ಶಸ್ತ್ರಚಿಕಿತ್ಸಾ ಕೊಠಡಿಗೆ ನುಗ್ಗಿ ಮಗುವನ್ನು ಕೊಂದ ನಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಜ.14- ಆಪರೇಷನ್ ಥೇಯಟರ್( ಶಸ್ತ್ರಚಿಕಿತ್ಸಾ ಕೊಠಡಿ)ಗೆ ನುಗ್ಗಿದ ನಾಯಿಯೊಂದು ಶಿಶುವನ್ನು ಕಚ್ಚಿ ಕೊಂದಿರುವ ಘಟನೆ ಉತ್ತರಪ್ರದೇಶದ ಫಾರೂಖಾಬಾದ್‍ನಲ್ಲಿ ನಡೆದಿದೆ.
ಈ ಸಂಬಂಧ ಸದರ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ನಿನ್ನೆ ತಮ್ಮ ಪತ್ನಿ ಕಾಂಚನ್ ಅವರನ್ನು ಹೆರಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಂಚನ್ ಗಂಡುಮಗುವಿಗೆ ಜನ್ಮ ನೀಡಿದ್ದರು.

ಹೆರಿಗೆಯ ನಂತರ ಪತ್ನಿಯನ್ನು ವಾರ್ಡ್‍ಗೆ ಸ್ಥಳಾಂತರಿಸಲಾಯಿತು. ಆದರೆ ಮಗುವನ್ನು ನಂತರ ಸ್ಥಳಾಂತರಿಸುವುದಾಗಿ ಹೇಳಿದ್ದರು. ಆದರೆ ಮಗು ಹುಟ್ಟಿ ಎರಡು ಗಂಟೆಗಳ ಬಳಿಕ ಮಗು ಮೃತಪಟ್ಟಿರುವುದಾಗಿ ಸಿಬ್ಬಂದಿಗಳು ಹೇಳಿದರೆಂದು ಶಿಶುವಿನ ತಂದೆ ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ. ಆಪರೇಷನ್ ಥಿಯೇಟರ್‍ನ ಒಳಗಿನಿಂದ ಆಸ್ಪತ್ರೆಯ ಸಿಬ್ಬಂದಿ ನಾಯಿ ಓಡಿಸುತ್ತಿರುವುದನ್ನು ಗಮನಿಸಿದ್ದೇವೆ ಮತ್ತು ಮಗುವಿನ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಆಳವಾದ ಗಾಯಗಳಾಗಿತ್ತು ಎಂದು ಮಗುವಿನ ಕುಟುಂಬದವರು ಪೊಲೀಸರಿಗೆ ವಿವರಣೆ ನೀಡಿದ್ದಾರೆ.

ಈ ಸಂಬಂಧ ಡಾ.ಮೋಹಿತ್ ಗುಪ್ತಾ ಮತ್ತು ವಿತರಣಾ ಸಮಯದಲ್ಲಿ ಹಾಜರಿದ್ದ ಕೆಲವು ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆಸ್ಪತ್ರೆಯ ಮಾಲೀಕ ವಿಜಯ್‍ಪಟೇಲ್ ಅವರು ಮಗು ಸತ್ತು ಹುಟ್ಟಿದೆ ಎಂದು ಹೇಳಿದ್ದಾರೆ. ಆಕ್ರೋಶ: ವೈದ್ಯರು ಸುಳ್ಳು ಹೇಳುತ್ತಿದ್ದಾರೆ. ಆಪರೇಷನ್ ಕೊಠಡಿಗೆ ನುಗ್ಗಿದ ನಾಯಿ ಮಗುವನ್ನು ಕಚ್ಚಿ ಹಾಕಿದೆ. ಇದನ್ನು ಸಿಬ್ಬಂದಿಗಳು ಮರೆ ಮಾಚುತ್ತಿದ್ದಾರೆ ಎಂದು ಮಗುವಿನ ಹೆತ್ತವರು ಮತ್ತು ಪೋಷಕರು ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಆಸ್ಪತ್ರೆಯೂ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲೇ ನಡೆಸಲಾಗುತ್ತಿದೆ. ಆಸ್ಪತ್ರೆಯ ನೋಂದಣಿ ಕೂಡ ಆಗಿಲ್ಲ ಎಂದು ತಿಳಿದುಬಂದಿದೆ.

Facebook Comments