ಚೀನಿ ಸರಕು ಮೇಲೆ 50 ಶತಕೋಟಿ ಡಾಲರ್ ಸುಂಕ ವಿಧಿಸಿ ಗುನ್ನ ಕೊಟ್ಟ ಟ್ರಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಜೂ.15-ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ಮತ್ತಷ್ಟು ತೀವ್ರಗೊಂಡಿದೆ. ಚೀನಾ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 50 ಶತಕೋಟಿ ಡಾಲರ್ ಮೊತ್ತದ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಸಮ್ಮತಿ ನೀಡಿದ್ದಾರೆ. ಈ ಹೊಸ ಬೆಳವಣಿಗೆಯಿಂದ ವಿಶ್ವದ ಎರಡು ಬೃಹತ್ ಆರ್ಥಿಕತೆ ರಾಷ್ಟ್ರಗಳ ನಡುವೆ ವ್ಯಾಪಾರ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಂಡಿದೆ.

ಈ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಟ್ರಂಪ್ ವಿವಿಧ ಇಲಾಖೆಗಳ ಸಚಿವರು ಹಾಗೂ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. 90 ನಿಮಿಷಗಳ ಸಮಾಲೋಚನೆ ನಂತರ ಚೀನಿ ಸರಕುಗಳ ಮೇಲೆ 50 ಶತಕೋಟಿ ಡಾಲರ್‍ಗಳ ತೆರಿಗೆ ವಿಧಿಸಲು ಅವರು ಸಮ್ಮತಿಸಿದರು. ಕಾರು, ವಿಮಾನಗಳು, ಸೋಯಾಬೀನ್ ಸೇರಿದಂತೆ ಅಮೆರಿಕದ ಉತ್ಪನ್ನಗಳ ಮೇಲೆ ಭಾರೀ ಮೊತ್ತದ ಕರಭಾರ ವಿಧಿಸಲಾಗಿದೆ.  ಈ ಹಿಂದೆ ಚೀನಾ ಕೂಡ ಅಮೆರಿಕ ಆಮದು ಮಾಡಿಕೊಳ್ಳುವ ತನ್ನ ವಸ್ತುಗಳ ಮೇಲೆ 50 ಶತಕೋಟಿ ಡಾಲರ್ ಸುಂಕ ವಿಧಿಸುವುದಾಗಿ ತಿಳಿಸಿತ್ತು. ಇದರೊಂದಿಗೆ ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

Facebook Comments

Sri Raghav

Admin