ಸರ್ಕಾರ ಮೊದಲು ಮೇಕೆದಾಟು ನಿರ್ಮಿಸಲಿ : ಡಿಕೆಶಿ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9-KRS ಅಣೆಕಟ್ಟು ಬಿರುಕು ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಅವರ ನಡುವೆ ನಡೆಯುತ್ತಿರುವ ಜಿದ್ದಾಜಿದ್ದಿನ ವಾಕ್ಸ್‍ಮರದಿಂದ ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

ಅತ್ಯಂತ ಸೂಕ್ಷ್ಮ ವಿಚಾರವಾಗಿ ಪರಿವರ್ತನೆಯಾಗಿರುವ KRS ಜುಗಲ್‍ಬಂಧಿ ಕಾಂಗ್ರೆಸ್‍ಗೆ ಧರ್ಮಸಂಕಟ ತಂದಿಟ್ಟಿದೆ. ಹೀಗಾಗಿ ಪರ-ವಿರೋಧ ಯಾವುದರ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಆದ್ಯತೆ ಏನಿದ್ದರು ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ. ಈ ಬಗ್ಗೆ ನಾವು ಮಧ್ಯ ಪ್ರವೇಶ ಮಾಡುತ್ತೇವೆ. ಮುಖ್ಯಮಂತ್ರಿಯಡಿಯೂರಪ್ಪ ಅವರನ್ನು ಒತ್ತಾಯಿಸಿ ಅಣೆಕಟ್ಟು ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ.

ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದರೆ ವಿರೋಧಪಕ್ಷವಾಗಿ ನಾವು ಟೀಕೆ ಮಾಡಲು ಅವಕಾಶವಿದೆ. ಅದನ್ನಷ್ಟೇ ಮಾಡುತ್ತೇವೆ ಎಂದರು. KRS ಬಿರುಕು ಬಿಟ್ಟಿದ್ದರೆ ಅದನ್ನು ನೋಡಿಕೊಳ್ಳಲು ನಮ್ಮಲ್ಲಿ ಉತ್ತಮವಾದ ತಂತ್ರಜ್ಞರಿದ್ದಾರೆ. ಸರ್ಕಾರವಿದೆ. ಬೇರೆ ಯಾರೂ ಆ ವಿಷಯದಲ್ಲಿ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಕೆಎಸ್‍ಎಸ್ ಬಿರುಕು ಬಿಟ್ಟಿದೆ. ಹೊಡೆದು ಹೋಗುತ್ತದೆ ಎಂದು ಹೇಳಿ ಜನರನ್ನು ಆತಂಕಪಡಿಸುವ ವಿಚಾರಗಳಲ್ಲಿ ನಾವು ಭಾಗಿಯಾಗುವುದಿಲ್ಲ. ಅದರಿಂದ ದೂರ ಇರುತ್ತೇವೆ. ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನಾವು ಪ್ರತಿಕ್ರಿಯಿಸುವುದಿಲ್ಲ ಎಂದರು.

Facebook Comments