ಎಣ್ಣೆ ಮಹಾತ್ಮೆ, ಮೈತುಂಬ ಇರುವೆ ಮೆತ್ತಿಕೊಂಡರೂ ಎಣ್ಣೆ ಅಮಲಿನಿಂದ ಹೊರಬರದ ಕುಡುಕ..!

ಈ ಸುದ್ದಿಯನ್ನು ಶೇರ್ ಮಾಡಿ


ದೊಡ್ಡಬಳ್ಳಾಪುರ, ಜು.3 – ಹೊಟ್ಟೆಗೆ ಎಣ್ಣೆ ಬಿದ್ರೆ ಪ್ರಪಂಚ ಅಲ್ಲ, ಅವನಿಗೇ ಏನೇ ಆದರೂ ಅರಿವಾಗುವುದಿಲ್ಲವಂತೆ. ಇಲ್ಲೊಬ್ಬ ಕುಡುಕ ಮಹಾಶಯನಿಗೆ ಮೈತುಂಬಾ ಇರುವೆಗಳು ಹರಿದಾಡುತ್ತಿದ್ದರೂ ಪ್ರಜ್ಞೆಯೇ ಇಲ್ಲದಂತೆ ಗಾಢ ನಿದ್ರೆಯಲ್ಲಿ ಪವಡಿಸುತ್ತಿದ್ದಾನೆ. ತಾಲೂಕಿನ ಅಂತರನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ನಿತ್ರಾಣವಸ್ಥೆಯಲ್ಲಿ ಬಿದ್ದಿದ್ದಾನೆ. ಈತನ ಮೇಲೆ ಮೈತುಂಬಾ ಇರುವೆಗಳು ಮುತ್ತಿಕೊಂಡು ಕಚ್ಚುತ್ತಿದ್ದರೂ ನಿದ್ರೆಯಿಂದ ಮಾತ್ರ ಈ ಭೂಪ ಎಚ್ಚರಗೊಳ್ಳಲಿಲ್ಲ.

Drinke-01

ಈ ದೃಶ್ಯ ಕಂಡ ಸ್ಥಳೀಯರು ಎಲ್ಲೋ ಸತ್ತಿರಬಹುದೆಂದು ಶಂಕಿಸಿ ಹತ್ತಿರ ಬಂದು ನೋಡಿದರೆ ಅವರ ಶಂಕೆ ಸುಳ್ಳಾಗಿತ್ತು. ಆತ ಉಸಿರಾಡುತ್ತಿದ್ದ, ಮೈಮೇಲೆ ಪ್ರಜ್ಞೆ ಮಾತ್ರ ಇರಲಿಲ್ಲ. ಈ ದೃಶ್ಯ ಕಂಡ ಸಾರ್ವಜನಿಕರು ಬೆರಗಾಗಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಣ್ಣ ಸಣ್ಣ ಗೂಡಂಗಂಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ ಸಂಬಂಧ ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕುಳಿತಿದ್ದು, ಇದರಿಂದ ಯುವಸಮುದಾಯ, ಸಂಸಾರಗಳು ಹಾಳಾಗುತ್ತಿವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin