ಕೊಡಗಿನ ಜನತೆಗೆ ಶಾಶ್ವತ ಪರಿಹಾರ ಕಲ್ಪಿಸಲು ಎಲ್ಲಾ ಸರ್ಕಾರಗಳು ವಿಫಲವಾಗಿವೆ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.9- ಕೊಡಗಿನಲ್ಲಿ ಪ್ರತಿ ವರ್ಷ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಆ ಜನರಿಗೆ ಶಾಶ್ವತ ಪರಿಹಾರ ದೊರಕಿಸಲು ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾದಾನ ವ್ಯಕ್ತ ಪಡಿಸಿದ್ದಾರೆ.

ನೆರೆ ಪೀಡಿತ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಕೇರಿಯಲ್ಲಿ ನೆರೆ ನಿರಾಶ್ರಿತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೇಧ ಇಲ್ಲ.

ಯಾವುದೇ ಸರ್ಕಾರ ಅಕಾರ ನಡೆಸಿದರೂ ಕೊಡಗಿನ ನೆರೆ ಹಾವಳಿ ಬಗ್ಗೆ ಗಮನ ಹರಿಸಿ ಶಾಶ್ವತ ಪರಿಹಾರ ಕಂಡು ಹಿಡಿಯದೆ ಇರುವುದು ನನ್ನಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.

ಮಡಿಕೇರಿಯಲ್ಲಿ ಹುಟ್ಟುವ ಕಾವೇರಿ ನದಿ ರಾಜ್ಯದ ಆಸ್ತಿ, ಕೃಷಿಗೆ ನೀರು ಸಿಗುವುದರ ಜೊತೆಗೆ ಬೆಂಗಳೂರಿಗೆ ಜೀವ ನದಿಯಾಗಿದೆ. ಬೆಂಗಳೂರಿಗರು ಕುಡಿಯುತ್ತಿರುವುದೇ ಕಾವೇರಿ ನದಿಯ ನೀರನ್ನು.

ಜೀವ ಉಳಿದರೆ ಜೀವನ ಇರಲಿದೆ. ನೀರಿಲ್ಲದೆ ಜೀವವೇ ಹೋದರೆ ಎಂದು ಪ್ರಶ್ನಿಸಿದ ಅವರು, ಜೀವ ನದಿಯ ಮೂಲವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದರು.

ಕೆಲವು ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ಎನ್‍ಎ ಸರ್ಟಿಫಿಕೇಟ್ ಕೊಟ್ಟಿಲ್ಲ ಎಂದು ನಿವೇಶನ ಇನ್ನೂ ಫಲಾನುಭವಿಗಳ ಹೆಸರಿಗೆ ವರ್ಗಾವಣೆಯಾಗಿಲ್ಲ ಎಂದು ಅಕಾರಿಗಳು ಹೇಳುತ್ತಿದ್ದಾರೆ.

ಇಲ್ಲಿ ಅಕಾರಿಗಳ ತಪ್ಪಿದೆಯೋ, ರಾಜಕಾರಣಿಗಳ ತಪ್ಪಿದೆಯೋ ಎಂದು ಇನ್ನಷ್ಟು ಚರ್ಚೆಯ ಮೂಲಕವಷ್ಟೆ ತಿಳಿಯಲಿದೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.

ಕಳೆದ ವರ್ಷ ಮಹಾಮಳೆಯಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ನಷ್ಟವಾಗಿದೆ ಎಂದು ಸರ್ಕಾರವೇ ಮಾಹಿತಿ ನೀಡಿತ್ತು. ಕಳೆದ ವರ್ಷ ರಾಜ್ಯ ಸರ್ಕಾರ ಘೋಷಿಸಿದ್ದ ಮಳೆಪರಿಹಾರ ಅನುದಾನ ಇನ್ನೂ ಸಂತ್ರಸ್ಥರಿಗೆ ಲಭಿಸಿಲ್ಲ.

ಬಿಡುಗಡೆಗೊಳಿಸಿದ್ದ 1800 ಕೋಟಿ ರು. ಅನುದಾನದಲ್ಲಿ ವರ್ಷ ಕಳೆದರೂ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಿಲ್ಲ. ಮನೆ ಕಳೆದುಕೊಂಡವರಿಗೆ ಸರಿಯಾಗಿ ಮನೆ ನಿರ್ಮಿಸಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರೆಯಿಂದ ಸಂತ್ರಸ್ಥರಾಗಿರುವರ ನೆರವಿಗೆ ಧಾವಿಸುವಂತೆ ಕರೆ ನೀಡಿದ ಡಿ.ಕೆ.ಶಿವಕುಮಾರ್ ಅವರು ನಿರಾಶ್ರಿತರ ಶಿಬಿರಗಳಲ್ಲಿ ಇರುವವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಶಿಬಿರಗಳಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ. ಮಹಿಳೆಯರು ದಿನ ಕಳೆಯುವುದು ಕಷ್ಟವಾಗಿದೆ ಎಂದು ಸಂತ್ರಸ್ಥರು ಅಳಲು ತೊಡಿಕೊಂಡರು. ಕುಶಾಲನಗರದಲ್ಲಿ ಮಂಜುನಾಥ್‍ಗುಂಡೂರಾವ್ ಮನೆಗೆ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪ್ರಮುಖರಾದ ಕೆ.ಪಿ.ಚಂದ್ರಕಲಾ, ವಿ.ಪಿ.ಶಶಿಧರ್, ಚಂದ್ರಮೌಳಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Facebook Comments

Sri Raghav

Admin