.

#ಸರ್ಕಾರ ನಾಯಿ ಇದ್ದಂತೆ

ಇಡಿ ವಾದವನ್ನು ಅಲ್ಲಗಳೆದ ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು,ಸರ್ಕಾರ ನಾಯಿ ಇದ್ದಂತೆ, ಇಡಿ ಅದರ ಬಾಲ: ಪ್ರಕರಣದಲ್ಲಿ ತನಿಖಾಧಿಕಾರಿ ತಮ್ಮ ವಿವೇಚನೆ ಉಪಯೋಗಿಸಿಲ್ಲ. ಸರ್ಕಾರ ನಾಯಿ ಇದ್ದಂತೆ ಎಂದುಕೊಂಡರೆ ಇಡಿ ಅದರ ಬಾಲದಂತೆ ವರ್ತಿಸುತ್ತಿದೆ. ಇಡಿ ಕಸ್ಟಡಿ ಅಥವಾ ನ್ಯಾಯಾಂಗ ಬಂಧನ ಅಪರೂಪದ ಸನ್ನಿವೇಶಗಳಲ್ಲಿ ಮಾತ್ರ ಸಾಧ್ಯ. ತನಿಖಾ ಸಂಸ್ಥೆಗಳು ಕಸ್ಟಡಿಗೆ ಕೇಳುವ ಮುನ್ನ ಪ್ರಬಲ ಸಾಕ್ಷ್ಯಗಳನ್ನು ನೀಡಬೇಕು ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ನೀಡುವುದಕ್ಕೆ ಪೂರಕವಾದ ದಾಖಲೆ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ತನಿಖಾಧಿಕಾರಿಗಳು ಕರೆದಾಗಲೆಲ್ಲ ಶಿವಕುಮಾರ್ ಅವರು ವಿಚಾರಣೆಗೆ ಹಾಜರಾಗಿ ಸಹಕರಿಸಿದ್ದಾರೆ. ಅವರೆಲ್ಲೂ ಓಡಿ ಹೋಗಲ್ಲ. ಹೀಗಾಗಿ ಅವರನ್ನು ಇಡಿ ವಶಕ್ಕೆ ಒಪ್ಪಿಸುವ ಅಗತ್ಯ ಇಲ್ಲ ಎಂದು ಪ್ರತಿವಾದ ಮಂಡಿಸಿದರಲ್ಲದೇ ಜಾಮೀನಿಗೆ ಅರ್ಜಿ ಹಾಕಿದರು.

ನಾವು ವಶಕ್ಕೆ ಪಡೆಯಲು ಕೋರ್ಟ್​ ಮುಂದೆ ಅರ್ಜಿಗೆ ಸಹಿ ಹಾಕಿದ್ದೇವೆ. ಕಾನೂನು ಪ್ರಕಾರ ಇದನ್ನು ತಿರಸ್ಕರಿಸಲು ಬರುವುದಿಲ್ಲ .​ಕರ್ನಾಟಕ ಹೈಕೋರ್ಟ್​ ಡಿಕೆಶಿ ಅರ್ಜಿಯನ್ನ ವಜಾ ಮಾಡಿದೆ.ಅಕ್ರಮ ಹಣ ವರ್ಗಾವಣೆ ಪಿಎಂಎಲ್​​ಎ ಕಾಯ್ದೆ ವ್ಯಾಪ್ತಿಗೆ ಬರುತ್ತದೆ.​ಇದು ಕೇವಲ ಐಟಿ ಅಪರಾಧವಲ್ಲ. ಐಪಿಸಿ ಸೆಕ್ಷನ 120ಬಿ ಪ್ರಕಾರ ಒಳಸಂಚು ಆರೋಪವೂ ಇದೆ ಎಂದು ವಾದ ಮಂಡನೆ ಮಾಡಿದರು. ಪಿಎಂಎಲ್​​​​​ ಕಾಯ್ದೆಯ ಸೆಕ್ಷನ್​​ 50(4) ಪ್ರಕಾರ ಅವರನ್ನ ಬಂಧಿಸುವಂತಿಲ್ಲ; ಹಿರಿಯ ನ್ಯಾಯವಾದಿ ದ್ಯಾನ್​​​ ಕೃಷ್ಣನ್​​172 ಸಿಆರ್​​ಪಿಸಿ ಪ್ರಕಾರ ಇವರು ಡೈರಿಯನ್ನ ಗುರುತಿಸಿದ್ದಾರೆ. ಆದರೆ ಇದರಲ್ಲಿ ವಿನ್ಯಾಸ ಹಾಗೂ ಪ್ಯಾರ ನಂಬರ್ ಉಲ್ಲೇಖಿಸಿಲ್ಲನನ್ನ ಮನೆ ಸೇರಿದಂತೆ ಎಲ್ಲ ವಿವರಗಳನ್ನ ನಾನು ಘೋಷಿಸಿಕೊಂಡಿದ್ದಾರೆ.
ಅವರಿಗೆ ಲೋ ಬಿಪಿ, ಹೈ ಸುಗರ್​​​​​ ಇದೆ.

