ಯುಎಸ್ ಓಪನ್ : ಡೊಮಿನಿಕ್ ಥೀಮ್‍ಗೆ ಚೊಚ್ಚಲ ಗ್ರ್ಯಾನ್ ಸ್ಲ್ಯಾಮ್ ಕಿರೀಟ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.14- ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‍ನ ರೋಚಕ ಫೈನಲ್ ಹಣಾಹಣಿಯಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ವಿಜೇತರಾಗಿ ಪ್ರಥಮ ಬಾರಿಗೆ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿದ್ದಾರೆ.

ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನ ಅರ್ಥರ್ ಆಶೆ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ 27 ವರ್ಷದ ಡೊಮಿನಿಕ್ ಥೀಮ್, ಜರ್ಮನಿಯ ಪ್ರಬಲ ಪ್ರತಿಸ್ರ್ಪ 23ರ ಹರೆಯದ ಅಲೆಗ್ಸಾಂಡರ್ ಝೈರವ್ ಅವರನ್ನು ಮಣಿಸಿ ಪ್ರಥಮ ಬಾರಿಗೆ ಪ್ರಶಸ್ತಿ ಗೆದ್ದರು.

ಆರಂಭಿಕ ಎರಡು ಸೆಟ್‍ಗಳಲ್ಲಿ ಪರಾಭವಗೊಂಡರೂ ಫೈನಲ್‍ನಲ್ಲಿ ಜಯಿಸಿರುವ ಡೊಮಿನಿಕ್ 71 ವರ್ಷಗಳ ಬಳಿಕ ಈ ಸಾಧನೆ ಮಾಡಿದ್ದಾರೆ. ಟೆನಿಸ್ ಪಂದ್ಯದಲ್ಲಿ 1949ರಲ್ಲಿ ಈ ರೀತಿಯ ಫಲಿತಾಂಶ ಲಭಿಸಿತ್ತು.

ಸತತ ನಾಲ್ಕು ತಾಸುಗಳು ಮತ್ತು ಎರಡು ನಿಮಿಷಗಳ ಅಂತಿಮ ಹೋರಾಟದಲ್ಲಿ ಡೊಮಿನಿಕ್ ಅವರು ಅಲೆಗ್ಸಾಂಡರ್ ಅವರನ್ನು 2-6. 4-6, 6-4. 6-3, 7-6(6) ಸೆಟ್‍ಗಳಿಂದ ಮಣಿಸಿ ಯುಎಸ್ ಓಪನ್ ಪಶಸ್ತಿ ಗೆದ್ದುಕೊಂಡರು. ಈ ಮೂಲಕ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ನ್ಯೂಯಾರ್ಕ್‍ನಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಅಭಿಮಾನಗಳ ಪ್ರವೇಶಕ್ಕೆ ನಿರ್ಬಂಧ ವಿಸಲಾಗಿತ್ತು.ಮೊನ್ನೆ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‍ನಲ್ಲಿ ಜಪಾನ್‍ನ ನವೋಮಿ ಒಸಾಕಾ ಜಯಶೀಲರಾದರು.

ಬೆಲಾರಸ್‍ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸುವ ಮೂಲಕ ನವೋಮಿ ಮೂರನೇ ಬಾರಿಗೆ ಗ್ರ್ಯಾನ್ ಸ್ಲಾಮ್ ಕಿರೀಟ ಮುಡಿಗೇರಿಸಿದರು. ರೋಚಕ ಹಣಾಹಣಿಯ 1 ಗಂಟೆ 53 ನಿಮಿಷಗಳ ಅಂತಿಮ ಹೋರಾಟದಲ್ಲಿ ನವೋಮಿ ಒಸಾಕಾ ಅವರು ವಿಕ್ಟೋರಿಯಾ ಅಜರೆಂಕಾ ಅವರನ್ನು 1-6, 6-3, 6-3 ಸೆಟ್‍ಗಳಿಂದ ಮಣಿಸಿ ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡರು.

Facebook Comments

Sri Raghav

Admin