ಜೂ.14ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗೂರು, ಜೂ.7- ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಜೂನ್ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಲಾಕ್‍ಡೌನ್ ಮುಗಿದ ಬಳಿಕ ಕಾರ್ಯಕ್ರಮ ನಡೆಸಲು ದಿನಾಂಕ ಫಿಕ್ಸ್   ಆಗಿದೆ. ಕೆಪಿಸಿಸಿ ನಿಯೋಜಿತ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭ ಮೂರು ಬಾರಿ ನಿಗದಿಯಾಗಿ ಮುಂದೂಡಿಕೆಯಾಗಿದೆ.

ಮುಂದಿನ ವಾರ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯುವುದು ಖಚಿತವಾಗಿದೆ. ಜೂ.14ರಂದು ಸರಳ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಲಾಕ್‍ಡೌನ್ ಕಾರಣ ಅಧಿಕಾರ ಸ್ವೀಕಾರಕ್ಕೆ ವಿಘ್ನ ಎದುರಾಗಿತ್ತು. ಮೂರು ಬಾರಿ ಕಾರ್ಯಕ್ರಮಕ್ಕೆ ತಯಾರಿ ನಡೆಸಿದ್ದರೂ ಕೊನೆ ಕ್ಷಣದಲ್ಲಿ ತೊಡಕುಂಟಾಗಿತ್ತು.

ಹೀಗಾಗಿ ಪದಗ್ರಹಣ ವಿಚಾರದಲ್ಲೂ ಬಿಜೆಪಿ ರಾಜಕೀಯ ನಡೆಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದರು. ಜೂ.8ರಂದು ಲಾಕ್‍ಡೌನ್ ತೆರವಾಗಲಿದೆ. ಮತ್ತೆ ಮುಂದುವರೆಯುವ ಸಾಧ್ಯತೆಗಳಿಲ್ಲ. ಹಾಗಾಗಿ ಬೆಂಗಳೂರಿನಲ್ಲಿ 150 ಜನ, ರಾಜ್ಯದ 57 ಸಾವಿರ ಮತಗಟ್ಟೆಗಳಲ್ಲೂ ವರ್ಚುವಲ್ ಕಾನ್ಫರೆನ್ಸಸ್ ಮೂಲಕ ಪದಗ್ರಹಣ ನೇರ ಪ್ರಸಾರ ನಡೆಯಲಿದೆ.

Facebook Comments