ನಿಮ್ಮ ಮುದ್ದಿನ ನಾಯಿಗೆ ಹಸಿ ಮಾಂಸದ ಆಹಾರ ಆರೋಗ್ಯಕರವೇ..?

ಈ ಸುದ್ದಿಯನ್ನು ಶೇರ್ ಮಾಡಿ

ನಾಯಿ ನಿಮ್ಮ ಫೇವರಿಟ್ ಸಾಕುಪ್ರಾಣಿಯೇ? ಅದರ ಆರೈಕೆ ಅತ್ಯುತ್ತಮ ವಿಧಾನದಲ್ಲಿ ಮಾಡಲು ಬಯಸಿದ್ದೀರಿ ಮತ್ತು ಅದನ್ನು ಆರೋಗ್ಯವಾಗಿಡಬಲ್ಲ ಆಹಾರ ಮಾತ್ರ ನೀಡಬೇಕು. ಮನುಷ್ಯರಿಗೆ ಆಹಾರ ಕ್ರಮವಿದ್ದರೆ ನಾಯಿಗಳಿಗೂ ಇದೆ. ಜನಪ್ರಿಯ ಆಹಾರಕ್ರಮಗಳು ಬಂದು ಹೋಗುತ್ತಿರುತ್ತದೆ. ಕೆಲವು ಮಂದಿ ಹಸಿ ಆಹಾರ ನಾಯಿಗೆ ಒಳ್ಳೆಯದೆಂದು ಹೇಳಿದರೆ ಮತ್ತೆ ಕೆಲವರು ಇದನ್ನು ಒಪ್ಪಿಕೊಳ್ಳುವುದಿಲ್ಲ.

ಪ್ರಾಣಿವೈದ್ಯರು ಹಸಿ ಆಹಾರಗಳನ್ನು ನಾಯಿಗಳಿಗಾಗಿ ತಯಾರಿಸಲಾಗುತ್ತದೆ ಮತ್ತು ಇದು ನಾಯಿಗಳ ಆರೋಗ್ಯಕ್ಕೆ ಒಳ್ಳೆಯದೆಂದು ನಂಬಲಾಗಿದೆ. ಹಸಿ ಮಾಂಸವು ನಾಯಿಗಳ ಹಲವಾರು ಕಾಯಿಲೆಗಳಾದ ಚರ್ಮದ ರೋಗ, ಸಂಧಿವಾತ ಇತ್ಯಾದಿಗಳನ್ನು ನಿವಾರಿಸುತ್ತದೆ ಎಂದು ಪ್ರಾಣಿ ವೈದ್ಯರು ಹೇಳಿದೆ. ಅವುಗಳ ಹಲ್ಲಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಎಂದೂ ಹೇಳಿದೆ.

ಆದರೆ ಇದರ ಬಗ್ಗೆ ವಿರೋಧಾತ್ಮಕ ಹೇಳಿಕೆಗಳಿವೆ. ಹಸಿ ಮಾಂಸದಿಂದ ನಾಯಿಗೆ ಹಲವಾರು ರೀತಿಯ ರೋಗಗಳು ಬರಬಹುದು ಎಂದು ಹೇಳುತ್ತಾರೆ. ಇದರಿಂದಾಗಿ ನೀವು ತುಂಬಾ ಗೊಂದಲಕ್ಕೆ ಒಳಗಾಗಿದ್ದೀರಿ ಮತ್ತು ನಾಯಿಗೆ ಏನು ತಿನ್ನಿಸಬೇಕು ಎನ್ನುವ ಬಗ್ಗೆ ಚಿಂತಿತರಾಗಿದ್ದೀರಲ್ಲವೇ? ಹಸಿ ಆಹಾರದ ಬಗ್ಗೆ ನೀವು ತುಂಬಾ ಗೊಂದಲಕ್ಕೊಳಗಾಗಿದ್ದರೆ ಇಲ್ಲಿ ಯಾವುದು ಆರೋಗ್ಯಕರ ಮತ್ತು ಯಾವುದು ಆರೋಗ್ಯಕರವಲ್ಲ ಎಂಬ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ.

