ನಾಯಿಗಳ ಹಿಂಡಿಗೆ 6 ಕುರಿಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಜು.1- ಕುರಿ ದೊಡ್ಡಿಗೆ ನುಗ್ಗಿದ ಬೀದಿ ನಾಯಿಗಳ ಹಿಂಡು 6 ಕುರಿಗಳನ್ನು ಸಾಯಿಸಿರುವ ಘಟನೆ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೋವಿಂದಪ್ಪ ಎಂಬುವರಿಗೆ ಸೇರಿದ ಕುರಿ ದೊಡ್ಡಿಗೆ ನುಗ್ಗಿದ ಬೀದಿ ನಾಯಿಗಳು ಸುಮಾರು 70,000ಕ್ಕೂ ಹೆಚ್ಚು ಬೆಲೆ ಬಾಳುವ ಕುರಿಗಳನ್ನು ಸಾಯಿಸಿವೆ.  ಇದರಿಂದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಗ್ರಾಮದಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಇವುಗಳನ್ನು ನಿಯಂತ್ರಿಸುವಂತೆ ಮನವಿ ಮಾಡಿದ್ದಾರೆ.

Facebook Comments