ಅವರು,ಔಷಧ ಪಡೆಯುವ ಅಗತ್ಯ ಇದೆ. ಇದೇ ಕಾರಣದಿಂದ ಇವತ್ತು ಅವರಿಗೆ ಆಹಾರ ನೀಡಲಾಗಿಲ್ಲ.ದಯವಿಟ್ಟು ಜಾಮೀನು ಮಂಜೂರು ಮಾಡಿ ಎಂದು ಕೋರಿದರು.
ಪ್ರಕರಣದಲ್ಲಿ ಬಂಧನ ವಿಶೇಷ ಕಾಲದಲ್ಲಿ ಮಾತ್ರ ಮಾಡಬಹುದು.ಆದರೆ ಇದು ಡಿಕೆಶಿಗೆ ಅನ್ವಯ ಆಗಲ್ಲ, ಇಡಿ ವಿಚಾರಣೆಗೆ ಮತ್ತಷ್ಟು ಕಾಲ ವಶಕ್ಕೆ ಪಡೆಯುವ ಅಗತ್ಯವಿಲ್ಲ.
ಇಡಿ ವಶಕ್ಕೆ ನೀಡುವ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಬೇಕಿದೆ. ಈ ಸಂಬಂಧ ಘನ ನ್ಯಾಯಾಲಯ ತಮ್ಮ ವಿವೇಚನೆ ಬಳಸಬೇಕಿದೆ ಎಂದು ಮನವಿ ಮಾಡಿದರು.

ಆಗಸ್ಟ್​​ 20 ರಂದು ಕರ್ನಾಟಕ ಹೈಕೋರ್ಟ್​​​ ಈ ಬಗ್ಗೆ ಐಟಿ ಸಲ್ಲಿಸಿದ್ದ ದೂರಿನ ಬಗ್ಗೆ ವಿಚಾರಣೆ ನಡೆಸಿ ತಡೆಯಾಜ್ಞೆ ನೀಡಿದೆ.2- 08 2017 ರಲ್ಲಿ ಐಟಿ ದಾಳಿ ಮಾಡಿದ್ದ ವೇಳೆ ವಶಪಡಿಸಿಕೊಂಡ ದಾಖಲೆಗಳ ಮೇಲೆ ಈ ಕೇಸ್​ ನಡೆಯುತ್ತಿದೆಇಡಿ ಡಿಕೆಶಿ ಅವರನ್ನ ಬಂಧಿಸುವ ಅಗತ್ಯ ಏನಿದೆ? ನಾಲ್ಕು ದಿನಗಳ ವಿಚಾರಣೆ ನಡೆಸಲಾಗಿದೆ. ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದಾರೆ ಎಂದು ಸಮರ್ಥಿಕೊಂಡರು.

