ಬ್ಯಾಂಕ್ ಗ್ರಾಹಕರ ಒಂದು ತಿಂಗಳ ಬಡ್ಡಿ ಮನ್ನಾ ಮಾಡುವಂತೆ ಸರ್ಕಾರಕ್ಕೆ ಡಿಕೆಶಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮಾ.20- ಕೊರೊನಾ ತುರ್ತು ಪರಿಸ್ಥಿತಿ ಯಿಂದ ಜನರು ಕಷ್ಟ ಅನುಭವಿಸು ತ್ತಿರುವುದರಿಂದ ರಾಜ್ಯ ಸರ್ಕಾರ ಒಂದು ತಿಂಗಳ ಬ್ಯಾಂಕ್ ಗ್ರಾಹಕರ ಬಡ್ಡಿಯನ್ನು ಮನ್ನಾ ಮಾಡಲಿ. ಒಂದು ತಿಂಗಳ ಇಎಂಐಗಳನ್ನ ಮುಂದೂಡಬೇಕು. ಆದರೆ ಯಾವುದೇ ಬಡ್ಡಿ ಹಾಕದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯದ ವಿಚಾರದಲ್ಲಿ ನಾನು ರಾಜಕೀಯ ಮಾಡೋಕೆ ಹೋಗಲ್ಲಾ. ಈಗ ನಮ್ಮ ಜನಗಳನ್ನ ಉಳಿಸಿಕೊಳ್ಳೋ ಜವಾಬ್ದಾರಿ ನಮ್ಮ ಮೇಲಿದೆ. ಕೊರೊನಾ ವಿಚಾರದಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಉನ್ನತ ಮಟ್ಟದ ವೈದ್ಯರ ಸಭೆ ಕರೆದು ಹೊಣೆಗಾರಿಕೆಯ ನ್ನಾಗಿಸಬೇ ಕು. ಸೇವಾ ಮನೋಭಾವದಿಂದ ಎಲ್ಲರು ಕೆಲಸ ಮಾಡಲು ಖಾಸಗಿ ಅವರಿಗೂ ಸೂಚಿಸಬೇಕು ಎಂದು ಹೇಳಿದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜನರು ಸೇರಬಾರದು ಎಂದು ಗೂತ್ತಿದ್ದರು ನೀವು ಅದನ್ನು ಉಲ್ಲಂಘನೆ ಮಾಡಿಲ್ಲವೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಪ್ರತಿಯೊಬ್ಬರಿಗೆ ಹೇಳಿದ್ದೇನೆ ಹಾರ ತರುವುದು ಜಯಕಾರ ಹಾಕುವುದು ಬೇಡ ಯಾರು ಬೆಂಗಳೂರಿಗೆ ಬರೋದು ಬೇಡ ಎಂದು ಹೇಳುತ್ತಿದ್ದೇನೆ ಅದರೆ ಕೇಳುತ್ತಿಲ್ಲಾ ನೀವು ಇರುವ ಕಡೆ ನಾನೇ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ವಿಶೇಷವಾಗಿ ಪೊಜೆ ಸಲ್ಲಿಸಿ ನಂತರ 10 ನಿಮಿಷ ಧ್ಯಾನ ಮಾಡಿ ಶ್ರೀಯವರನ್ನು ನೆನೆದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ , ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಮಕೃಷ್ಣ, ರಫೀಕ್ ಅಹಮದ್,ಆಟೋರಾಜ್, ಮೆಹಬೂಬ್ ಪಾಷ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ, ದೇವರಾಜ್,ಕೆಂಚಮಾರಯ್ಯ, ಗುಬ್ಬಿಯ ಹೊನ್ನಗಿರಿ ಗೌಡ ಮತ್ತಿತರರಿದ್ದರು.

Facebook Comments