ಮಹಿಳೆಯರ ಮಾನ ಕಳೆದವರಿಗೆ ಮತ ಹಾಕ್ತೀರಾ..? : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.26- ಸಂಸಾರಸ್ಥರು, ಮರ್ಯಾದಸ್ಥರು ಹೆಣ್ಣು ಮಕ್ಕಳನ್ನು ಗೌರವಿಸುತ್ತಾರೆ. ಆದರೆ ಇಲ್ಲಿನ ಮಹಿಳಾ ಕಾಪೆರ್Çರೇಟರ್‍ಗಳು ಕಣ್ಣೀರಿಟ್ಟರು. ಹೆಣ್ಣುಮಕ್ಕಳನ್ನು ಹಿಂಸಿಸಿದವರಿಗೆ ಮತ್ತೆ ಮತ ಹಾಕಿ ಗೆಲ್ಲಿಸಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರ ಮತ ಯಾಚನೆ ಮಾಡಿದ ಅವರು, ಇದು ನವರಾತ್ರಿ ಸಮಯ. ತಾಯಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂತಹ ಲಜ್ಜೆಗೆಟ್ಟ ರಾಜಕಾರಣಿಯಿಂದ ಮುಕ್ತಿ ಕೊಡಿಸಬೇಕಿದೆ.

ಕ್ಷೇತ್ರಕ್ಕೆ ಅಂಟಿದ ತೊಗಲಬೇಕಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಮಾತ್ರ ಕ್ಷೇತ್ರಕ್ಕೆ ಅಂಟಿದ ಶಾಪ ನಿವಾರಣೆಯಾಗಲು ಸಾಧ್ಯ ಎಂದರು.ಬಿಜೆಪಿಯ ಸಾವಿರಾರು ಕಾರ್ಯಕರ್ತರ ಮೇಲೆ ತಲಾ 8-10 ಕೇಸ್ ದಾಖಲಿಸಿ ಕಿರುಕುಳ ನೀಡಿದ್ದಾರೆ.

ದಳದ 300 ಜನರ ಮೇಲೆ ಪ್ರಕರಣ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಾವಿರ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ, ಜನತಾದಳದ ಕಾರ್ಯಕರ್ತರು, ಮುಖಂಡರಲ್ಲಿ ಮನವಿ ಮಾಡುತ್ತೇನೆ, ನಿಮ್ಮ ಸ್ವಾಭಿಮಾನ ಇದ್ದರೆ ನೊಂದು ಬೆಂದಿರುವ ಹೆಣ್ಣು ಮಗಳು ಕುಸುಮಾ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಈ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವುದು ಧರ್ಮ ಹಾಗೂ ಅಧರ್ಮದ ನಡುವೆ. ಅವರು ನಮಗೆ ಮೋಸ ಮಾಡಿದ್ದು ನಿಜ ತಾನೇ? ಹೆತ್ತ ತಾಯಿಗೆ ಮೋಸ ಮಾಡಿದ್ದು ನಿಜಾತಾನೆ? ನಿಮ್ಮ ಮತ ಮಾರಿಕೊಂಡಿದ್ದು ನಿಜತಾನೆ? ನಿಮ್ಮ ಮತವನ್ನು ಬಿಜೆಪಿಯವರು ಹಣ ಕೊಟ್ಟು ಕೊಂಡುಕೊಂಡಿದ್ದು ಅಧರ್ಮ ಅಲ್ಲವೇ? ಸುಳ್ಳು ಪ್ರಕರಣ ದಾಖಲಿಸಿರುವುದು ಅಧರ್ಮ ಅಲ್ಲವೇ? ಕಿರುಕುಳ ಕೊಟ್ಟಿರುವುದು ಅಧರ್ಮ ಅಲ್ಲವೇ? ಕಾಮಗಾರಿ ಮಾಡದೆ ಬಿಲ್ ತೆಗೆದುಕೊಂಡಿರುವುದು ಅಧರ್ಮತಾನೆ? ಎಲ್ಲಾ ಪಕ್ಷಗಳ ಕಾರ್ಯಕರ್ತರ ಗುರಿ ಒಂದೇ ಆಗಿದೆ. ಅದು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಸೋಲಿಸುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು, ನಾನು ಯಾವುದೇ ದುರಾಲೋಚನೆ ಇಟ್ಟುಕೊಂಡು ಈ ಚುನಾವಣೆಗೆ ಬಂದಿಲ್ಲ. ನಿಮ್ಮ ಸೇವೆಗೆ ನಾನು ಬಂದಿದ್ದೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೈಲಾದ ಪ್ರಯತ್ನ ಪಡುತ್ತೇನೆ.

ನೀವು ಕೊಡುವ ಮತವನ್ನು ಮಾರಿಕೊಳ್ಳುವುದಿಲ್ಲ. ನಿಮ್ಮ ನೋವು, ದುಃಖದಲ್ಲಿ ನಿಮ್ಮ ಮನೆ ಮಗಳಂತೆ ಜೊತೆಗಿರುತ್ತೇನೆ. ನಿಮ್ಮ ಮಗಳಿಗೆ ನೀಡುವ ಪ್ರೋತ್ಸಾಹವನ್ನೇ ನನಗೂ ನೀಡಿ ಎಂದು ಮನವಿ ಮಾಡಿದರು.

ನಾನು ನಿಮ್ಮ ಸೇವೆ ಮಾಡಲು ಬಯಸಿದ್ದು, ನಿಮ್ಮ ಪ್ರೀತಿ ವಿಶ್ವಾಸವನ್ನು ಎಂದಿಗೂ ಹಣ, ಅಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ” ಎಂದು ಒತ್ತಿ ಹೇಳಿದರು.ನ.3 ರಂದು ನಡೆಯುವ ಚುನಾವಣೆಯಲ್ಲಿ ಕ್ರಮಸಂಖ್ಯೆ ಒಂದು ಹಸ್ತದ ಗುರುತಿಗೆ ಮತ ಹಾಕಿ ಎಂದು ಮನವಿ ಮಾಡಿದರು.

Facebook Comments

Sri Raghav

Admin