ಕರೋನ ಸೋಂಕಿತರನ್ನು ಪತ್ತೆಮಾಡಲಿವೆ ಶ್ವಾನಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಜು.25- ಕೆಲವು ಶ್ವಾನ ಗಳಿಗೆ ತರಬೇತಿ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ನಾಯಿಗಳಿಂದ ಕರೋನವೈರಸ್ ಸೋಂಕಿತರನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ಜರ್ಮನಿಯ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದ ಅಧ್ಯಯನವೊಂದು ತಿಳಿಸಿದೆ.

ಜರ್ಮನಿಯ ಸಶಸ್ತ್ರ ಪಡೆಗಳ ಎಂಟು ನಾಯಿಗಳಿಗೆ ಒಂದು ವಾರ ತರಬೇತಿ ನೀಡಲಾಗಿದ್ದು ಶೇ. 94% ಯಶಸ್ಸು ಕಂಡಿರುವುದಾಗಿ ಪಶುವೈದ್ಯಕೀಯ ಮೆಡಿಸಿನ್ ವಿಶ್ವವಿದ್ಯಾಲಯದ ನೇತೃತ್ವದ ಪ್ರಾಯೋಗಿಕ ಯೋಜನೆಯೊಂದು ತಿಳಿಸಿದೆ.

1,000ಕ್ಕೂ ಹೆಚ್ಚು ಆರೋಗ್ಯವಂತ ಮತ್ತು ಸೋಂಕಿತ ಜನರ ಲಾಲಾರಸದಲ್ಲಿ ಕೋವಿಡ್ ಪತ್ತೆ ಮಾಡುವಂತೆ ಸಂಶೋಧಕರು ನಾಯಿಗಳಿಗೆ ಸೂಚಿಸಲಾಗಿತ್ತು.ನಾಯಿಗಳು ನಿರ್ದಿಷ್ಟ ವಾಸನೆಯನ್ನು ಕಂಡುಹಿಡಿಯಲು ಸಮರ್ಥವಾಗಿವೆ.

ಹೀಗಾಗಿ ರೋಗಿಯ ದೇಹದಲ್ಲಿನ ಚಯಾಪಚಯ ಪ್ರಕ್ರಿಯೆಗಳು ಸಂಪೂರ್ಣವಾಗಿ ಬದಲಾಗುವ ಕಾರಣ ಸೊಂಕಿತರನು ಪತ್ತೆ ಮಾಡಲು ಇದು ಸುಲಭವಾಗುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಾರೆನ್ ವಾನ್ ಕೊಯೆಕ್ರಿಟ್ಜ್- ಬ್ಲಿಕ್‍ವೆಡೆ ಯೋಜನೆಯ ಬಗ್ಗೆ ಯೂಟ್ಯೂಬ್ ವಿಡಿಯೋದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin