BREAKING : ಹೊಸ ಬಾಂಬ್ ಸಿಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 30- ಕಾಂಗ್ರೆಸ್ ನ ಇಪ್ಪತ್ತು ಮಂದಿ ಶಾಸಕರು ರಾಜಿನಾಮೆ ಕೊಟ್ಟು ಬಿಜೆಪಿ ಸೇರಲು ತಯಾರಾಗಿದ್ದಾರೆ ಎಂದು ಹೇಳುತ್ತಿರುವ ಬಿಜೆಪಿ ಸಚಿವರೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ. ಅವರ ಮುಂದಿನ‌ ನಡೆ ಏನು ಎಂದು ಕಾಂಗ್ರೆಸ್ ನಾಯಕರನ್ನು ಕೇಳಿದರೆ ಹೇಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಹಾಕಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಹೇಳಿಕೆ ನೀಡಿದ ವ್ಯಕ್ತಿ ಯಾರೆಂದು ನನಗೆ ಗೋತ್ತಿಲ್ಲ. ಆದರೆ ನೀವು ಹೇಳುತ್ತಿರುವ ಹೆಸರಿನ ವ್ಯಕ್ತಿ ಕಾಂಗ್ರೆಸ್ ನ ಮಾಧ್ಯಮ ಘಟಕದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಮುಂದೆ ಯಾವ ದಾರಿ‌ಹಿಡಿಯುತ್ತಾರೆ ಎಂದು ಉಗ್ರಪ್ಪ ಅವರನ್ನು ಮಾಧ್ಯಮದವರೇ ಕೇಳಿದರೆ ಹೇಳುತ್ತಾರೆ ಎಂದರು.

ಬಿಜೆಪಿ ಆಂತರಿಕ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರ್ಯಾರು ಮಾತನಾಡಬಾರದು. ಶಾಸಕಾಂಗ ಪಕ್ಷದ ನಾಯಕರು ಅಥವಾ ಪಕ್ಷ ಅಧ್ಯಕ್ಷನಾದ ನಾನು ಮಾತ್ರ ಮಾತನಾಡುತ್ತೇವೆ ಎಂದು ಹೇಳಿದರು. ತಮ್ಮ ಸಹೋದರ ಸಂಸದ ಡಿ.ಕೆ.ಸುರೇಶ್ ನಿನ್ನೆ ಮಾತನಾಡಿದ್ದಾರೆ.

ಅವರಿಗೂ ಸೂಚನೆ ನೀಡಿದ್ದೇನೆ. ಬಿಜೆಪಿ ಆಂತರಿಕ ಬೆಳವಣಿಗೆಯಲ್ಲಿ ನಾವು ಮೂಗು ತೂರಿಸುವುದಿಲ್ಲ. ನಮ್ಮ ಪಕ್ಷ ಸಂಘಟನೆಯ ಬಗ್ಗೆಯಷ್ಟೆ ನಾವು ಗಮನ ಹರಿಸುತ್ತೇವೆ. ಅವರ ಗೊಂದಲಗಳನ್ನು ಅವರೇ ಸರಿ ಪಡಿಸಿಕೊಳ್ಳಲಿ‌ ಎಂದು ಹೇಳಿದರು.

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ಕಳೆದಿದೆ. ಬಿಜೆಪಿ ಆಡಳಿತ ಗಮನಿಸಿದರೆ ನನ್ನ ನಲವತ್ತು ವರ್ಷದ ರಾಜಕಾರಣದಲ್ಲಿ, ಸ್ವತಂತ್ರ್ಯ ನಂತರ ಜನ ಸರ್ಕಾರದ ವಿರುದ್ದ‌ ಹೆಚ್ಚು ಪ್ರತಿಭಟನೆ ನಡೆಸಿದ್ದು ಈ ಅವಧಿಯಲ್ಲೇ. ಕಾನೂ‌ನು ತಿದ್ದುಪಡಿ ಮೂಲಕ ಜನರಲ್ಲಿ ಅಭದ್ರತೆ ನಿರ್ಮಿಸಲಾಯಿತು, ನಲವತ್ತು ವರ್ಷದಲ್ಲೆ ಅತೀ ಹೆಚ್ಚು ನಿರುದ್ಯೋಗ ದಾಖಲಾಗಿದೆ. ಹಿಂದಿಗಿಂತ 24 ಪಟ್ಟು ನಿರುದ್ಯೋಗ ಹೆಚ್ಚಾಗಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದು, ಪ್ರತಿ ಡಾಲರ್ ಗೆ 76 ರೂಪಾಯಿಯಾಗಿದೆ.‌ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿದಿರುವುಕ್ಕೆ ಲೆಕ್ಕಾ ಹಾಕಿದರೆ ಪ್ರತಿ ಲೀಟರ್ ಪೆಟ್ರೋಲ್ ಗೆ ಇಪ್ಪತ್ತು‌ ರೂಪಾಯಿಯಾಗಬೇಕಿತ್ತು, ಆದರೂ ಇಂಧನದ ದರ ಹೆಚ್ಚಿದಿದ್ದಾರೆ. ಜಿಡಿಪಿ ಮೊದಲೇ ಕುಸಿದಿದೆ, ಈಗ ಶೇ.1.9ರಷ್ಟಾಗಿದೆ. ಅನುಭವಿಗಳ‌ ಆಡಳಿತ ಇಲ್ಲದೆ, ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದರು.

