‘ಕರ್ನಾಟಕದ ಮರ್ಯಾದೆ ಕಳೆಯಬೇಡಿ’ : ಯಡಿಯೂರಪ್ಪ ಸರ್ಕಾರಕ್ಕೆ ಡಿಕೆಶಿ ಕ್ಲಾಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಅರಮನೆ ಮೈದಾನದಲ್ಲಿರುವ ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ನಮಗೆ ಬಿಡಿ. ಊಟ, ತಿಂಡಿಯ ವ್ಯವಸ್ಥೆ ಮಾಡಿ, ಉಚಿತವಾಗಿ ಊರಿಗೆ ಹೋಗಲು ವ್ಯವಸ್ಥೆ ಮಾಡಿಕೊಡುತ್ತೇವೆ.

ವಲಸೆ ಕಾರ್ಮಿಕರನ್ನು ದುಸ್ಥಿತಿಗೆ ತಳ್ಳಿ ರಾಜ್ಯದ ಮರ್ಯಾದೆ ಕಳೆಯಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದರ ಅವರು, ಇಂದು ಅರಮನೆ ಮೈದಾನಕ್ಕೆ ಸುಮಾರು 20 ಸಾವಿರ ಕಾರ್ಮಿಕರು ಬಂದಿದ್ದಾರೆ.

ಬೆಳಗ್ಗೆ 6 ಗಂಟೆಗೆ ಬಂದ ಅವರಿಗೆ ತಿಂಡಿ ಇಲ್ಲ, ಊಟ ಇಲ್ಲದೆ ಪರದಾಡುತ್ತಿದ್ದಾರೆ. ಹೊರ ರಾಜ್ಯಕ್ಕೆ ಹೋಗಬೇಕಾದವರಿಗೆ ಒಂದು ಸಾವಿರ ರೂ. ಪ್ರಯಾಣದ ವೆಚ್ಚ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಕಾರ್ಮಿಕರ ಕಷ್ಟ ನೋಡಿದರೆ ಕರಳು ಕಿತ್ತು ಬರುತ್ತಿದೆ.

ಸರ್ಕಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ನಮಗೆ ಬಿಟ್ಟು ಬಿಡಿ. ಕೆಲವೇ ನಿಮಿಷಗಳಲ್ಲಿ ಅವರ ಪ್ರಯಾಣದ ವೆಚ್ಚವನ್ನು ಭರಿಸುತ್ತೇವೆ. ಕಾರ್ಮಿಕರ ಮಾಲೀಕರನ್ನು ಸಂಪರ್ಕಿಸಿ ತಕ್ಷಣವೇ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತೇವೆ.

ಗೌರವಯುತವಾಗಿ ಕಾರ್ಮಿಕರ ಅವರ ಊರಿಗೆ ಹೋಗಿ ವಾಪಸ್ ಬರುವಂತೆ ಮಾಡುತ್ತೇವೆ. ಈಗಿನ ಪರಿಸ್ಥಿತಿಯಲ್ಲಿ ನೊಂದುಕೊಂಡು ಹೋದ ಕಾರ್ಮಿಕರ ಮತ್ತೆ ವಾಪಸ್ ಬರುವುದಿಲ್ಲ. ಅವರನ್ನು ಕಾರ್ಮಿಕರೆಂದು ಕರೆಯುವುದಕ್ಕಿಂತ ರಾಷ್ಟ್ರ ನಿರ್ಮಾಣಗಾರರು ಎಂದು ಕರೆಯುವುದು ಸೂಕ್ತ ಅವರು ಇಲ್ಲಿ ಕೆಲಸ ಮಾಡಲು ಬಂದವರು, ಇಲ್ಲಿನ ನಿರ್ಮಾಣ ಕಾರ್ಯಗಳಲ್ಲಿ ಬೆವರು ಹರಿಸಿದವರು, ಮತ್ತೆ ಅವರು ಬರದೆ ಇದ್ದರೆ ಮುಂದೆ ರಾಜ್ಯದಲ್ಲಿ ನಿರ್ಮಾಣ ಕಾರ್ಯಗಳಿಗೆ ಸಮಸ್ಯೆಯಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಮಿಕರು, ಮಾಲೀಕರು ಮತ್ತು ಸರ್ಕಾರದ ನಡುವೆ ಸಮನ್ವಯದ ಕೊರತೆಯಿಂದ ಸಮಸ್ಯ ಹೆಚ್ಚಾಗಿದೆ. ತವರು ಊರಿಗೆ ಹೋಗುವವರಿಗೆ ಪ್ರಯಾಣ ವೆಚ್ಚ ಭರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ.

ಈ ಬಗ್ಗೆ ರೈಲ್ವೆ ಇಲಾಖೆ ಅಕಾರಿಗಳ ಜೊತೆಯೂ ನಾವು ಮಾತನಾಡಿದ್ದೇವೆ, ಸರ್ಕಾರ ಅಹಂಮಿಕೆಯಿಂದ ಬಳಲುತ್ತಿದೆ. ಹಾಗಾಗಿ ನಮ್ಮ ನೆರವು ಪಡೆಯಲು ಇಚ್ಚಿಸುತ್ತಿಲ್ಲ. ಅತ್ತ ಕಾರ್ಮಿಕರಿಗೆ ನೆರವು ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Facebook Comments

Sri Raghav

Admin