ಭಾರತದಲ್ಲಿ ನಡೆಯಲಿದೆ “ಹೌಡಿ ಟ್ರಂಪ್” ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, (ಪಿಟಿಐ)-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ದಿನಾಂಕ ನಿಗದಿಯಾಗಿದ್ದು, ಫೆ.21 ರಿಂದ 24ರವರೆಗೆ ಅವರು ಪ್ರವಾಸ ಕೈಗೊಳ್ಳಲಿದ್ದಾರೆ.
ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ವಿಶೇಷ ಸಾರ್ವಜನಿಕ ರ‍್ಯಾಲಿ (ಹೌಡಿ ಟ್ರಂಪ್)ಯಲ್ಲಿ ಭಾಗವಹಿಸುವರು.

ವಿವಿಧ ಕ್ಷೇತ್ರಗಳಲ್ಲಿ ಅಮೆರಿಕ ಮತ್ತು ಭಾರತ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಮಹತ್ವದ ಮಾತುಕತೆ ನಡೆಯಲಿದ್ದು, ಕೆಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. ದೆಹಲಿಯ ಐಟಿಸಿ ಮೌರ್ಯ ಸಪ್ತ ತಾರಾ ಹೊಟೇಲ್‍ನಲ್ಲಿ ಟ್ರಂಪ್ ಮತ್ತು ಅವರ ನೇತೃತ್ವ ನಿಯೋಗ ವಾಸ್ತವ್ಯ ಹೂಡಲಿದೆ.

Facebook Comments