ಇಂದಿನಿಂದ ವೈದ್ಯರ ಆಸಹಕಾರ ಚಳವಳಿ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ವೇತನ ಪರಿಷ್ಕರಣೆಗೆ ಆಗ್ರಹಿಸಿ ಇಂದಿನಿಂದ ವೈದ್ಯರು ಕೈಗೊಂಡಿರುವ ಅಸಹಕಾರ ಚಳವಳಿ ಹಿನ್ನೆಲೆಯಲ್ಲಿ ಕೊರೊನಾ ಮಾಹಿತಿ ಲಭ್ಯವಾಗಲಿಲ್ಲ.

ಇದೇ 21ರಿಂದ ಹೊರ ರೋಗಿಗಳ ವಿಭಾಗದ ಕರ್ತವ್ಯಕ್ಕೆ ಗೈರು ಹಾಜರಾಗುವ ಎಚ್ಚರಿಕೆ ನೀಡುವ ಮೂಲಕ ಇಂದಿನಿಂದ ವೈದ್ಯರು ಕೈಗೊಂಡಿರುವ ಅಸಹಕಾರ ಮುಷ್ಕರದಿಂದ ವೈದ್ಯಕೀಯ ಚಿಕಿತ್ಸಾ ವರದಿ ಸೇರಿದಂತೆ ಯಾವುದೇ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಿಲ್ಲ.

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4968 ವೈದ್ಯರುಗಳು ಆನ್‍ಲೈನ್ ಸಹಿತಿ ಎಲ್ಲಾ ಸರ್ಕಾರಿ ಸಭೆಗಳಿಂದ ದೂರ ಉಳಿದರು. ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ ಮನವಿಯನ್ನ ಪುರಸ್ಕರಿಸದೆ ತಮ್ಮ ಪ್ರತಿಭಟನೆಯ ಭಾಗವಾದ ಅಸಹಕಾರ ಚಳವಳಿಯನ್ನು ಆರಂಭಿಸಿರುವುದರಿಂದ ಆರೋಗ್ಯ ಇಲಾಖೆ ಆಡಳಿತದಲ್ಲಿ ವ್ಯತ್ಯಯವಾಯಿತು.

Facebook Comments

Sri Raghav

Admin