ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರುವಂತೆ ಸರ್ಕಾರಕ್ಕೆ ಡಿಕೆಶಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 4-ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಂತರ ಜಿಲ್ಲೆಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.ಹೊರ ರಾಜ್ಯದಲ್ಲಿರುವ ಕನ್ನಡಿಗರು ಹಾಗೂ ಕಾರ್ಮಿಕರನ್ನು ರೈಲಿನಲ್ಲಿ ಕರೆತರುವಂತೆ ಮನವಿ ಮಾಡಿದ್ದೇವೆ.

ಕಾರ್ಮಿಕರ ಊರುಗಳಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಿದ ಸಿಎಂ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಿಎಂ ಸಮಯೋಚಿತ ನಿರ್ಧಾರವನ್ನು ಅಭಿನಂದಿಸುತ್ತೇವೆ. ನಮ್ಮ ಪಕ್ಷದ ಮನವಿಯನ್ನು ಒಪ್ಪಿ ಉಚಿತ ಬಸ್ ವ್ಯವಸ್ಥೆ ಮಾಡಿದ ಸಿಎಂ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದರು.

ವಿರೋಧ ಪಕ್ಷವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಪ್ರತಿಭಟನೆ ಮಾಡುವಷ್ಟು ನಮಗೆ ಸ್ವಾತಂತ್ರ್ಯ ಇಲ್ಲವೆ. ವಿರೋಧ ಪಕ್ಷದವರ ಬಾಯಿ ಮುಚ್ಚಿಸುವ ಕೆಲಸ ಮಾಡಲು ಸಚಿವರಿಗೆ ನಾವು ಬಿಡುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರ ಫೇಸ್ ಬುಕ್ ಕಾಮೆಂಟ್‍ಗೆ ಡಿಕೆಶಿ ತಿರುಗೇಟು ನೀಡಿದರು.

ನಿನ್ನೆ ಕಾಂಗ್ರೆಸ್ ಮಹಿಳಾ ಶಾಸಕಿಯರ ಪ್ರತಿಭಟನೆ ಸಮರ್ಥಿಸಿಕೊಂಡ ಅವರು, ಸುರೇಶ್ ಕುಮಾರ್ ಅಣ್ಣ ನೀವು ನಿಮ್ಮ ಸಿಎಂರನ್ನು ಬಾಯಿ ಮುಚ್ಚಿಸಬಹುದು ಆದರೆ, ಮಕ್ಕಳಿಗೆ ಗರ್ಭಿಣಿಯರಿಗೆ ಕೊಡುವ ಆಹಾರ ಮಾರಾಟ ಮಾಡದರೆ, ಸುಮ್ನೆ ಇರೋಕೆ ಆಗತ್ತಾ ಎಂದು ಪ್ರಶ್ನಿಸಿದರು.

ಉಮಾಶ್ರೀ, ಜಯಮಾಲಾ, ಮೋಟಮ್ಮ ಮೂವರು ಮಂತ್ರಿಗಳಾಗಿ ಕೆಲಸ ಮಾಡಿದವರು. ಅವರು ಮಾತಡದೇ ಇರೋಕೆ ಆಗತ್ತಾ ಪ್ರಶ್ನಿಸಿದರಲ್ಲದೆ, ಸಿಎಂ ನೀವು ಸುಮ್ಮನೆ ಇದ್ದರೆ ನೀವು ಜವಾಬ್ದಾರರಾಗುತ್ತೀರಿ ಎಂದರು.

Facebook Comments

Sri Raghav

Admin