ಶ್ವಾನ ಪ್ರಿಯರೇ ನಿಮ್ಮನೆ ನಾಯಿ ಕದೀತಾರೆ ಹುಷಾರು..!

ಈ ಸುದ್ದಿಯನ್ನು ಶೇರ್ ಮಾಡಿ

Dog-Robbers
ಮೈಸೂರು, ಆ.21- ಈ ಮೊದಲು ಕಳ್ಳರು ಮನೆಗೆ ನುಗ್ಗಿ ಹಣ, ಆಭರಣ ದೋಚುತ್ತಿದ್ದರು. ಆದರೆ, ಇದೀಗ ದುಬಾರಿ ಬೆಲೆಯ ಮೂರು ಶ್ವಾನಗಳನ್ನು ಕಳವು ಮಾಡಿರುವ ಘಟನೆ ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಲಿಂಬಾಂಬುದಿಪಾಳ್ಯದ ಶರವಣ ಎಂಬುವವರು ಸಾಕಿದ್ದ ಮೂರು ಶ್ವಾನಗಳನ್ನು ಕಳ್ಳರು ಅಪಹರಿಸಿದ್ದಾರೆ.

ಒಂದು ಶ್ವಾನದ ಬೆಲೆ ಲಕ್ಷ ರೂ. ಎಂದು ಹೇಳಲಾಗಿದೆ. ಮೂರು ಶ್ವಾನಗಳ ಪೈಕಿ ಒಂದು ಶ್ವಾನವು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಪ್ರತಮ ಬಹುಮಾನ ಪಡೆದಿತ್ತು. ರಾತ್ರಿ ಕಳ್ಳರು ಇವರ ಮನೆಯ ಕಾಂಪೌಂಡ್ ಹಾರಿ ಒಳಗೆ ಬಂದು ಮೂರು ಶ್ವಾನಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಶರವಣ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Facebook Comments

Sri Raghav

Admin