ಕಾನೂನು ಹೋರಾಟ ಮುಂದುವರೆಸುತ್ತೇನೆ : ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಡಿ.1-ಟ್ರಂಪ್ ಭದ್ರಕೋಟೆ ಎಂದೇ ಬಿಂಬಿಸಲಾಗಿದ್ದ ಆರಿಜೋನಾ ಮತ್ತು ವಿಸ್ಕನ್ಸಿನ್ ರಾಜ್ಯಗಳಲ್ಲೂ ಜೋ ಬೈಡೆನ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.  ಕಳೆದ 2016ರ ಚುನಾವಣೆಯಲ್ಲ ಟ್ರಂಪ್ ಈ ಎರಡು ರಾಜ್ಯಗಳಲ್ಲೂ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬೈಡೆನ್ ಗೆಲುವು ಸಾಧಿಸಿದ್ದರೂ ಅದನ್ನು ಟ್ರಂಪ್ ಒಪ್ಪದೆ ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಮರು ಎಣಿಕೆಗೆ ಒತ್ತಾಯಿಸಿದ್ದರು.

ಟ್ರಂಪ್ ಅರೋಪದ ಬೆನ್ನಲ್ಲೇ ಬೈಡೆನ್ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎರಡು ರಾಜ್ಯಗಳಲ್ಲಿ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಗೆಲುವು ಸಾಧಿಸಿರುವ ಬಗ್ಗೆ ಅಲ್ಲಿನ ಗವರ್ನರ್‍ಗಳು ಪ್ರಮಾಣ ಪತ್ರ ವಿತರಿಸುವ ಮೂಲಕ ಎಲ್ಲಾ ಉಹಾಪೋಹಗಳಿಗೆ ಬ್ರೇಕ್ ಹಾಕಿದ್ಧಾರೆ.

ಆದರೆ, ಈ ಫಲಿತಾಂಶವನ್ನು ಒಪ್ಪದ ಟ್ರಂಪ್ ಚುನಾವಣೆಯಲ್ಲಿ ಭಾರಿ ಆಕ್ರಮವಾಗಿದೆ. ಹೀಗಾಗಿ ನನ್ನ ಪರವಾಗಿ ಮತ ಚಲಾಯಿಸಿರುವ 74 ಮಿಲಿಯನ್ ಜನರ ಪರವಾಗಿ ನನ್ನ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಟ್ರಂಪ್ ತಿಳಿಸಿದ್ದಾರೆ.

Facebook Comments