ಯಾಂತ್ರಿಕವಾಗಿ ಇಡಿ ಡಿಕೆಶಿ ಅವರನ್ನ ಇಡಿ ವಶಕ್ಕೆ ನೀಡಲು ಸಾಧ್ಯವೇ ಇಲ್ಲ.ಪಿಎಂಎಲ್​​​ಎ ಕಾಯ್ದೆ ಐಟಿ ಆ್ಯಕ್ಟ್​​ನ ಸೆಕ್ಷನ್​​ 276, 278, 279 ಎಲ್ಲೂ ಉಲ್ಲೇಖಿಸಿಲ್ಲಈ ಸೆಕ್ಷನ್​ಗಳು ಈ ಕಾಯ್ದೆ ವ್ಯಾಪ್ತಿಗೆ ಬರಲ್ಲ ಹಾಗೂ ಅನ್ವಯ ಆಗುವುದಿಲ್ಲ ಎಂದು ಆಕ್ಷೇಪಿಸಿದರು.

ಸಂವಿಧಾನದ ಆರ್ಟಿಕಲ್​ 20 ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಅಧಿಕಾರ ನೀಡಿದೆ: ಸಿಂಘ್ವಿ ನಾನು ಸತ್ಯ ಹೇಳಿಲ್ಲ ಅಂದ ಮಾತ್ರಕ್ಕೆ ಬಂಧಿಸಬಹುದಾ.?ಸ್ವಯಂ ಅಪರಾಧ ಹಾಗೂ ಮೌನ ನಿಷೇದದ ಬಗ್ಗೆ ಇರುವ ತೀರ್ಪುಗಳನ್ನ ಒಮ್ಮೆ ಓದಬಹುದು.ಇನ್ನು ಐಟಿ ವಿಚಾರಣೆಗೆ ಹೈಕೋರ್ಟು ತಡೆ ನೀಡಿದೆ. ಐಟಿ ತನಿಖೆಯ ಜಾಡನ್ನೇ ಹಿಡಿದು ಇಡಿ ಈ ಪ್ರಕರಣ ದಾಖಲಿಸಿಕೊಂಡಿದೆ.ಹಾಗಿದ್ದ ಮೇಲೆ ಡಿಕೆಶಿ ಅವರನ್ನು ಬಂಧೀಸಿದ್ದು ತಪ್ಪು ಎಂದು ಸಿಂಗ್ವಿ ವಾದಿಸಿದರು.

ಡಿಕೆ ಶಿವಕುಮಾರ್ ಅವರನ್ನ ಬಂಧಿಸುವ ಅಗತ್ಯವೇನಿತ್ತು. ತನಿಖಾ ಸಂಸ್ಥೆಗಳು ಇಡಿ ಕಸ್ಟಡಿಗೆ ಕೇಳುವ ಮುನ್ನ ಪ್ರಬಲ ಸಾಕ್ಷ್ಯಿ ಒದಗಿಸಬೇಕು. ಯಾವುದೇ ಷರತ್ತು ವಿಧಿಸಿಯಾದ್ರೂ ಜಾಮೀನು ಕೊಡಿ. ಆದರೆ ಜಾರಿ ನಿರ್ದೇಶನಾಲಯ ವಶಕ್ಕೆ ನೀಡಬೇಡಿ ಎಂದು ಮನವಿ ಮಾಡಿದರು.

ಸಂತೋಷ್ ಪ್ರಕರಣದಲ್ಲಿ ತನಿಖೆಗೆ ಸಹಕರಿಸದಿದ್ದರೆ ಮಾತ್ರ ವಶಕ್ಕೆ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಆದರೆ, ಡಿಕೆಶಿಯನ್ನು ವಿಚಾರಣೆಗೆ ಸಹಕರಿಸಿದರೂ ವಶಕ್ಕೆ ಪಡೆಯಲಾಗಿದೆ.ನನಗೆ ಜಾಮೀನು ನೀಡಬೇಕು ನನ್ನ ಎಲ್ಲೆಡೆ ಸಂಚರಿಸಲು ಸ್ವತಂತ್ರ ವಿರಬೇಕು ಒಂದು‌ ಕ್ಷಣವೂ ಇಡಿ‌ ಕಸ್ಟಡಿಗೆ ಕೊಡಬೇಡಿ ಮೂರು ಮನವಿ ಮಾಡುತ್ತೇನೆ ಎಂದ ಸಿಂಘ್ವಿ
ವಾದಿಸಿದರು.

