ನಾಯಿ ಕಚ್ಚಿ ಗಾರೆ ಕೆಲಸಗಾರ ಸಾವು, ಮಾಲೀಕರ ವಿರುದ್ಧ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 12- ನಾಯಿ ಕಚ್ಚಿದ್ದರಿಂದ ಗಾರೆ ಕೆಲಸಗಾರ ನರಸಿಂಹ (36) ಮೃತಪಟ್ಟ ಹಿನ್ನೆಲೆಯಲ್ಲಿ ನಾಯಿ ಮಾಲೀಕರ ವಿರುದ್ಧ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಸಿ.ಕೆ.ಬಾಬಾ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಅಟ್ಟೂರು ಲೇ ಔಟ್‍ನ ನಿವಾಸಿ ಮೂಲತಃ ತಮಿಳುನಾಡಿನ ಕೃಷಿ ಎಂಬುವರು ವಾಸವಾಗಿದ್ದು, ಫ್ಯಾಷನ್ ಡಿಸೈನರ್ ವ್ಯಾಸಂಗ ಮಾಡುತ್ತಿದ್ದಾರೆ. ಅವರು ನಾಯಿಯೊಂದನ್ನು ಸಾಕಿಕೊಂಡಿದ್ದು, ನಿನ್ನೆ ಸಂಜೆ ನಾಯಿಗೆ ಊಟ ಹಾಕಲು ನೆಲ ಮಹಡಿಗೆ ಬಂದಿದ್ದಾರೆ.

ಆಗ ಆ ನಾಯಿ ತಪ್ಪಿಸಿಕೊಂಡು ಹೊರ ಹೋಗಿದೆ. ಅದನ್ನು ಹಿಡಿಯಲು ಅದನ್ನು ಹಿಂಬಲಿಸಿದ್ದಾರೆ. ಆಗ ಪಕ್ಕದಲ್ಲೇ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ಅಲ್ಲಿದ್ದ ಗಾರೆ ಕೆಲಸ ಮಾಡುವ ನರಸಿಂಹ ಕೃಷಿಗೆ ಸಹಾಯ ಮಾಡಲು ಎಂದು ನಾಯಿ ಹಿಡಿಯಲು ಹೋದ. ಹಿಡಿಯಲು ಹೋದಾಗ ಅದು ಕುತ್ತಿಗೆಯ ಬಳಿ ಕಚ್ಚಿದೆ.

ತೀವ್ರ ರಕ್ತಸ್ರಾವವಾಗಿದೆ. ತಡವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin