ಕಾಂಗ್ರೆಸ್ ಗೆದ್ದರೆ ಮಾತ್ರ ಆರ್.ಆರ್ ನಗರದಲ್ಲಿ ನೆಮ್ಮದಿ : ಡಿ.ಕೆ.ಶಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ರಾಜರಾಜೇಶ್ವರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿ, ನೆಮ್ಮದಿ ನೆಲಸಬೇಕಾದರೆ ಅದು ಮತ್ತೆ ಕಾಂಗ್ರೆಸ್ ಕ್ಷೇತ್ರವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎಂ.ಎಸ್.ಅಕ್ಕಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನನ್ನು ಪಾಲನೆ ಮಾಡಲು, ಜನರಿಗೆ ರಕ್ಷಣೆ ಕೊಡಲು ರಾಜರಾಜೇಶ್ವರಿನಗರ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಕ್ಷೇತ್ರ ಮಾಡಲು ಪ್ರಯತ್ನ ಮಾಡುತ್ತೇವೆ ಎಂದರು.

ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಕ್ಕೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕೊಲೆಗಳಾಗುತ್ತವೆ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾವು ಜನರನ್ನು ನಂಬಿ ಚುನಾವಣೆ ಹೆದುರಿಸುತ್ತಿದ್ದೇವೆ ಎಂದರು.

ನಾವು ಅವರಷ್ಟು ಬಲಶಾಲಿಗಳಲ್ಲ. ಪ್ಯಾರಾಮಿಲಿಟರಿ ಪಡೆ ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ. ಅವರು ಬರೆದರೆ ಪ್ರಯೋಜನವಾಗುವುದಿಲ್ಲ, ಮುಖ್ಯಮಂತ್ರಿ ಅಥವಾ ಅವರ ಪಕ್ಷದ ಅಧ್ಯಕ್ಷರಿಂದ ಪತ್ರ ಬರೆಸಲಿ, ಈಗಾಗಲೇ ತಡವಾಗಿದೆ ಎಂದು ಹೇಳಿದರು. ಬಿಜೆಪಿ ಏನೇ ಮಾಡಿದರೂ ಶಿರಾ ಮತ್ತು ರಾಜರಾಜೇಶ್ವರಿನಗರ ಎರಡು ಕ್ಷೇತ್ರಗಳ್ಲಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ ನೋಡುತ್ತಿರಿ ಎಂದು ಹೇಳಿದರು.

Facebook Comments