ನಂತರ ಡಿಕೆಶಿ ಪರ ವಾದ ಮಂಡಿಸಿದ ಅಭಿಷೇಕ್​ ಮನುಸಿಂಘ್ವಿ ಕಸ್ಟಡಿಗೆ ಕೇಳಿದ ಅಧಿಕಾರಿ ಅರ್ಜಿಯಲ್ಲಿ ಸಹಿ ಹಾಕಿಲ್ಲ. ಅರ್ಜಿ ನೋಡದೆಯೇ ತನಿಖಾಧಿಕಾರಿ ಸಹಿ ಹಾಕಿದ್ದಾರೆ. ಕೇವಲ ಗ್ರಹಿಕೆ ಮೇಲೆ ಆರೋಪ ಮಾಡಲಾಗಿದೆ. ಆರೋಪ ಮಾಡುವ ಬಗ್ಗೆ ಇಡಿ ಮೊದಲೇ ನಿರ್ಧರಿಸಿ ವಿಚಾರಣೆ ನಡೆಸಲಾಗಿದೆ. ಡಿ.ಕೆ.ಶಿವಕುಮಾರ್ ತಪ್ಪಿಸಿಕೊಂಡಿಲ್ಲ, ನಾಪತ್ತೆ ಆಗಿಲ್ಲ.

ಆರೋಪಿ ಸಹಕಾರ ನೀಡಿದ ಮೇಲೆ ಕಸ್ಟಡಿಗೇಕೆ? ಇಡಿ ಪ್ರತಿ ಕೇಸ್​ನಲ್ಲೂ ಹೀಗೇ ಮಾಡುತ್ತಿದೆ. ಇಡಿ ಅಧಿಕಾರಿಗಳ ತನಿಖಾ ಹಾದಿ ಸರಿಯಿಲ್ಲ. 2017 ರಿಂದ ಐಟಿ ಈ ಪ್ರಕರಣ ಕೈಗೆತ್ತಿಕೊಂಡಿದೆ. 1 ವರ್ಷದ ಬಳಿಕ ಈIಖ ದಾಖಲಿಸುವ ಪ್ರಕ್ರಿಯೆ ನಡೆದಿದೆ. ವಶಕ್ಕೆ ತೆಗೆದುಕೊಳ್ಳುವ ಅರ್ಜಿ ಸಲ್ಲಿಸುವಾಗ ತನಿಖಾಧಿಕಾರಿಗಳು ವಿವೇಚನೆ ಬಳಸಿಲ್ಲ. ಹಾಗಿದ್ದಾಗ ಬಂಧನದಿಂದ ಆರೋಪಿಗೆ ವಿನಾಯಿತಿ ನೀಡುವುದು ಅನಿವಾರ್ಯ ಎಂದು ವಾದ ಮಂಡಿಸಿದರು.