ರಾಷ್ಷ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು, ರೈತ ವರ್ಗದ ಜನರಿಗೆ ಸರ್ಕಾರ ನೆರವು ನೀಡಲಿಲ್ಲ. ಸಣ್ಣ, ಮಧ್ಯಮ ಹಂತದ ಉದ್ಯಮಕ್ಕೂ ಸಹಾಯ ಮಾಡಲಿಲ್ಲ. ದೇಶದ ಅಭಿವೃದ್ದಿಗೆ ಯಾವ ಯೋಜನೆಯೂ ಕೈಗೆತ್ತಿಕೊಳ್ಳಲಿಲ್ಲ. ಸ್ಮಾರ್ಟ್ ಸಿಟಿ, ಬುಲೇಟ್ ಟ್ರೈನ್ ಎಲ್ಲವೂ ಹುಸಿಯಾದವು.‌ ಸಂಸದರಿಗೆ ಹೆಚ್ಚುವರಿ ಹಣ ಕೊಡದೆ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿ ಎಂದರು.‌ ಅದು ಸಫಲವಾಗಲಿಲ್ಲ.

ಲಾಕ್ ಡೌನ್ ಸಂಪೂರ್ಣ ವಿಫಲವಾಯಿತು. ಜಾಗತಿಕ ಸಮಸ್ಯೆ ಎಂದು ನಾವು ಸಹಕಾರ ಕೊಟ್ಟೆವು. ಯಾರೊಂದಿಗೂ ಸರ್ಕಾರಗಳು‌ ಸಮಾಲೋಚನೆ ನಡೆಸಲಿಲ್ಲ. ಕೋವಿಡ್ ನಿಭಾಯಿಸುತ್ತಿದ್ದವರಿಗೆ ಸರಿಯಾದ ಜ್ಞಾನ ಇರಲಿಲ್ಲ. ಪ್ರತಿ ವುಚಾರದಲ್ಲೂ ಕಣ್ಣೊರೆಸುವ ಕೆಲಸ ಮಾಡಿದ್ದಾರೆ.

ಬಿಜೆಪಿಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಬಿಜೆಪಿಗೆ ಅಭಿವೃದ್ಧಿ ಸಿದ್ಧಾಂತಗಳಿಲ್ಲ, ದ್ವೇಷದ ರಾಜಕಾರಣ ಮಾತ್ರ ನಡೆಯುತ್ತಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಪ್ರಕಟಿಸಿದ ಪ್ಯಾಕೇಜ್ ನಲ್ಲಿ ಒಂದು ರೂಪಾಯಿ ತಲುಪಿದ್ಯಾ ಮಾಹಿತಿ ಕೊಡಿ. ಜನ ಸತ್ತ ಮೇಲೆ, ತಿಥಿಗೆ ದುಡ್ಡು ಕೊಡುತ್ತೀರಾ. ಈಗ ಜನಜೀವನ ಸಹಜ ಸ್ಥಿತಿಗೆ ಮರಳಿದ ಮೇಲೆ ಕೊಟ್ಟರೇ ಏನ್ ಪ್ರಯೋಜ.‌ಈ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಸಾಮಾನ್ಯ ಪ್ರಜ್ಞೆ ಇಲ್ಲದಂತೆ ವರ್ತಿಸಿದೆ ಎಂದು‌‌ ಕಿಡಿಕಾರಿದರು.

ವಲಸೆ ಕಾರ್ಮಿಕರನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು ವಾಪಾಸ್ ಬರುತ್ತಿದ್ದರು. ಕಾರ್ಮಿಕರನ್ನು ಅಪಮಾನ ಮಾಡಿ ಕಳುಹಿಸಲಾಗಿದೆ. ಅವರು ವಾಪಾಸ್ ಬರಲ್ಲ. ಚಪ್ಪಾಳೆ ಹೊಡೆಸಿದ್ರೆ ಜನರ ಹೊಟ್ಟೆ ತುಂಬಲ್ಲ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಸಾಲ ವಸೂಲಾತಿ ನಿಂತಿಲ್ಲ, ಜನರಿಗೆ ಕಿರುಕುಳ‌ನಿಂತಿಲ್ಲ. ವಕೀಲರಿಗೆ ಹೋಗಿದ್ಯಾ, ಅಡುಗೆಯವರಿಗೆ ಹೋಗಿದ್ಯಾ, ಪ್ಯಾಕೇಜ್ ಹಣ ಯಾರಿಗೆ ಹೋಗಿದೆ ಹೇಳಿ. ಇನ್ನು‌ ಇಪ್ಪತ್ನಾಲ್ಕು ಗಂಟೆ ಕಾಲಾವಕಾಶ ತಗೋಳ್ಳಿ ಪ್ಯಾಕೇಜ್ ಯಾರಿಗೆ ತಲುಪಿದೆ ಹೇಳಿ.

ಬಿಜೆಪಿಯವರಿಗೆ ಆಡಳಿತ ಗೋತ್ತಿಲ್ಲ. ಪ್ರಕೃತಿ ತಂದೊಡ್ಡಿದ ಸಮಸ್ಯೆಗಿಂತ ಸರ್ಕಾರ‌ ಸೃಷ್ಠಿಸಿದ ಅನಾವುತವೇ ಹೆಚ್ಚಾಗಿದೆ.‌ ಶಿಕ್ಷಣ ಕ್ಷೇತ್ರ ಕೂಡ ಕುಸಿದಿದೆ. ಐವತ್ತು ಅರವತ್ತು ವರ್ಷದಲ್ಲಾದ ಅಭಿವೃದ್ಧಿಯನ್ನು ಈಗ ಶೂನ್ಯಕ್ಕೆ ತರಲಾಗಿದೆ‌‌ ಎಂದು ಆರೋಪಿಸಿದರು. ಬಿಜೆಪಿಗೆ ಅಧಿಕಾರವಷ್ಟೆ ಮುಖ್ಯ, ಜನರಿಗೆ ನೆರವಾಗುವುದಲ್ಲ ಎಂದು ಆರೋಪಿಸಿದರು.

Facebook Comments

Sri Raghav

Admin