# ಹಸಿ ಆಹಾರದ ಅನುಕೂಲಗಳು
* ನಾಯಿಗಳಿಗೆ ಹಸಿ ಆಹಾರ ನೀಡುವುದರಿಂದ ಅವುಗಳ ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಸಿ ಆಹಾರ ನಿಮ್ಮ ನಾಯಿಗೆ ಒಳ್ಳೆಯದಾ ಎಂದು ನೀವು ಚಿಂತಿಸುತ್ತಿದ್ದೀರಾ? ನಿಮ್ಮ ಕೈಯಲ್ಲಿರುವ ಒಂದು ತುಂಡು ಹಸಿ ಮಾಂಸವನ್ನು ನಾಯಿಗೆ ನೀಡಲು ಹಿಂಜರಿಬೇಡಿ. ಹಸಿ ಆಹಾರವು ನಾಯಿಯ ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ನೀವು ಭಾವಿಸಿದ್ದಕ್ಕಿಂತ ಹೆಚ್ಚು ಅದು ಆರೋಗ್ಯಕರವಾಗಿರುತ್ತದೆ.

* ನಾಯಿಗಳಿಗೆ ಹಸಿ ಆಹಾರ ಒಳ್ಳೆಯದೇ ಎಂದು ಕೆಲವರಿಗೆ ಸಂಶಯವಿದೆ. ಆದರೆ ಹಸಿ ಆಹಾರ ನಾಯಿಗೆ ನೀಡುವುದರಿಂದ ಸಿಗುವ ಲಾಭದ ಬಗ್ಗೆ ತಿಳಿದುಕೊಂಡಾಗ ಅವರಿಗೆ ಮನವರಿಕೆಯಾಗುತ್ತದೆ. ಹಸಿ ಆಹಾರವು ನಾಯಿಗಳಿಗೆ ತುಂಬಾ ಮುಖ್ಯ. ಯಾಕೆಂದರೆ ಇದರಿಂದ ನಾಯಿಗಳಿಗೆ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ. ಹಸಿ ಆಹಾರವು ನಿಮ್ಮ ನಾಯಿಗಳಿಗೆ ಒಳ್ಳೆಯದೇ ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಹೌದು. ಹಸಿ ಆಹಾರವು ನಾಯಿಗಳಲ್ಲಿ ತಾಜಾ ಉಸಿರನ್ನು ಉಂಟುಮಾಡುತ್ತದೆ.

* ಹಸಿ ಆಹಾರವು ನಾಯಿಯ ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಅವುಗಳ ಹಲ್ಲು ಹಾಗೂ ಒಸಡು ಬಲಿಷ್ಠವಾಗುತ್ತದೆ.  ನಾಯಿಗಳಿಗೆ ಹಸಿ ಆಹಾರ ನೀಡುವ ಬಗ್ಗೆ ನಿಮ್ಮಲ್ಲಿ ಇನ್ನೂ ಸಂಶಯಗಳಿದ್ದರೆ ಅವುಗಳ ಅಲರ್ಜಿ ಮುಕ್ತ ಚರ್ಮವನ್ನು ನೋಡಿ ನಿಮಗೆ ಹಸಿ ಆಹಾರದ ಲಾಭಗಳ ಮನವರಿಕೆಯಾಗಿರಬಹುದು. ನಾಯಿಗಳಿಗೆ ಇದರಿಂದ ಆರೋಗ್ಯಕರ ಜೀರ್ಣಾಂಗ ಜೀವಕೋಶ ಸಿಗುತ್ತದೆ. ಅದು ತನ್ನ ತೂಕದ ಮೇಲೆ ನಿಯಂತ್ರಣ ಸಾಧಿಸಿ ಚಟುವಟಿಕೆಯಿಂದ ಇರಲಿದೆ.

Facebook Comments