ಡಿಕೆಶಿಗೆ ಫೆಬ್ರವರಿಯಲ್ಲೇ ಸಮನ್ಸ್ ಜಾರಿ ಮಾಡಲಾಗಿತ್ತು. ಆಗ ಡಿಕೆಶಿಯನ್ನು ಬಂಧಿಸುವ ಅನಿವಾರ್ಯ ಇರಲಿಲ್ಲವೇ? ಈಗ ತರಾತುರಿಯಲ್ಲಿ ಡಿಕೆಶಿಯನ್ನು ಬಂಧಿಸಿರುವುದೇಕೆ? ಆರೋಪಿ ಸತ್ಯ ಹೇಳಿದ್ದಾನೆಂದು ಪ್ರಾಸಿಕ್ಯೂಟರ್ ಹೇಳಲ್ಲ. ಯಾವ ಪ್ರಾಸಿಕ್ಯೂಟರ್ ಕೂಡ ಆ ರೀತಿ ಹೇಳುವುದಿಲ್ಲ. ಆರೋಪಿ ತಾನು ಹೇಳಿದ್ದು ಸತ್ಯ ಎನ್ನುತ್ತಾನೆ. ಪ್ರಾಸಿಕ್ಯೂಟರ್ ತಾನು ಕಂಡಿದ್ದು ಸತ್ಯ ಎನ್ನುತ್ತಾನೆ. ಸತ್ಯ ಯಾವುದೆಂದು ಪರಿಶೀಲನೆ ಮಾಡಬೇಕು. ಪ್ರತಿಯೊಬ್ಬ ಪ್ರಜೆಗೂ ಕಾನೂನಾತ್ಮಕ ರಕ್ಷಣೆ ನೀಡಬೇಕು. ಪ್ರಾಸಿಕ್ಯೂಟರ್ ನಿರೀಕ್ಷಿಸುವುದನ್ನೇ ಆರೋಪಿ ಹೇಳಬೇಕಾ? ತನಿಖೆಯ ಹಾದಿ ತಪ್ಪಿಸುತ್ತಿದ್ದಾನೆ ಎಂದು ಹೇಳಲು ಆಗಲ್ಲ ಎಂದು ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡಿದರು.

ಇಡಿ ಪ್ರಕರಣ ನಿಂತಿರುವುದು 2017ರ ಆಗಸ್ಟ್ ನಲ್ಲಿ ಐಟಿ ನಡೆಸಿದ ದಾಳಿಯ ಮೇಲೆ. ಇಡಿ ಪ್ರಕರಣ ದಾಖಲಾಗಿದ್ದು ಜೂನ್ 2018ರಲ್ಲಿ. ಇಷ್ಟು ತಡವಾಗಿ ಪ್ರಕರಣ ದಾಖಲಾಗಿದ್ದು ಯಾಕೆ? ಐಟಿ ತನಿಖೆಗೆ ಆಗಸ್ಟ್ 20ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.  ಸೆಪ್ಟೆಂಬರ್ ಏಳರವರೆಗೂ ಇದು ಅನ್ವಯ ಆಗುತ್ತದೆ. ಡಿಕೆಶಿ ವಿರುದ್ಧದ ಆರೋಪಗಳು ಐಟಿ ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧವಲ್ಲ. ಐಟಿ ಅಡಿ ದಾಖಲಾದ ಪ್ರಕರಣಕ್ಕೆ ಪಿಎಂಎಲ್‍ಎ ಕಾಯ್ದೆ ಅನ್ವಯವಾಗುವುದಿಲ್ಲ. ಘನ ನ್ಯಾಯಾಲಯ ವಿವೇಚನೆ ಬಳಸಿ ಆದೇಶ ನೀಡಬೇಕು.

ಸತ್ಯ ಹೇಳುತ್ತಿಲ್ಲ ಎಂದು ಬಂಧಿಸುವುದು ಎಷ್ಟು ಸರಿ? ಅವರ ಪ್ರಕಾರ ಸತ್ಯ ಎಂದರೆ ಏನು? ಅವರು ಬಯಸಿದ್ದನ್ನು ಹೇಳದಿರುವುದೇ? ನಮ್ಮ ಕಕ್ಷಿದಾರ ಹೇಳುವುದು ಸತ್ಯ ಎಂದು ಏಕೆ ಭಾವಿಸಬಾರದು ಎಂದು ಪ್ರಶ್ನಿಸಿದರು. ಕಳೆದ ರಾತ್ರಿ ಇಡಿಯಿಂದ ಬಂಧನಕ್ಕೆ ಒಳಗಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅನಾರೋಗ್ಯದಿಂದಾಗಿ ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಆಸ್ಪತ್ರೆಯಿಂದ ನೇರವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಜಾರಿ ನಿರ್ದೇಶನಾಲಯವು ಡಿ.ಕೆ

Facebook Comments