ಬೊಗಳಿದ ನಾಯಿಗೆ ಏರ್‌ಗನ್‌ನಿಂದ ಗುಂಡು ಹಾರಿಸಿದ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.11- ನಗರದಲ್ಲಿ ಬೀದಿ ನಾಯಿಗಳ ಕಿರಿಕಿರಿಯಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಒಂದೇ ಸಮನೆ ಬೊಗಳುತ್ತಿದ್ದ ನಾಯಿಗೆ ಏರ್‌ಗನ್‌ನಿಂದ ಗುಂಡು ಹಾರಿಸಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆ ಮುಂದೆ ಬೊಗಳುತ್ತಿದ್ದ ನಾಯಿಯ ವರ್ತನೆಯಿಂದ ರೋಸಿಹೋದ ವ್ಯಕ್ತಿ ಏರ್‍ಗನ್‍ನಿಂದ ನಾಯಿಗೆ ಗುಂಡು ಹಾರಿಸಿದ್ದಾನೆ.

ಪರಿಣಾಮವಾಗಿ ನಾಯಿಯ ದೇಹದೊಳಗೆ ಮೂರು ಗುಂಡುಗಳು ಹೊಕ್ಕಿವೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ನಾಯಿಯನ್ನು ಜಯನಗರ ಪಶು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವೈದ್ಯರು ನಾಯಿಯನ್ನು ಪರೀಕ್ಷಿಸಿ ದೇಹದೊಳಗೆ ಹೊಕ್ಕಿದ್ದ ಗುಂಡನ್ನು ಹೊರತೆಗೆದು ಚಿಕಿತ್ಸೆ ನೀಡಿದ್ದಾರೆ.  ಘಟನೆ ಸಂಬಂಧ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments