ಅಮೆರಿಕ ಅಧ್ಯಕ್ಷ ಟ್ರಂಪ್ ವಾಗ್ದಂಡನೆಗೆ ವೇದಿಕೆ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಡಿ.14 : ಅಧ್ಯಕ್ಷೀಯ ಚುನಾವಣೆಯಲ್ಲಿ ಉಕ್ರೇನ್ ಹಸ್ತಕ್ಷೇಪಕ್ಕೆ ಅವಕಾಶ ನೀಡಿದ್ದರೆನ್ನಲಾದ ಕಾರಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆಗೆ (ಮಹಾಭಿಯೋಗ) ಅಂತಿಮ ವೇದಿಕೆ ಸಜ್ಜಾಗಿದೆ.

ಈ ನಡುವೆ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಟ್ರಂಪ್, ಇದು ನ್ಯಾಯಸಮ್ಮತವಲ್ಲ. ನನ್ನ ನೇತೃತ್ವದ ಆಡಳಿತದಲ್ಲಿ ದೇಶಕ್ಕೆ ಉತ್ತಮ ಕಾರ್ಯಗಳಾಗಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನನ್ನನ್ನು ಮಹಾಭಿಯೋಗಕ್ಕೆ ಒಳಪಡಿಸುತ್ತಿರುವುದು ಸರಿಯಲ್ಲ ಮತ್ತು ನ್ಯಾಯಸಮ್ಮತವಲ್ಲ ಎಂದು ಟ್ರಂಪ್ ನಿನ್ನೆ ತಡರಾತ್ರಿ ಟ್ವಿಟ್‍ನಲ್ಲಿ ತಿಳಿಸಿದ್ದಾರೆ.

ನಿನ್ನೆ ಇಡೀ ದಿನ ವಾಷಿಂಗ್ಟನ್‍ನಲ್ಲಿ ನಡೆದ ಈ ಸಂಬಂದದ ಬೆಳವಣಿಗೆಯಲ್ಲಿ ಪ್ರಮುಖ ಕಾಂಗ್ರೆಸ್ ಸಮಿತಿ ಅಮೆರಿಕ ಅಧ್ಯಕ್ಷರ ವಿರುದ್ಧ ಕಾನೂನಿನ ಎರಡು ಅಂಶಗಳ ಅನ್ವಯ ವಾಗ್ದಾಂಡನೆ ವಿಧಿಸಲು ಸಮ್ಮತಿ ನೀಡಿದೆ. ಟ್ರಂಪ್ ವಿರುದ್ಧದ ಮಹಾಭಿಯೋಗವು ಈಗ ಪ್ರತಿನಿಧಿಗಳ ಸದನದ ಮುಂದಿದೆ. ಇಲ್ಲಿ ಪ್ರತಿಪಕ್ಷವಾದ ಡೆಮೊಕ್ರಾಟಿಕ್ ಪಾರ್ಟಿ ಬಹುಮತ ಹೊಂದಿದ್ದು, ಅಮೆರಿಕ ಅಧ್ಯಕ್ಷರನ್ನು ಚಿಂತೆಗೀಡು ಮಾಡಿದೆ.

ಸದನದಲ್ಲಿ ವಾಗ್ದಂಡನೆ ವಿಚಾರಣೆಗೆ ಮಂಡನೆಯಾಗಿ ಅನುಮೋದನೆ ದೊರೆತರೆ ಅದು 100 ಸದಸ್ಯ ಬಲದ ಅಮೆರಿಕ ಸೆನೆಟ್ ಮುಂದೆ ಮುಂದಿನ ಕ್ರಮಕ್ಕಾಗಿ ಬರಲಿದೆ. ಇಲ್ಲಿ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಬಹುಮತ ಹೊಂದಿರುವುದು ಗಮನಾರ್ಹ. ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.

Facebook Comments